ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿ. ದೊಡ್ಡಪ್ಪ ಅಪ್ಪ ಸ್ಕಾಲರ್‍ಶಿಪ್

0
169

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಶರಣಬಸವೇಶ್ವರ ರೆಸಿಡೆಂಟಲ್ ಕಾಂಪೋಸಿಟ್ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ 2023-24ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು 2.5 ಕೋಟಿ ರೂ. ಮೌಲ್ಯದಷ್ಟು ಸ್ಕಾಲರ್‍ಶಿಪ್ ನೀಡಲು ಶರಣಬಸವೇಶ್ವರ ಮಹಾ ಸಂಸ್ತಾನದ 8ನೇ ಮಹಾದಾಸೋಹ ಪೀಠಾಧೀಪತಿ ಡಾ. ಶರಣಬಸಪ್ಪ ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸ್‍ನ್ ಡಾ. ದಾಕ್ಷಾಯಣಿ ಅಪ್ಪ ಅವರು ಬಯಸಿದ್ದಾರೆ.

ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪ ಸ್ಕಾಲರ್‍ಶಿಪ್ ನೀಡಲಿದ್ದು, ಪ್ರವೇಶ ಪರೀಕ್ಷೆ ಆಧಾರದನ್ವಯ 90 ರ್ಯಾಂಕ್ ಪಡೆದ ವಿದ್ಯರ್ಥಿಗಳು ಈ ಸ್ಕಾಲರ್‍ಶಿಪ್ ಪಡೆಯಲಿದ್ದಾರೆ ಎಂದು ಮಾತೋಶ್ರೀ ಡಾ. ದಾಕ್ಷಾಯಣಿ ಎಸ್.ಅಪ್ಪ ಬುಧವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಪಿಯುಸಿ ದ್ವಿತೀಯ ವರ್ಷದಲ್ಲೂ ಸಹ ಇಡೀ ಪಿಯುಸಿ ಪ್ರಥಮ ವರ್ಷದ ಎಲ್ಲ ಪರೀಕ್ಷೆಗಳ ಅಂಕಗಳ ಆಧಾರದನ್ವಯ ಅಗ್ರ 90 ರ್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಈ ಸ್ಕಾಲರ್‍ಶಿಪ್ ನೀಡಲಾಗುವುದು. ಎಸ್‍ಎಸ್‍ಎಲ್‍ಸಿ (ಸ್ಟೇಟ್ ಬೋರ್ಡ್) ಗಣಿತ, ವಿಜ್ಞಾನ, ಹತ್ತನೇ ತರಗತಿ (ಸಿಬಿಎಸ್‍ಇ) ಗಣಿತ ಮತ್ತು ವಿಜ್ಞಾನ, ಐಸಿಎಸ್‍ಇ ವಿದ್ಯಾರ್ಥಿಗಳಿಗೆ ಸಿಬಿಎಸ್‍ಇ ಪಠ್ಯಕ್ರಮದಲ್ಲಿಯೇ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ಡಾ. ಶರಣಬಸವಪ್ಪ ಅಪ್ಪ, ಚಿ. ದೊಡ್ಡಪ್ಪ ಅಪ್ಪ, ಬಸವರಾಜೇಂದ್ರ ದೇಶಮುಖ, ಶ್ರೀಶೈಲ ಹೂಗಾಡೆ, ಶಂಕರಗೌಡ ಹೊಸಮನಿ, ಚಂದ್ರಕಾಂತ ಪಾಟೀಲ ಇತರರಿದ್ದರು.

ಪ್ರವೇಶ ಪರೀಕ್ಷೆ ಪರೀಕ್ಷೆ ಯಾವಾಗ?; ಸಿಬಿಎಸ್‍ಇ/ ಐಸಿಎಸ್‍ಇ ವಿದ್ಯಾರ್ಥಿಗಳಿಗೆ ಮಾರ್ಚ್ 2ರಂದು ಮಧ್ಯಾಹ್ನ 1 ಗಂಟೆಯಿಂದ 3ರವರೆಗೆ, ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗೆ ಮಾರ್ಚ್ 23ರಂದು ಮಧ್ಯಾಹ್ನ 1 ಗಂಟೆಯಿಂದ 3ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಅವಧಿ 120 ನಿಮಿಷಗಳಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಸ್ಕಾಲರ್‍ಶಿಪ್‍ನ ಸದುಪಯೋಗಪಡೆದುಕೊಳ್ಳಬೇಕು ಎಂದು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ಡಾ. ಶರಣಬಸವಪ್ಪ ಅಪ್ಪ ಅವರ ಮುಂದಾಲೋಚನೆ ಮತ್ತು ವಿಶಾಲ ದೃಷ್ಟಿಕೋನದಿಂದಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಇಂದು ರಾಷ್ಟ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಸಂಪಾದಿಸಿದ್ದು, ಗುಣಮಟ್ಟದ ಶಿಕ್ಷಣ ನೀಡಿದ ಇಲ್ಲಿನ ಶಿಕ್ಷಕ ಮತ್ತು ಪ್ರಾಚಾರ್ಯರ ಶ್ರಮ ಸಾರ್ಥಕವಾಗಿದೆ. -ಡಾ. ದಾಕ್ಷಾಯಣಿ ಎಸ್. ಅಪ್ಪ, ಚೇರ್ ಪರ್ಸ್‍ನ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here