ಶರಣಬಸವ ವಿಶ್ವವಿದ್ಯಾಲಯದಲ್ಲಿ ನವೀನ ನಿರ್ವಹಣಾ ವಸ್ತು ಸಂಗ್ರಹಾಲಯ

0
120

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯ (ಮಹಿಳೆಯರಿಗಾಗಿ ಪ್ರತ್ಯೇಕವಾಗಿ) ದಲ್ಲಿ, ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ (ಃಃಒ) ಮತ್ತು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಒಃಂ) ಕೋರ್ಸ್‍ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು ನವೀನ ಮತ್ತು ಸಂವಾದಾತ್ಮಕ ನಿರ್ವಹಣಾ ವಸ್ತು ಸಂಗ್ರಹಾಲಯವನ್ನು ಹೊರತಂದಿದೆ.

ವಸ್ತು ಸಂಗ್ರಹಾಲಯವನ್ನು ಬುಧವಾರ ಔಪಚಾರಿಕವಾಗಿ ಉದ್ಘಾಟಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಈ ವಸ್ತುಸಂಗ್ರಹಾಲಯದ ಸ್ಥಾಪನೆಗೆ ಶ್ರಮಪಟ್ಟ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಹಾಗೂ ವ್ಯವಹಾರ ಅಧ್ಯಯನ ನಿಕಾಯದ ಸಿಬ್ಬಂದಿ ಕೈಗೊಂಡಿರುವ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಮ್ಯಾನೇಜ್‍ಮೆಂಟ್ ಮ್ಯೂಸಿಯಂ, ವಿದ್ಯಾರ್ಥಿಗಳಿಗೆ ವ್ಯವಹಾರ ನಿರ್ವಹಣೆಯ ಜ್ಞಾನವನ್ನು ಸುಧಾರಿಸಲು ಮತ್ತು ಗೋದ್ರೇಜ್, ಟಾಟಾ, ರಿಲಯನ್ಸ್, ಪ್ಯಾರಿ ಮತ್ತು ಇತರ ಪ್ರಮುಖ ಕಂಪನಿಗಳು ವ್ಯಾಪಾರದ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹೇಗೆ ಶ್ರಮಪಟ್ಟಿವೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.

Contact Your\'s Advertisement; 9902492681

ಎಂಬಿಎ ವಿಭಾಗದ ಮುಖ್ಯಸ್ಥೆ ಪೆÇ್ರ. ಶೈಲಜಾ ಮಠಪತಿ ಮತ್ತು ಮ್ಯೂಸಿಯಂ ಸ್ಥಾಪನೆಗೆ ಶ್ರಮಪಟ್ಟ ಡಾ.ಶೋಭಾ ಹಂಗರಕಿ ಮಾತನಾಡಿ, ಮ್ಯೂಸಿಯಂ ಮುಖ್ಯವಾಗಿ ಯಶಸ್ವಿ ವ್ಯಾಪಾರ ಸಂಸ್ಥೆಗಳ ಯಶಸ್ಸಿನ ಕಥೆಗಳನ್ನು ಎತ್ತಿ ತೋರಿಸುತ್ತದೆ, ವಿಶೇಷವಾಗಿ 17 ನೇ ಶತಮಾನದಲ್ಲಿ ಅಥವಾ ಅದಕ್ಕೂ ಮೊದಲು ಸ್ಥಾಪಿಸಲ್ಪಟ್ಟ ವ್ಯಾಪಾರ ಕಂಪನಿಗಳು ಇಷ್ಟು ವರ್ಷ ಉಳಿದುಕೊಂಡು, ಭಾರತದಲ್ಲಿ ವ್ಯಾಪಾರದ ನಾಯಕರಾಗಿ ಬೆಳೆದಿದ್ದು ಮಾತ್ರವಲ್ಲದೆ ವಿಶ್ವದಲ್ಲಿಯೂ ಛಾಪು ಮೂಡಿಸಿದ್ದಾರೆ.

