ಸುರಪುರ:ನಗರದ ಕಬಾಡಗೇರದಲ್ಲಿನ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ 47ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶರಣರ ಚರಿತಾಮೃತ ಪ್ರವಚನ ಕಾರ್ಯಕ್ರಮದ ಮಹಾಮಂಗಲ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಪೂಜ್ಯರಾದ ಶಿವಮೂರ್ತಿ ಶವಾಚಾರ್ಯ ಸ್ವಾಮೀಜಿ ಮಾತನಾಡಿ, ಇತಿಹಾಸ ಕಾಲದಿಂದಲೂ ಮಠ ಮಂದಿರಗಳು ರಾಜಾಶ್ರಯ ಪಡೆದು ಬೆಳೆದು ಬಂದಿದ್ದು ಸುರಪುರ ಸಂಸ್ಥಾನದ ರಾಜಾಶ್ರಯ ಪಡೆದಿದ್ದ ನಿಷ್ಠಿ ಕಡ್ಲಪ್ಪನವರ ಮಠವು ಧರ್ಮ ಪರಂಪರೆ ರಕ್ಷಣೆಯ ತೊಡಗಿಸಿಕೊಂಡಿದ್ದು ಶರಣರ ಚರಿತಾಮೃತವನ್ನು ಹಮ್ಮಿಕೊಳ್ಳುವ ಮೂಲಕ ಧರ್ಮ ಪ್ರಜ್ಞೆ ಮೂಡಿಸುವಲ್ಲಿ ಶ್ರೀಮಠದ ಕಾರ್ಯ ಮಹತ್ತರವಾಗಿದೆ ಎಂದರು.
ವೀರಪ್ಪ ಹಾಗೂ ಕಡ್ಲಪ್ಪನವರು ಕೃಷ್ಣೆ-ಭೀಮೆಯರ ಮಧ್ಯೆ ಬರುವ ಬಸವನಬಾಗೇವಾಡಿ ಯಿಂದ ಜೇರಟಗಿಯವರೆಗೆ 101 ಮಠಗಳು ಹಾಗೂ 101 ಬಾವಿಗಳನ್ನು ಕಟ್ಟಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ ಆ ಮೂಲಕ ಈ ಭಾಗದಲ್ಲಿ ಧರ್ಮ ಪ್ರಜ್ಞೆ ಮೂಡಿಸುವದರ ಜೊತೆಗೆ ಜನೋಪಯೋಗಿ ಕಾಯಕವನ್ನು ಕೈಗೊಂಡರು ಎಂದು ಹೇಳಿದರು ಇಂತಹ ಶರಣರು-ಸಂತರು ಹುಟ್ಟಿ ಬಂದಿದ್ದೇ ಪುಣ್ಯದಿಂದ ಎಂದ ಅವರು ನಮ್ಮ ಬದುಕಿನಲ್ಲಿ ಮೋಕ್ಷ ಪಡೆಯಲು ಪುಣ್ಯ ಸಂಪಾದನೆ ಮಾಡಬೇಕು ಪರರಿಗೆ ಉಪಕಾರ ಮಾಡುವುದೇ ಪುಣ್ಯದ ಕೆಲಸ ಎಂದ ಅವರು ಶರಣರ ಚರಿತ್ರೆಯಲ್ಲಿ ಅದ್ಭುತವಾದ ಶಕ್ತಿ ಇದ್ದು ಶರಣರು ಹಾಗೂ ಸಂತರು ಹುಟ್ಟಿ ಬರುವುದೇ ಪುಣ್ಯದಿಂದ ಅಂತಹವರ ಚರಿತ್ರೆ ಕೇಳುವದರಿಂದ ನಮ್ಮ ಬದುಕಿನ ಅಂಧಾಕಾರವನ್ನು ಹೊಡೆದೋಡಿಸುತ್ತದೆ ಎಂದು ಅವರು ಹೇಳಿದರು.
