ಕಲಬುರಗಿ; ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕು (ರಾತ್ರಿ) ಎಂದು ಒತ್ತಾಯಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ಮುಖಂಡರು ನಗರದ ರೈಲ್ವೆ ನಿಲ್ದಾಣದಲ್ಲಿ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ನರೇಶ್ ಲಾಲ್ವಾನಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಲಬುರಗಿಯಿಂದ ಸೋಲಾಪುರ ಮೂಲಕ ನಾಗಪುರಕ್ಕೆ ಹೊಸ ರೈಲು ಆರಂಭಿಸಬೇಕು. ಕಲಬುರಗಿಯಿಂದ ಗುಂತಕಲ್, ಬಳ್ಳಾರಿ, ಅರಸೀಕೆರೆ ಮೂಲಕ ಮಂಗಳೂರಿಗೆ ಹೊಸ ರೈಲು ಆರಂಭಿಸಬೇಕು. ಕಲಬುರಗಿ-ಹೈದರಾಬಾದ್ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ಪ್ರತಿದಿನ ಆರಂಭಿಸಬೇಕು. ಸೋಲಾಪುರ- ಕಲಬುರಗಿ-ಗುಂತಕಲ್ ಡೆಮು ನಿತ್ಯ ಆರಂಭಿಸಬೇಕು. ಎಂದು ಒತ್ತಾಯಿಸಿದರು.
2014ರಲ್ಲಿ ಎರಡನೇ ಪಿಟ್‍ಲೈನ್ (ಸೋಲಾಪುರ ಅಂತ್ಯದ ಕಡೆಗೆ) ಅನುಮೋದಿಸಲಾಯಿತು ಮತ್ತು ಟೆಂಡರ್ ಕರೆಯಲಾಯಿತು. ಆದಾಗ್ಯೂ ಅದನ್ನು ರದ್ದುಗೊಳಿಸಲಾಯಿತು. ಈ ಯೋಜನೆಯನ್ನು ಮರುಪ್ರಾರಂಭಿಸಬೇಕು. ಕಲಬುರಗಿ ಜಂಕ್ಷನ್, ಮತ್ತು ವಾಡಿ ರೈಲ್ವೆ ನಿಲ್ದಾಣಗಳನ್ನು ಆಧುನಿಕ ರೀತಿಯಲ್ಲಿ ಮರುರೂಪಿಸಬೇಕು ಎಂದು ಆಗ್ರಹಿಸಿದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್ ನಡಗೇರಿ, ಬಾಬು ಮದನಕ, ಸೂರ್ಯಪ್ರಕಾಶ್ ಚಾಳಿ, ಅವಿನಾಶ್ ಕಪನೂರ, ಪ್ರವೀಣ ಖೆಮನ್, ಜೈಭೀಮ್ ಮಾಳಗೆ, ಶಿವು ಗೋಕುಲ್, ಅರುಣ್ ಇನಾಂದಾರ್ ಇತರರಿದ್ದರು.