ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಧ್ಯಕ್ಷರ ಅಸಮಾಧಾನ

0
8

ಸುರಪುರ:ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಜನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಮಾತನಾಡಿ, ನಗರದಲ್ಲಿ ಪ್ರತಿಷ್ಠಾಪಿಸಲು ತಂದಿರುವ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ವಿನ್ಯಾಸ ಸರಿಯಾಗಿಲ್ಲದ ಕಾರಣ ಅದನ್ನು ಪ್ರತಿಷ್ಠಾಪಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು.ಇದರಿಂದ ಅಸಮಾಧಾನಗೊಂಡ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿಯವರು ಮಾತನಾಡಿ,ನಾನು ಅಧ್ಯಕ್ಷರಿದ್ದು ತರಿಸಿರುವುದರಿಂದಲೇ ಅದನ್ನು ಬೇಡ ಎಂದು ವಿರೋಧಿಸುತ್ತಿದ್ದೀರಿ ಎಂದು ಆರೋಪಿಸಿ ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಲ್ಲದೆ ಈಗ ತಂದಿರುವ ಮೂರ್ತಿ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ಕೂಡಿಸುವುದು ಬೇಡವೆಂದರೆ ಅದನ್ನು ಬಡಿಗೇರ ಬಾವಿ ಬಳಿಯಲ್ಲಿ ಪ್ರತಿಷ್ಠಾಪಿಸುವುದಾಗಿ ತಿಳಿಸಿದರು.ಇದಕ್ಕೂ ವಿರೋಧ ವ್ಯಕ್ತಪಡಿಸಿದ ಸದಸ್ಯರು ಮೂರ್ತಿ ಸರಿಯಾಗಿಲ್ಲದ ಕಾರಣ ಅದನ್ನು ಎಲ್ಲಿಯೂ ಪ್ರತಿಷ್ಠಾಪಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು.ನಂತರ ಎಲ್ಲ ಸದಸ್ಯರ ಅಭಿಪ್ರಾಯದಂತೆ ಮೂರ್ತಿ ಎಲ್ಲಿಯೂ ಪ್ರತಿಷ್ಠಾಪಿಸುವುದು ಬೇಡ ಎಂದು ನಿರ್ಣಯ ಘೋಷಿಸಿದರು.

ನಂತರ ಅನೇಕ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು,ಇದಕ್ಕೆ ಪ್ರತಿಕ್ರೀಯಿಸಿದ ನಗರಸಭೆ ಕಮಿಷನರ್ ಜೀವನ ಕುಮಾರ್ ಕಟ್ಟಿಮನಿಯವರು,ಈಗಾಗಲೇ ಕೆಲ ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ,ಇನ್ನುಳಿದ ಕಡೆಗಳಲ್ಲಿಯೂ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಸ್ವಚ್ಛತೆ ಮತ್ತು ವಿದ್ಯುತ್ ಸಮಸ್ಯೆ ಬೀದಿ ದೀಪಗಳನ್ನು ಹಾಕಿಸುವುದು ಕುರಿತಂತೆ ಅನೇಕ ಸಮಸ್ಯೆಗಳನ್ನು ಹೇಳಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ (ತಾತಾ) ಸದಸ್ಯರಾದ ವೇಣುಮಾಧವ ನಾಯಕ,ವಿಷ್ಣು ಗುತ್ತೇದಾರ,ಕಮ್ರುದ್ದಿನ್,ನಾಸಿರ ಕುಂಡಾಲೆ,ವಿಷ್ಣು ಗುತ್ತೇದಾರ,ಶಿವಕುಮಾರ ಕಟ್ಟಿಮನಿ,ಅಯ್ಯಪ್ಪ ಕುಂಬಾರಪೇಟ,ಜುಮ್ಮಣ್ಣ ಕೆಂಗುರಿ,ಮಾನಪ್ಪ ಚಳ್ಳಿಗಿಡ,ಸುವರ್ಣ ಎಲಿಗಾಡಿ,ನಾಮ ನಿರ್ದೇಶಿತ ಸದಸ್ಯರಾದ ಹೊನ್ನಪ್ಪ ತಳವಾರ,ಹರೀಶ ತ್ರಿವೇದಿ,ಬಸವರಾಜ ಸೇರಿದಂತೆ ಅನೇಕ ಜನ ಸದಸ್ಯರು ಹಾಗೂ ನಗರಸಭೆ ಎಇಇ ಶಾಂತಪ್ಪ,ಕುಡಿಯುವ ಸರಬರಾಜು ಕಾಮಗಾರಿಯ ವ್ಯವಸ್ಥಾಪಕ ಶಂಕರಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಸಭೆಯ ಸಮಯದಲ್ಲಿ ಆಗಮಿಸಿ ತರಕಾರಿ ಮಾರುಕಟ್ಟೆಯಲ್ಲಿ ಮೂಲ ಭೂತ ಸೌಲಭ್ಯ ಕಲ್ಪಿಸುವಂತೆ ವiನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here