ಸುರಪುರ: ನೆರೆ ಸಂತ್ರಸ್ತರು ತಾವ್ಯಾರು ಎದೆಗುಂದಬೇಕಿಲ್ಲ ನಿಮ್ಮೊಂದಿಗೆ ನಾವಿದ್ದೆವೆ ಹಾಗು ಸರಕಾರವಿದೆ.ನಿಮ್ಮ ಎಲ್ಲ ಸಮಸ್ಯೆಗಳು ಕೆಲವೆ ದಿನಗಳಲ್ಲಿ ದೂರಾಗಲಿವೆ.ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದಾಗಿ ಇಂದು ತಾವು ಎಲ್ಲವನ್ನು ಕಳೆದುಕೊಳ್ಳುವವಂತಹ ಸ್ಥಿತಿ ನಿರ್ಮಾಣವಾಗಿದೆ ನಿಮ್ಮ ನೋವಲ್ಲಿ ನಾನುಕೂಡ ಭಾಗಿಯಾಗುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.
ನೆರೆ ಸಂತ್ರಸ್ತರಿಗಾಗಿ ನಗರದಲ್ಲಿ ಎಪಿಎಂಸಿ ಗಂಜಿನಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಆಶ್ರಯ ಪಡೆದಿರುವ ಎಲ್ಲಾ ಸಂತ್ರಸ್ತರಿಗೆ ಭೇಟಿ ಮಾಡಿ ಮಾತನಾಡಿ,ತಾಲ್ಲೂಕಿನ ಅನೇಕ ಗ್ರಾಮಗಳ ಸಾವಿರಾರು ಎಕರೆ ಭೂಮಿಯಲ್ಲಿನ ಬೆಳೆ ನಷ್ಟಗೊಂಡಿದ್ದು ಹಾಗು ಅನೇಕರ ಮನೆಗಳು ಹಾಳಾಗಿವೆ.ಸರಕಾರ ಬೆಳೆಗೆ ಪರಿಹಾರ ಮತ್ತು ಶಾಸ್ವತವಾಗಿ ಸೂರು ಕಲ್ಪಿಸಲಿದೆ ಎಂದು ಧೈರ್ಯ ತುಂಬಿ,ನಂತರ ಸ್ವತಃ ತಾವೇ ಎಲ್ಲರಿಗು ಆಹಾರ ಮತ್ತು ಬಟ್ಟೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ಅಂಕಲಗಿ,ಅಶೋಕ ಸುರಪುರಕರ್,ಜಿ.ಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ,ಸಿಡಿಪಿಒ ಲಾಲಸಾಬ್,ಆರ್.ಐ ಗುರುಬಸಪ್ಪ ಪಾಟೀಲ್,ಲಕ್ಷ್ಮಣ ಕಟ್ಟಿಮನಿ ಮುಖಂಡರಾದ ಬಲಭೀಮನಾಯಕ ಬೈರಿಮಡ್ಡಿ,ದೇವರಾಜ ಮಕಾಶಿ,ಹಣಮಂತ್ರಾಯ ವಾಗಣಗೇರಾ,ಶಿವರಾಜ ಕಲಕೇರಿ,ಚಂದ್ರಶೇಖರ ಡೊಣೂರ,ಗಂಗಾಧರ ನಾಯಕ ಸೇರಿದಂತೆ ಅನೇಕರಿದ್ದರು.