`ಫಿಲಂ ಫೆಸ್ಟಿವಲ್’ನಲ್ಲಿ ಅಕ್ರಮ್ ಮೋಮಿನ್ ಸೇರಿ 10 ಜನ ಪತ್ರಕರ್ತರಿಗೆ ಪ್ರಶಸ್ತಿ

0
107
  • ಫೆ.25, 26 ರಂದು ರಂಗಾಯಣದಲ್ಲಿ `ಸಿನಿಮಾ ಹಬ್ಬ’
  • ಫೆಸ್ಟಿವಲ್‍ಗಾಗಿ 22 ದೇಶಗಳಿಂದ 223 ಸಿನಿಮಾಗಳು 
  • ಪ್ರತಿ ವಿಭಾಗದಲ್ಲಿಯೂ `ಬೆಸ್ಟ್ ಅವಾರ್ಡ್’ ಗೌರವ 

ಕಲಬುರಗಿ; ಮನೋಮಯ ಪ್ರೊಡಕ್ಷನ್ಸ್ ಕಲಬುರಗಿ ಹಾಗೂ ರಂಗಾಯಣ ಸಹಯೋಗದಲ್ಲಿ ಫೆಬ್ರವರಿ 25 ಮತ್ತು 26 ರಂದು ಎರಡು ದಿನಗಳ `ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಮಾಧ್ಯಮ ಕ್ಷೇತ್ರದ ಹಿರಿಯ ಮತ್ತು ಯುವ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಎಂದು ಫಿಲಂ ಫೆಸ್ಟಿವಲ್ ಸಂಘಟಕರಾದ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ವೈಭವ ಕೇಸ್ಕರ್ ತಿಳಿಸಿದ್ದಾರೆ.

ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ನಡೆಯಲಿರುವ ಆರನೇ ವರ್ಷದ ಫಿಲ್ಮ್ ಫೆಸ್ಟಿವಲ್ ನಲಿ 10 ಜನ ಪತ್ರಕರ್ತರನ್ನು ಪ್ರಶಸ್ತಿ ನೀಡಿ ಗೌರವಿಸಲಿದ್ದು, ಕಳೆದ 5ನೇ ಫಿಲಂ ಫೆಸ್ಟಿವಲ್‍ನಲ್ಲಿಯೂ ಆರು ಜನ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಗೌರವಿಸಲಾಗಿತ್ತು.
ಪತ್ರಕರ್ತರಾದ ಜಯತೀರ್ಥ ಪಾಟೀಲ, ಮನೀಜಕುಮಾರ ಜಿ., ಸೂರ್ಯಕಾಂತ ಜಮಾದಾ, ಗೋಪಾಲ ಕುಲಕರ್ಣಿ, ಚಂದ್ರಶೇಖರ ಕೌಲಗಾ, ಸಂಗಮನಾಥ ರೇವತಗಾಂವ, ಅರುಣ ಕದಂ, ಚಂದ್ರು ಹಿರೇಮಠ, ಅಕ್ರಂ ಮೊಮಿನ್ ಮತ್ತು ರಮೇಶ ಮೇಳಕುಂದಾ ಅವರನ್ನು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ `ಬೆಸ್ಟ್ ಜರ್ನಲಿಸ್ಟ್’ ಎಂದು ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಫಿಲ್ಮ್ ಫೆಸ್ಟಿವಲ್ ನಲ್ಲಿ ಈ ಬಾರಿ ಅಮೆರಿಕಾ, ಆಸ್ಟ್ರೇಲಿಯಾ, ಬ್ರಿಟನ್, ರಷ್ಯಾ, ಇಟಲಿ, ಮೆಕ್ಸಿಕೋ, ಜರ್ಮನಿ, ಕೆನಡಾ, ಭಾರತ, ಇರಾನ್, ಬ್ರೇಜಿಲ್, ಚಿಲ್, ಕೊಸೋವೋ, ಇಸ್ರೇಲ್, ಇಂಡೋನೇಷ್ಯಾ, ಹಾಂಗ್ ಕಾಂಗ್, ಈಜಿಪ್ಟ್, ಡೆನ್ಮಾರ್ಕ, ಬಾಂಗ್ಲಾ , ಸ್ಪೇನ್, ಸರಬಿಯಾ, ಟರ್ಕಿ, ದಕ್ಷಿಣ ಆಫ್ರಿಕಾ,22 ದೇಶಗಳಿಂದ ಸುಮಾರು 223 ಸಿನಿಮಾಗಳು ಸ್ಪರ್ಧೆಗೆ ಬಂದಿವೆ. 30 ಸಿನಿಮಾಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಆಸ್ಸಾಂ, ಬಂಗಾಳಿ, ಗುಜರಾತಿ, ತುಳು, ಮಲೆಯಾಳಂ, ಮರಾಠಿ, ಓರಿಸ್ಸಾ ಮತ್ತು ಇಂಗ್ಲೀಷ ಸಿನಿಮಾಗಳು, ಕಿರುಚಿತ್ರಗಳು ಬಂದಿವೆ. ಅಂತರಾಷ್ಟ್ರೀಯ ಸಿನಿಮಾ ಹಬ್ಬದಲ್ಲಿ ವಿವಿಧ ಪ್ರಕಲ್ಪಗಳಲ್ಲಿ ಸುಮಾರು 50 ಬೆಸ್ಟ್ ಅವಾರ್ಡ್‍ಗಳನ್ನು ನೀಡಿ ಗೌರವಿಸಲಾಗುವುದು. ಬೆಸ್ಟ್ ನಿರ್ದೇಶಕ, ನಟ, ಸಿನಿಮಾ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಪ್ರಮಾಣ ಪತ್ರ, ಟ್ರೋಫಿ ನೀಡಲಾಗುವುದು.

ಅಂಬರೀಷ ಅಳಿಯ ನಾಯಕ ನಟ ಅಭಿಷೇಕ, ಜನಪ್ರಿಯ ಕಾರ್ಡಿಯೋಲಾಜಿಸ್ಟ್ ಡಾ.ಎಂ.ಆನಂದಕುಮಾರ ಬೆಂಗಳೂರು, ಚಿತ್ರರಂಗದ ನಿರ್ಮಾಪಕ ಮತ್ತು ಬರಹಗಾರ ಎಸ್.ರಾಮಕೃಷ್ಣ, ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ರೋಹಿಣಿ ಅನಂತ್, `ಗುರು ಶಿಷ್ಯರು’ ನಿರ್ದೇಶಕರಾದ ಜಡೇಶಕುಮಾರ ಹಂಪಿ, ಕ್ಯಾಮರಾಮನ್ ಅರೂರ್ ಸುಧಾಕರ ಶೆಟ್ಟಿ, ನಟ ಅವಿನಾಶ ಹೊಯ್ಸಳ, ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ರಾಜ್ಯ ಅಧ್ಯಕ್ಷರಾದ ಸಂತೋಷ ಅಂಗಡಿ, `ಮಿಸೆಸ್ ಇಂಡಿಯಾ-2021’ ವಿಜೇತೆ ಡಾ.ಸ್ಮಿತಾ ಪ್ರಭು, ಕವಿತಾ ರಮೇಶ, ಸುಮ ಬಸವರಾಜಯ್ಯ, ರಮೇಶ ಟಕ್ಕಳಕಿ ಸೇರಿದಂತೆ ಅನೇಕರು ಆಗಮಿಸುವರು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here