ಭಾಲ್ಕಿ; ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಡೆಯುವ ಜಿ.ಎಚ್.ಶಿವಮಠ ನಿಡಗುಂದಿ ಐ.ಟಿ.ಐ. ಕಾಲೇಜದಲ್ಲಿ ಜಿ.ಎಚ್.ಶಿವಮಠ ಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿರುವ ಶರಣ ಬಸವರಾಜ ಮರೆ ಅವರು ಶಿವಮಠ ಅವರ ಅನೇಕ ನೆನಪುಗಳನ್ನು ಮೆಲುಕು ಹಾಕಿದರು. ಜಿ.ಎಚ್.ಶಿವಮಠ ಅವರು ಅಪ್ಪಟ ಶರಣಜೀವಿಗಳು ಆಗಿದ್ದರು. ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಮೇಲೆ ಮತ್ತು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮೇಲೆ ಅಪಾರ ಭಕ್ತಿ, ಶ್ರದ್ಧೆಯುಳ್ಳವರಾಗಿದ್ದರು. ಕಾಯಕನಿಷ್ಠರಾದ ಅವರು ಮನೆಗೆ ಬಂದವರಿಗೆ ಅಂಬಲಿಯನ್ನು ಕೊಡುವ ಮೂಲಕ ದಾಸೋಹ ಮಾಡುವ ವಿಶಿಷ್ಟ ಪದ್ಧತಿ ರೂಢಿಸಿಕೊಂಡಿದ್ದರು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಮಕ್ತುಂಬಿ ಅವರು ಜಿ.ಎಚ್. ಶಿವಮಠ ಅವರು ಹಿರೇಮಠ ಸಂಸ್ಥಾನದ ಜೊತೆ ಹೊಂದಿರುವ ಆತ್ಮೀಯ ಸಂಬಂಧವನ್ನು ಬಿಚ್ಚಿಟ್ಟರು. ಮನೆ ಹೊರಗೆ ಒಂದು ಫಲಕವನ್ನು ಹಾಕಿ ದಿನಾಲು ಒಂದು ವಚನವನ್ನು ಬರೆಯುವ ಶಿವಮಠ ಅವರು ವಚನಗಳ ಮೇಲೆ ನಿಷ್ಠೆ ಇಟ್ಟಿದ್ದವರು. ದಿನಾಲು ವಚನ ಪಠಣ ಮಾಡುತ್ತ ವಚನ ಜೀವನವೇ ಸಾಗಿಸುತ್ತಿದ್ದರು. ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರನ್ನು ನೆನೆಸುತ್ತ ನಾವು ವಚನನಿಷ್ಠೆಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಸಂಜುಕುಮಾರ ಬಿರಾದಾರ, ವಿಶ್ವನಾಥ ಪಕ್ಕಾ, ಬಸವರಾಜ ರಂಜರೆ, ದೇವರಾಜ ಕುಂಬಾರ, ಬಸವರಾಜ ಗೊರನಾಳೆ, ಶರಣಪ್ಪ, ರಾಜಕುಮಾರ ಕಲ್ಲಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸುರೇಶ ಪುರಂತ ಸ್ವಾಗತಿಸಿದರು. ರಾಜಕುಮಾರ ಸ್ವಾಮಿ ನಿರೂಪಿಸಿದರು. ಬಭ್ರುವಾನ ಭೂರೆ ವಂದನಾರ್ಪಣೆ ಮಾಡಿದರು. ಐ.ಟಿ.ಐ. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.