ಕಲ್ಯಾಣ ಕರ್ನಾಟಕ ಉತ್ಸವ; ಶಿಲಾಶಿಲ್ಪ ಶಿಬಿರಕ್ಕೆ ಚಾಲನೆ

0
324

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದ ಅವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಗರೀಮಾ ಪಂವಾರ ಶಿಲೆಯನ್ನು ಕೆತ್ತುವುದರ ಮೂಲಕ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಡಿಸಿಪಿಗಳಾದ ಅಡ್ಡುರು ಶ್ರೀನಿವಾಸಲು, ಚಂದ್ರಪ್ಪ ಕುಲಸಚಿವ ಡಾ. ಶರಣಪ್ಪ ಸತ್ಯಂಪೇಟೆ, ಡಿಡಿಪಿಐ ಸಕ್ರೆಪ್ಪಗೌಡ ಜಿ.ಬಿರಾದಾರ ಆಗಮಿಸಿದ್ದರು.

ಹಿರಿಯ ಶಿಲ್ಪಕಲಾವಿದರು ಚಂದ್ರಶೇಖರ ವೈ. ಶಿಲ್ಪಿ, ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಲಿಂಗಪ್ಪ ಡಿ.ಕೇರಿ, ಸಹ ಸಂಚಾಲಕರಾಗಿ ಮಹೇಶ ಡಿ.ತಳವಾರ, ದೌಲತರಾಯ ದೇಸಾಯಿ ಸಿದ್ದು ಮರಗೋಳ, ರಾಜೇಶ ನೀಲಹಳ್ಳಿ, ಕಲ್ಯಾಣ ಕರ್ನಾಟಕದ ಹದಿನೈದು ಪ್ರಧಾನ ಶಿಲ್ಪಿಗಳು, ಹದಿನೈದು ಸಹಾಯಕ ಶಿಲ್ಪಿಗಳು ಭಾಗವಹಿಸಲಿದ್ದು ಸಂಪ್ರದಾಯಿಕÀ ಶಿಲ್ಪಕ್ಕೆ ಮೈಸೂರಿನಿಂದ ಹಾಗು ಸಮಕಾಲೀನ ಶಿಲ್ಪಗಳಿಗೆ ಬಾಗಲಕೋಟೆಯಿಂದ ಶಿಲೆಗಳನ್ನು ತರಿಸಲಾಗಿದೆ. ಸಾರ್ವಜನಿಕ ವೀಕ್ಷಣೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇರಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here