17 ನೇ ಶತಮಾನದಲ್ಲಿ ಸ್ಥಾಪನೆಯಾದ ಈ ಕಂಪನಿಗಳು ಪ್ರತಿ ವರ್ಷಗಳಲ್ಲಿ ಹೊಸ ತಂತ್ರಗಳು, ಹೊಸ ಪ್ರವೃತ್ತಿಗಳನ್ನು ಹೇಗೆ ಅಳವಡಿಸಿಕೊಂಡಿವೆ ಮತ್ತು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಹೇಗೆ ರೂಪಿಸಿಕೊಂಡಿವೆ ಎಂಬುದನ್ನು ಈ ಮ್ಯೂಸಿಯಂ ಎತ್ತಿ ತೋರಿಸುತ್ತದೆ. ಉಪಗ್ರಹ, ಆಟೋಮೊಬೈಲ್ ಉದ್ಯಮ, ಆಹಾರ ಉತ್ಪನ್ನಗಳು, ಕಂಜ್ಯೂಮರ್ಸ್ ಡ್ಯೂರೆಬಲ್ಸ್, ಏರ್‍ಲೈನ್ಸ್, ಆಟೋಮೇಷನ್, ಆನ್‍ಲೈನ್ ವ್ಯಾಪಾರ, ಔಷಧೀಯ ಉದ್ಯಮ ಮತ್ತು ಇತರ ಕ್ಷೇತ್ರಗಳಲ್ಲಿ ಆವಿμÁ್ಕರಗಳನ್ನು ಮಾಡಿದ ಭಾರತೀಯ ಕಂಪನಿಗಳಿಗೆ ವಸ್ತುಸಂಗ್ರಹಾಲಯದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ ಎಂದು ಡಾ.ಹಂಗರಕಿ ತಿಳಿಸಿದರು. ಯಶಸ್ವೀ ಮಹಿಳಾ ಉದ್ಯಮಿಗಳಾದ ಕಿರಣ್ ಮಜುಂದಾರ್, ಫಲ್ಗುಣಿ ನಾಯರ್, ವಂದನಾ ಮಿತ್ರ, ಸುಚಿ ಮುಖರ್ಜಿ ಮತ್ತು ಇತರರು ತಮ್ಮ ಯಶಸ್ಸಿನ ಹಾದಿಯಲ್ಲಿ ಅಳವಡಿಸಿಕೊಂಡ ತಂತ್ರಗಳು ವಸ್ತುಸಂಗ್ರಹಾಲಯದಲ್ಲಿ ಉಲ್ಲೇಖವನ್ನು ಕಂಡುಕೊಳ್ಳುವ ಮೂಲಕ ವಸ್ತುಸಂಗ್ರಹಾಲಯದಲ್ಲಿ ಪ್ರಮುಖ ಸ್ಥಾನವನ್ನು ಕಂಡುಕೊಂಡಿದ್ದಾರೆ.

ಯುವ ಮ್ಯಾನೇಜ್‍ಮೆಂಟ್ ಪದವೀಧರರಿಗೆ ವ್ಯಾಪಾರ ಜಗತ್ತು, ಮಹಿಳಾ ಉದ್ಯಮಿಗಳ ಸಾಮಥ್ರ್ಯ ಮತ್ತು ಯಶಸ್ಸನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ಅವರ ವ್ಯಾಪಾರ ಸಾಹಸಗಳಲ್ಲಿ ಅವರ ಕೆಲವು ಯಶಸ್ಸಿನ ಸೂತ್ರವನ್ನು ಅಳವಡಿಸಿಕೊಳ್ಳಲು ವಸ್ತುಸಂಗ್ರಹಾಲಯವು ಸ್ಫೂರ್ತಿಯ ಮೂಲವಾಗಿದೆ ಎಂದು ಡಾ ಲಕ್ಷ್ಮೀ ಪಾಟೀಲ್ ಮಾಕಾ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here