ಸಂತ ಸೇವಾಲಾಲ್ ಜಯಂತಿ ಆಚರಣೆ

0
25

ಕಲಬುರಗಿ : ತಾಲ್ಲೂಕಿನ ನಂದಿಕೂರ ಗ್ರಾಮದಲ್ಲಿ ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿಯ ನಿಯಮಿತ ವತಿಯಿಂದ ಸಂತ ಸೇವಾಲಾಲ ಮಹಾರಾಜರ 284ನೇ ಜಯಂತೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ನಂದಿಕೂರದ ಶಿವಲಿಂಗ ಶರಣರು ಮಾತನಾಡಿ, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಬಂಜಾರ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ ಮಹಾರಾಜರು ದಾವಣಗೆರೆ ಜಿಲ್ಲೆ ಹೊನ್ನಾಳಿಯ ಬೆಳಗುತ್ತಿ ಹೋಬಳಿಯ ಸರಗೊಂಡನ ಕೊಪ್ಪದ ಫೆಬ್ರುವರಿ 15 ರಂದು ಜನಸಿದರು. ತಂದೆ ಭೀಮ ನಾಯಕ ತಾಯಿ ಧರ್ಮಿನಿ ಮಾತೆ ಮಗನಾಗಿ ಜಗದಂಬೆಯ ಆರಾಧಕರಾಗಿ ಜನಿಸಿರುವದು ನಮಗೆ ಬಹಳ ಹೆಮ್ಮೆಯ ವಿಷಯ ಎಂದು ಹೇಳಿದರೂ.

Contact Your\'s Advertisement; 9902492681

ಬ್ರಹ್ಮಚಾರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು ತಮ್ಮ ಲೀಲೆಗಳ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದರು ಸತ್ಯ , ಅಹಿಂಸೆ , ತ್ಯಾಗ ಮತ್ತು ನೀತಿ ಮನೋಭಾವದ ಮಾತುಗಳನ್ನು ಜನತೆಗೆ ವ್ಯಸನ ಮುಕ್ತರಾಗಿ ಎಂದು ಭೋದಿಸಿದರು ಎಂದರು.

ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಅಧ್ಯಕ್ಷ ಪವನಕುಮಾರ ವಳಕೇರಿ ಅವರು ಮಾತನಾಡಿ, ಸೇವಾಲಾಲ್ ಮಹಾರಾಜರು ಲಿಂಗೈಕರಾದರು ಸ್ಥಳದಲ್ಲಿ ಗದ್ದುಗೆಯ ಇದ್ದೆ ಪ್ರತಿ ದಿನ ಪೂಜೆ ಪುನಸ್ಕಾರಗಳು ನಡೆಯುತ್ತವೆ ಎಂದು ಹೇಳಿದರು.

ಪೌರಾಗಡ ಮಹಾರಾಷ್ಟ್ರ. ಸ್ವಾಗತ ಅನಿಲ ಕೊರಬಾ, ವಂದನಾರ್ಪಣೆ ಸಂಜು ಕುಮಾರ ಪವಾರ ಮಾಡಿದರು.
ಕಾರ್ಯಕ್ರಮದಲ್ಲಿ ಬೋಜರಾಜ್ ಮಠ, ಶ್ರೀಮಂತ ರಾಥೋಡ್, ರೋಷನ್ ಬಿ, ಗೀತಾ ಬಾಯಿ, ಗೋದಾವರಿ ಬಾಯಿ, ವಿಠಬಾಯಿ ಪಾಟೀಲ್, ಸಂಜುಕುಮಾರ್ ಪವರ್, ಸೋನು ತೇಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here