ಯುವಕ ನಾಪತ್ತೆ: ಪತ್ತೆ ಹಚ್ಚಲು ಮನವಿ

0
10

ಕಲಬುರಗಿ: ಇಲ್ಲಿನ ತಾರ್ ಫೈಲ್ ಬಳಿಯಿರುವ ಗೌಸ್ ನಗರದ ಗುಲಾಮಖಾನ್ ಯುಸೂಫ್ ಖಾನ್ (26) ಜನವರಿ 1, 2023ರಿಂದ ನಾಪತ್ತೆಯಾಗಿದ್ದು, ತಮ್ಮ ಮಗನನ್ನು ಹುಡುಕಿಕೊಡುವಂತೆ ಗುಲಾಮಖಾನ್ ತಂದೆ ತಾಯಿಗಳಾದ ಅಮೀನಾಬಿ ಯುಸೂಫ್ ಖಾನ್ ಮನವಿ ಮಾಡಿದ್ದಾರೆ.

ಎಂಬಿಎ ಪದವಿಧರನಾಗಿದ್ದ ಗುಲಾಮ ಷೇರುಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಿಕೊಂಡಿದ್ದ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಪುಟೇಜ್ ನಲ್ಲಿ ಕೊನೆಯದಾಗಿ ಮೆಟ್ಟಿಲು ಹತ್ತುವ ದೃಶ್ಯ ಸೆರೆಯಾಗಿದೆ ಆನಂತರ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ನಗರದ ಸ್ಟೇಶನ್ ಬಜಾರ್ ಠಾಣೆಯಲ್ಲಿ ಜ. 17ರಂದು ದೂರು ಸಲ್ಲಿಸಿ ಪ್ರಕರಣ ದಾಖಲಾಗಿದ್ದರೂ ಈವರೆಗೆ ಮಗ ಮನೆಗೆ ಬಂದಿರುವುದಿಲ್ಲ. ಹೀಗಾಗಿ ತಮ್ಮ ಮಗನನ್ನು ಪತ್ತೆ ಹಚ್ಚುವಂತೆ ಅವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here