ಉರ್ದು ಪತ್ರಕರ್ತರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ

0
31

ಬೆಂಗಳೂರು; ಕರ್ನಾಟಕ ಉರ್ದು ಅಕಾಡೆಮಿಯ 2022-23 ನೇ ಸಾಲಿನ ಸರ್ಕಾರದಿಂದ ಅನುಮೋದಿತ ಕ್ರಿಯಾಯೋಜನೆಯ ಪ್ರಕಾರ ಉರ್ದು ಪತ್ರಕರ್ತರುಗಳಿಗೆ ಪತ್ರಿಕೋದ್ಯಮದ ವಿವಿಧ ವಿಷಯಗಳಲ್ಲಿ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಅರಣ್ಯ ವಸತಿ ಮತ್ತು ವಿಹಾರ ಸಂಸ್ಥೆಯ ಅಧೀನದ ಬನ್ನೇರುಘಟ್ಟ ಪ್ರಕೃತಿ ಶಿಬಿರದಲ್ಲಿ ಏರ್ಪಡಿಸಲಾಗಿತ್ತು.

ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಮುಬೀನ್ ಮುನವ್ವರ್ ಮತ್ತು ಡಾ. ಖದೀರ್ ನಾಜೀಮ್ ಸರ್ಗಿರೋ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Contact Your\'s Advertisement; 9902492681

ನಿಕಟಪೂರ್ವ ಅಧ್ಯಕ್ಷರಾಗಿದ್ದ ಶ್ರೀ ಮುಬೀನ್ ಮುನವ್ವರ್ ರವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಉರ್ದು ಭಾμÉಯ ಸಮಗ್ರ ಬೆಳವಣಿಗೆಗೆ ಕರ್ನಾಟಕ ಉರ್ದು ಅಕಾಡೆಮಿಯ ದಕ್ಷ ಮತ್ತು ಪಾರದರ್ಶಕ ರೀತಿಯ ಕಾರ್ಯವೈಖರಿಯು ಅತ್ಯಂತ ಶ್ಲಾಘನೀಯವಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಅವುಗಳಿಗೆ ಅನುಗುಣವಾಗಿ ಉರ್ದು ಪತ್ರಿಕಾರಂಗದ ಬೆಳವಣಿಗೆಗಾಗಿ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿ ಪತ್ರಕರ್ತರ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ವಿಶೇಷವಾಗಿ ಪ್ರಕೃತಿ ಶಿಬಿರದಲ್ಲಿ ಹಮ್ಮಿಕೊಂಡಿರುವುದರಿಂದ ಉರ್ದು ಪತ್ರಕರ್ತರುಗಳ ವೃತ್ತಿ ಕೌಶಲ್ಯ ಅಭಿವೃದ್ಧಿಯೊಂದಿಗೆ ಪರಿಸರ ಪ್ರಜ್ಞೆ ಮತ್ತು ಪರಿಸರ ಕಾಳಜಿಯ ಕುರಿತು ವಿಶೇಷ ಅನುಭವ ದೊರೆಯಲಿದೆ ಎಂದು ಹೇಳಿದರು.

ಪತ್ರಕರ್ತರ ವೃತ್ತಿಯು ಬಹಳ ಜವಾಬ್ದಾರಿಯುತ ವೃತ್ತಿಯಾಗಿದ್ದು, ಕೇವಲ ವಿಷಯದ ಕಲೆಹಾಕುವಿಕೆ ಮಾತ್ರವಲ್ಲದೇ ವಸ್ತುನಿಷ್ಠ ವರದಿಯನ್ನು ನೀಡುವ ಮೂಲಕ ಪತ್ರಕರ್ತರು ವಿಶ್ವಾಸಾರ್ಹತೆ ಉಳಿಸಿಕೆuಟಿಜeಜಿiಟಿeಜಳ್ಳಬೇಕು. ಯಾವುದೇ ಕಾರಣಕ್ಕೂ ಅಸತ್ಯವನ್ನು ಪ್ರತಿಪಾದಿಸಬಾರದು. ನಿರ್ಭಯತೆಯ ಮೂಲಕ ಸತ್ಯವನ್ನು ಮಾತ್ರವೇ ಪ್ರತಿಪಾದಿಸಬೇಕು. ಪತ್ರಕರ್ತರು ಪತ್ರಿಕಾರಂಗಕ್ಕೆ ಶೋಭೆ ತರುವ ಜತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.  ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರವನ್ನು ಉತ್ತಮವಾಗಿ ವಿನ್ಯಾಸಗೊಳಿಸಿದ್ದು, ಉರ್ದು ಪತ್ರಕರ್ತರುಗಳಿಗೆ ಅತ್ಯುಪಯುಕ್ತವಾಗಿದೆ ಎಂದರು.

