ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಾಂಸ್ಕøತಿಕ ಗತವೈಭವ ಸಾರುವ `ಕಲ್ಯಾಣ ಕರ್ನಾಟಕ ಉತ್ಸವ” ದಲ್ಲಿ ಈ ಭಾಗದ ಕಲೆ, ಸಂಸ್ಕೃತಿ, ವೈಭವ ಬಿಂಬಿಸುವ ನಿಟ್ಟನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಈ ಭಾಗದ ಜನರಿಗೆ ಸಂತೋಷದ ವಿಷಯವಾಗಿದ್ದು, ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿ ಎಂದು ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆ ಅಧ್ಯಕ್ಷ ಡಾ.ಸಂಪತ್ ಜೆ, ಹಿರೇಮಠ ನೇತೃತ್ವದಲ್ಲಿ ಶಾಸಕರು ಹಾಗೂ ಕೆ.ಕೆ .ಆರ್.ಡಿ. ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರಿಗೆ ಮನವಿ ಸಲ್ಲಿಸಿದರು.
ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದರು ಅದೇ ರೀತಿಯಾಗಿ ಕಳೆದ ಹಂಪಿ ಉತ್ಸವದಲ್ಲಿ “ಯಕ್ಷಗಾನ, ನೃತ್ಯ ಕೆ.ಕೆ .ಆರ್.ಡಿ. ಅಸ್ತಿತ್ವಕ್ಕೆ ಬಂದ ನಂತರ ಮೊದಲು ಬಾರಿಗೆ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಈ ಭಾಗದ ಕಲೆ, (ಪುರವಂತರು) ಈ ಭಾಗದ ಕಲಾವಿದರಿಗೆ ಅವಕಾಶ ಕಲ್ಪಿಸಿ ಕೊಡುವುದರಿಂದ ಈ ಭಾಗದ ಕಲೆಗೆ ಪೆÇ್ರೀತ್ಸಾಹ ಮತ್ತು ಗೌರವ ಕಲ್ಪಸಿದಂತೆ ಆಗುತ್ತದೆ ಎಂದು ನಮ್ಮ ಜಂಗಮ ಯುವ ಪಡೆಯ ಬಹುದೊಡ್ಡ ಆಸೆ ಇರುತ್ತದೆ.
ಅದೇ ರೀತಿಯಾಗಿ ಎಲೆ ಮರೆ ಕಾಯಿಯಂತ ಯಾವುದೇ ಅಪೇಕ್ಷೆ ಇಲ್ಲದೇ ಸಮಾಜ ಒಳತಿಗಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸುವ ಕಾರ್ಯಕ್ರಮ ಮಾಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ; ಮಹಾಲಿಂಗ ಹಿರೇಮಠ, ಮಂಜು ಮಠಪತಿ (ಕುಸನೂರ), ವಿಜಯಲಕ್ಷ್ಮೀ ಹಿರೇಮಠ, ಅಂಬರೇಶ ಮಠಪತಿ, ಸಿದ್ಧಅಂಗಯ್ಯ ಮಠ, ಶ್ರೀಕಾಂತ ಹಿರೇಮಠ, ವಿರೇಶ ವೀರಣಗುಡಿ, ನಾಗಯ್ಯ ಮಠಪತಿ ಇದ್ದರು.