ಸುರುಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಡಸ್ಟ್ರೀ 4.0 ತಂತ್ರಜ್ಞಾನ ಬದಲಾವಣೆಗಳ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ನಿಷ್ಠಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿದ್ದಲಿಂಗ ಎಸ್ ಶಂಕರ, ಸೀನಿಯರ್ ಆಪರೇಷನ್ಸ್ ಮ್ಯಾನೇಜರ್ ಜಿ.ಇ ಪವರ್ ಇಂಡಿಯಾ ಲಿಮಿಟೆಡ್ ಶಹಾಬಾದ್ ರವರು ಉದ್ಯಮದ ಪ್ರಮುಖ ತಂತ್ರಜ್ಞಾನಗಳಾದ, ಮುಂತಾದ ಅವಿಸ್ಕರಗಳ ಕುರಿತು ಬಹಳ ದಿರ್ಘಕಾಲ ಇಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳ ಜೊತೆ ಚರ್ಚಿಸಿದರು.
ಡಾ. ರಾಜಶೇಖರ್ ಮಠಪತಿ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ, ಪ್ರೊಫೆಸರ್ ಡಿಪಾರ್ಟ್ಮೆಂಟ್ ಆಫ್ ಮೆಕ್ಯಾನಿಕಲ್ ಇಂಜಿನಿಯರ್ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾಲ್ಕಿ ರವರು ಎಜುಕೇಶನ್ 4.0 ಕುರಿತು ತರಗತಿಗಳನ್ನು ಚಟುವಟಿಕೆಯ ಪ್ರಯೋಗಾಲಯಗಳಾಗಿ ಪರಿವರ್ತಿಸುವುದು, ವಿದ್ಯಾರ್ಥಿಗಳು ನೈಜ-ಪ್ರಪಂಚದ ಸನ್ನಿವೇಶದಲ್ಲಿ ಪರಿಕಲ್ಪನೆಗಳ ಸಂದರ್ಭ ಮತ್ತು ಬಳಕೆಯನ್ನು ಅರ್ಥಮಾಡಿಕೊಳ್ಳಲು ತಮ್ಮ ಕಲಿಕೆಯನ್ನು ಅಭ್ಯಾಸ ಮಾಡಬಹುದು, ಕಾರ್ಯಗತಗೊಳಿಸಬಹುದು ಮತ್ತು ಅನ್ವಯಿಸಬಹುದು, ಇದು ಶಿಕ್ಷಣವನ್ನು ಪರಿವರ್ತಿಸುವ ಪ್ರಮುಖ ಸನ್ನೆಗಳಲ್ಲಿ ಒಂದಾಗಿದೆ ಎಂದು ವಿದ್ಯಾರ್ಥಿಗಳ ಜೊತೆ ಚರ್ಸಿಸುತ್ತ ಮತ್ತು ಎಜುಕೇಶನ್ 1.0 ರಿಂದ ಎಜುಕೇಶನ್ 4.0 ವರೆಗಿನ ಬದಲಾವಣೆಗಳ ಕುರಿತು ಬಹಳ ದೀರ್ಘಕಾಲ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಾಗಾರದ ಸಂಯೋಜಕರಾದ ಪ್ರೊ. ಸಾಹೇಬಗೌಡ ಪಾಟೀಲ ಮತ್ತು ಪ್ರೊ. ಮಂಜುನಾಥ ಯಳವಾರ ಹಾಗೂ ಎಲ್ಲಾ ಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಂಜನಾ ಆಷ್ಮಾ ನಿರೂಪಿಸಿದರು.