ಹಿಂಸೆಗೆ ಕರೆ ನೀಡುವವರನ್ನು ಕೂಡಲೇ ಬಂಧಿಸಿ, ಜೈಲಿಗೆ ತಳ್ಳಿ; ಕೆ ನೀಲಾ

0
61

ಕಲಬುರಗಿ: ನಿನ್ನೆ ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೇರವಾಗಿ ಹಿಂಸೆಗೆ ಕರೆ ನೀಡಿದ್ದಾರೆ. ಕಟೀಲ್‌ ಹೇಳಿಕೆಯ ಬಗ್ಗೆ ರಾಷ್ಟ್ರೀಯ ಚಾನೆಲ್‌ಗಳಲ್ಲಿ ತೀವ್ರವಾದ ಆಕ್ರೋಶವೂ ವ್ಯಕ್ತವಾಗಿದೆ. ಈ ಇಬ್ಬರೂ ಮುಖಂಡರ ಮೇಲೆ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಒತ್ತಾಯಿಸಿದ್ದಾರೆ.

ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು’ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊಪ್ಪಳದಲ್ಲಿ ಹೇಳಿದ್ದರೆ, ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಡ್ಯದ ಸಾತನೂರಲ್ಲಿ ಹೇಳಿದ್ದಾರೆ. ಇವರಿಬ್ಬರ ಭಾಷಣದಿಂದ ಪ್ರೇರಿತನಾದ ಯಾರೋ ಒಬ್ಬನು ನೇರವಾಗಿ ಹಿಂಸೆಗೆ ಇಳಿದರೂ ಇಳಿಯಬಹುದು. ಗೌರಿ ಮತ್ತು ಕಲಬುರ್ಗಿ ಕೊಲೆ ಪ್ರಕರಣದಲ್ಲಿ ಈ ನಾಡು ಇದನ್ನು ಕಂಡಿದೆ.

Contact Your\'s Advertisement; 9902492681

ಚುನಾವಣೆ ಹತ್ತಿರ ಬರುತ್ತಿರುವಾಗ ತನ್ನ ಕೆಲಸಗಳಿಂದ ಜನಸಾಮಾನ್ಯರ ಒಲವು ಗಳಿಸಿಕೊಳ್ಳದ ಬಿಜೆಪಿ ತನ್ನ ಮುಖಂಡರ ಮೂಲಕ ದ್ವೇಷ ಹರಡುವ, ಹಿಂಸಾಚಾರಕ್ಕೆ ಉತ್ತೇಜನ ನೀಡುವ ಚಿಲ್ಲರೆ ರಾಜಕಾರಣದಲ್ಲಿ ನಿರತವಾಗಿರುವುದು ಖಂಡನೀಯವಾಗಿದೆ.

ಬಿಜೆಪಿ ಇದುವರೆಗೆ ಗಳಿಸಿರುವ ಅಧಿಕಾರವೆಲ್ಲ ಜನರ ರಕ್ತ ಹರಿಸುವ, ಹೆಣಗಳನ್ನು ಉರುಳಿಸುವ ಹೇಯ ರಾಜಕಾರಣದ ಫಲವೇ ಆಗಿದೆ. ಜನರನ್ನು ಕಚ್ಚಾಟಕ್ಕೆ ಇಳಿಸಿ ಪಡೆದ ಅಧಿಕಾರವನ್ನು ಅದೇ ಜನರನ್ನು ದಿವಾಳಿ ಮಾಡಲು ಮತ್ತು ಅದಾನಿ, ಅಂಬಾನಿಯಂತಹ ಕ್ರೋನಿ ಬಂಡವಾಳದಾರರನ್ನು ಕೊಬ್ಬಿಸಲು ಬಿಜೆಪಿ ಬಳಸುತ್ತಿದೆ. ಇದನ್ನು ನಾಡಿನ ಜನರೆಲ್ಲ ಅರ್ಥ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಬೇಕೆಂದು ಜನತೆಯಲ್ಲಿ ಮನವಿ ಮಾಡಿ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here