ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಬಕ್ರೀದ್ ಹಬ್ಬ ಆಚರಣೆ

0
64

ಸುರಪುರ: ರಾಜ್ಯದಲ್ಲಿ ಪ್ರವಾಹ ಪರಸ್ಥಿತಿಯ ಸಂದರ್ಭದಲ್ಲಿಯೂ ನಾಡಿನಾದ್ಯಂತ ಎಲ್ಲೆಡೆ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಿದಂತೆ ತಾಲ್ಲೂಕಿನಲ್ಲಿಯೂ ಮುಸ್ಲಿಂ ಬಾಂಧವರು ನೆರೆ ಸಂತ್ರಸ್ತರಿಗೆ ದೇಣಿಗೆ ಸಂಹ್ರಹಿಸುವ ಮೂಲಕ ಅರ್ಥಪೂರ್ಣವಾದ ಬಕ್ರೀದ್ ಹಬ್ಬ ಆಚರಿಸಿದರು.

ಸುರಪುರ,ರಂಗಂಪೇಟೆ,ತಿಮ್ಮಾಪುರ ಮತ್ತಿತರೆ ಕಡೆಗಳಲ್ಲಿಯ ಮುಸ್ಲಿಂ ಸಮುದಾಯದ ಜನತೆ ಹೊಸ ಬಟ್ಟೆ ಧರಿಸಿ,ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ,ನಾಡಿಗೆ ಒಳ್ಳೆಯದಾಗಲಿ,ನೆರೆ ಕಳೆದು ಸಂತ್ರಸ್ತಗೊಂಡ ಜನತೆಯ ಮೊಗದಲ್ಲಿ ನಗು ಮೂಡಲಿ,ಜನತೆಗೆ ನೆಮ್ಮದಿ,ಸಂತೋಷ ಲಭಿಸಲೆಂದು ಪ್ರಾರ್ಥಿಸಿ ನಂತರ ಪರಸ್ಪರ ಹಸ್ತಲಾಘವದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Contact Your\'s Advertisement; 9902492681

ಈಬಾರಿ ತಾಲ್ಲೂಕಿನ ಅನೇಕ ಗ್ರಾಮಗಳ ಜನತೆ ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಬಕ್ರೀದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದ ಮುಸ್ಲಿಂ ಬಾಂಧವರು ನೆರೆ ಸಂತ್ರಸ್ತರಿಗೆ ನೆರವಾಗಲು ಎಲ್ಲರು ಧನ ಮತ್ತಿತರೆ ವಸ್ತುಗಳ ಸಂಗ್ರಹಿಸಿದರು.ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ,ಶಾಂತಿ ಭೋದನೆಯ ಮುಸ್ಲಿಂ ಸಮುದಾಯವು ಸದಾಕಾಲ ಪರರ ನೋವುಗಳಿಗೆ ಸ್ಪಂಧಿಸುತ್ತದೆ.ಬಕ್ರೀದ್ ಹಬ್ಬವು ಕೂಡ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದ್ದು.ಇಂತಹ ಹಬ್ಬದ ಸಂದರ್ಭದಲ್ಲಿ ನಮ್ಮ ಜನರು ನೆರೆಯಿಂದ ಕಷ್ಟದಲ್ಲಿರುವಾಗ ಅವರ ನೆರವಿಗೆ ನಾವೆಲ್ಲ ಬರಬೇಕಾದುದು ನಮ್ಮ ಜವಬ್ದಾರಿ ಎಂದು ಭಾವಿಸಿ ನಾವೆಲ್ಲರು ಅವರ ನೆರವಿಗೆ ನಿಲ್ಲಲಿದ್ದೆವೆ ಎಂದರು.

ಸುರಪುರದ ಈದ್ಗಾದಲ್ಲಿ ಮೌಲಾನಾ ಅಬ್ದುಲ್ ಲಾ ನೂರಿಸಂತೆಕೊಳ್ಳೂರು ಹಾಗು ರಂಗಂಪೇಟೆಯ ಈದ್ಗಾದಲ್ಲಿ ಮುಫ್ತಿ ಜಮೀರ್ ಅಹ್ಮದ ಖತೀಬ್ ಎಲ್ಲರಿಗು ಪ್ರಾರ್ಥನೆ ಬೋಧಿಸಿದರು.ಅಬ್ದುಲ ಗಫೂರ ನಗನೂರಿ,ಸಲಿಂ ವರ್ತಿ,ಖಾಜಾ ಖಲೀಲ್ ಅಹ್ಮದ ಅರಕೇರಿ,ಖಾಲೀದ್ ಅಹ್ಮದ ತಾಳಿಕೋಟೆ,ನಾಸೀರ್ ಹುಸೇನ ಕುಂಡಾಲೆ,ಅನ್ವರ್ ಜಮಾದಾರ್, ಶೇಖಾವತ್ ಹುಸೇನ್ ಉಸ್ತಾದ,ಪಿರಾಸತ್ ಹುಸೇನ್ ಉಸ್ತಾದ,ಖಾಸಿಂ ಸಾಬ್,ಎ.ಆರ್.ಪಾಶಾ,ಅಹ್ಮದ ಪಠಾಣ್, ಉಸ್ತಾದ ವಜಾಹತ್ ಹುಸೇನ್,ರಾಜ್ ಅಹ್ಮದ ಬಾಬಾ,ಅಬ್ದುಲ ಜಲೀಲ ಬಾಬಾ,ಖಾದರಸಾಬ ಸೌದಾಗರ,ಅಬ್ದುಲ್ ಮತೀನ ಅಹ್ಮದ, ಖಾಸಿಂ ಶರೀಫ್ ಖಾಜಾ,ಮುನೀರ್ ಅಹ್ಮದ್ ತಿರಂದಾಜ,ಖಾಜಿ ರಜಾಕ್ ಸಾಹೆಬ್, ಮದನಶಾ, ಅಬೀದ್ ಅಲಿ, ದಾವುದ್ ಪಠಾಣ,ಸಿಖಂದರ್ ಸಯ್ಯದ್ ನಯಿಂ,ಇಮ್ತಿಯಾಜ್ ಗುತ್ತೇದಾರ,ಎಂ.ಐ.ಸಾವರ್,ಮಿರ್ಜಾ ಸಾದಿಕ್ ಬೇಗ್, ಶೇಖ್ ಮಹ್ಮದ ಆರೀಫ್,ಡಿ.ಎಂ.ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here