ಮಾಜಿ ಅಧ್ಯಕ್ಷರಾದ ಡಾ. ಖದೀರ್ ನಾಜೀಮ್ ಸರ್ಗಿರೋ ರವರು ಮಾತನಾಡಿ, ಪತ್ರಿಕಾರಂಗವು ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವುದರಿಂದ, ಪತ್ರಕರ್ತರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಉರ್ದು ಭಾμÉಯನ್ನು ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ನಿರ್ವಹಿಸಿದ್ದು, ಉರ್ದು ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಹೇಳಿದರು.  ಉರ್ದುಭಾμÉ ಮತ್ತು ಸಂಸ್ಕøತಿಯು ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಪತ್ರಕರ್ತ ಭಾμÉ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಉರ್ದು ಅಕಾಡೆಮಿಯ ರಿಜಿಸ್ಟ್ರಾರ್ ಹಾಗೂ ತರಬೇತಿ ಕೋರ್ಸ್ ನಿರ್ದೇಶಕರಾದ ಡಾ. ಮಾಜುದ್ಧೀನ್ ಖಾನ್ ರವರು ಮಾತನಾಡಿ, ಪತ್ರಿಕಾರಂಗವು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿದ್ದು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸದೆ ಪ್ರವೃತ್ತಿಯಾಗಿ ಬೆಳೆಸಿಕೊಂಡು ಸಾಧನೆಯನ್ನು ತೋರಬೇಕು ಎಂದರು. ಪ್ರಸ್ತುತ ಸರಕಾರವು ಅನುಮೋದಿಸಿರುವ ಪತ್ರಕರ್ತರ ಕಾರ್ಯಾಗಾರವು ಉರ್ದು ಪತ್ರಕರ್ತರುಗಳಿಗೆ ಉತ್ತಮವಾದ ವೃತ್ತಿಕೌಶಲ್ಯ ಹಾಗೂ ನೈಪುಣ್ಯತೆಯನ್ನು ವೃದ್ಧಿಸಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಹೈದರಾಬಾದ್‍ನ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡೀನ್ ಮೊಹಮದ್ ಎಹತೆಶಾಮ್ ಅಹಮದ್ ಖಾನ್, ಪತ್ರಿಕೋದ್ಯಮದ ವಿವಿಧ ಅಂಗಗಳು, ಭಾರತದಲ್ಲಿ ಟಿ.ವಿ. ಮಾಧ್ಯಮಗಳ ಕ್ರಾಂತಿ ಮತ್ತು ಡಿಜಿಟಲ್ ಕ್ರಾಂತಿಯಲ್ಲಿ ಪತ್ರಿಕೋದ್ಯಮದ ವಿಪುಲ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.  ಡೈಲಿ ಸಾಲಾರ್ ದಿನಪತ್ರಿಕೆಯ ಮಾಜಿ ಸಂಪಾದಕರಾದ ಶ್ರೀ ಇಫ್ತೆಕಾರ್ ಅಹಮದ್, ಉತ್ತಮ ಪತ್ರಿಕಾ ವರದಿ ತಯಾರಿಕೆ ಹಾಗೂ ಪ್ರಾಯೋಗಿಕ ವರದಿ ಒಳಗೊಂಡಿರುವ ಅಂಶಗಳ ಕುರಿತಂತೆ ಬೋಧಿಸಿದರು.

ಉರ್ದು ಪ್ರಸಿದ್ಧ ಅಂಕಣಕಾರರಾದ ಮೊಹಮದ್ ಆಜಂ ಶಾಹೀದ್, ಪತ್ರಿಕೋದ್ಯಮದ ಉಗಮ, ಉರ್ದು ಭಾμÉಯ ಪಾತ್ರ ಕುರಿತು ಉಪನ್ಯಾಸ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಸಿದ್ಧ ತರಬೇತುದಾರರಾದ ಎಸ್.ಎಸ್. ಅಫ್ಸರ್ ಖಾದ್ರಿ ರವರು ಪತ್ರಿಕೋದ್ಯಮ ಮತ್ತು ಪತ್ರಕರ್ತರು ಒಳಗೊಂಡಿರುವ ಮೂಲಭೂತ ಕರ್ತವ್ಯಗಳನ್ನು ಕುರಿತು ಹಾಗೂ ಆವಿμÁ್ಕರ ಮತ್ತು ಮಾಹಿತಿ ಪತ್ರಿಕೋದ್ಯಮದ ಕುರಿತು ಉಪನ್ಯಾಸ ಬೋಧಿಸಿದರು.

ಡಾ. ಮಾಜುದ್ಧೀನ್ ಖಾನ್, ರವರು ಪತ್ರಕರ್ತರು ಒಳಗೊಳ್ಳಬೇಕಾದ ಭಾವನಾತ್ಮಕ ಬುದ್ಧಿಶಕ್ತಿ, ಪರಿಣಾಮಕಾರಿ ಸೇವೆ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಕುರಿತು ಉಪನ್ಯಾಸ ನೀಡಿ ವ್ಯಕ್ತಿತ್ವ ಪರೀಕ್ಷೆಯ ಪ್ರಾಯೋಗಿಕ ಪರೀಕ್ಷೆಯನ್ನು ಅಯೋಜಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಪ್ರಶಿಕ್ಷಣಾರ್ಥಿ ಪತ್ರಕರ್ತರುಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕರ್ನಾಟಕ ಉರ್ದು ಅಕಾಡೆಮಿಯ ಬಿ. ಮೊಹಮದ್ ಸಾದಿಕ್, ನಿಜಾಮುದ್ಧೀನ್, ಇರ್ಫಾನ್ ಖಾದ್ರಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here