ಗಜೇಂದ್ರಗಡ ಕಾಲಜ್ಞಾನ ಮಠದ ಡಾ.ಶರಣಬಸವೇಶ್ವರ ಮಹಾಸ್ವಾಮಿಗಳು ಮಾತನಾಡಿ ಕಾಲಜ್ಞಾನ ನುಡಿದರು, ಹರಳಹಳ್ಳಿಯ ರೇವಣಸಿದ್ದೇಶ್ವರ ತಾತಾ ಹಾಗೂ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಸೂಗುರೇಶ ವಾರದಮಾತನಾಡಿದರು ಕಡ್ಲಪ್ಪನವರ ಮಠದ ಪೀಠಾಧಿಪತಿ ಪ್ರಭುಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು, ಸುರಪುರ ಸಂಸ್ಥಾನದ ಅರಸು ವಂಶಸ್ಥ ರಾಜಾ ಲಕ್ಷ್ಮೀನಾರಾಯಣ ನಾಯಕ ಉದ್ಘಾಟಿಸಿದರು.
ನಗರಸಭೆ ಸದಸ್ಯ ವೇಣುಮಾಧವ ನಾಯಕ, ಬಸವರಾಜ ನಿಷ್ಠಿ ದೇಶಮುಖ, ದೊಡ್ಡಪ್ಪ ನಿಷ್ಠಿ ಜಾಗೀರದಾರ, ಗೌರಿಶಂಕರ ಚೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಲಶೆಟ್ಟಿಹಾಳ ಶಾಖಾಮಠದ ಸಿದ್ದಲಿಂಗಯ್ಯಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು ಶರಣಬಸಪ್ಪ ಯಾಳವಾರ ಸ್ವಾಗತಿಸಿದರು ಹೆಚ್.ರಾಠೋಡ ನಿರೂಪಿಸಿದರು ರಾಜಶೇಖರ ದೇಸಾಯಿ ವಂದಿಸಿದರು.
ಕಳೆದ 24ವರ್ಷಗಳಿಂದ ಕಡ್ಲಪ್ಪನವರ ಮಠದಲ್ಲಿ ನಡೆಯುವ ಧರ್ಮಸಭೆಯಲ್ಲಿ ಪಾಲ್ಗೊಳ್ಳುವ ಗಜೇಂದ್ರಗಡ ಕಾಲಜ್ಞಾನಮಠದ ಡಾ.ಶರಣಬಸವೇಶ್ವರ ಮಹಾಸ್ವಾಮಿಗಳು ಕಾಲಜ್ಞಾನ ನುಡಿಯುತ್ತಾ ಮುಂಬರುವ ಶೋಭನ ಕೃತ ಸಂವತ್ಸರದಲ್ಲಿ ಪ್ರಜೆಗಳಿಗೆ ರೋಗ ಪೀಡೆ, ದು:ಖ, ಮುಂಗಾರು 10ಆಣೆ, ಹಿಂಗಾರು 13ಆಣೆ ಮಳೆ, ಎಲ್ಲಾ ಕಡೆ ಸಂಪೂರ್ಣ ಮಳೆ ಕಲ್ಲಿನಾಡು, ಕುಂತಳ ದೇಶ, ಬಳ್ಳಾರಿ, ಅನಂತಪುರ, ಕರ್ನೂಲ ರಾಯಲಸೀಮೆ ಬರಗಾಲ. ಕಬ್ಬು, ಬೆಲ್ಲ, ಅರಿಶಿಣ, ಮೆಣಸು, ದಾಲ್ಚಿನ್ನಿ, ಜೀರಗಿ, ಶೇಂಗಾ, ಕಡಲೆ, ಹುರುಳಿ, ಎಳ್ಳು, ಸಜ್ಜಿ, ನವಣೆ, ಜೋಳ, ಮೆಕ್ಕೆಜೋಳ, ರಾಗಿ, ಅಗಸಿ ತೊಗರಿ ಸೂರ್ಯಕಾಂತಿ ಉತ್ತಮ ಬೆಳೆ ಉತ್ತಮ ಧಾರಣಿ ರೈತನಿಗೆ ಹರ್ಷ ಭತ್ತ(ಅಕ್ಕಿ) ತುಟ್ಟಿಯಾಗಿ ಮಾರುತ್ತದೆ. ದೇಶ ಆರ್ಥಿಕ ಪ್ರಗತಿಯಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಮಿತ್ರ ರಾಷ್ಟ್ರಗಳಲ್ಲಿ ವಸಾಹತು ಸ್ಥಾಪಿಸಿ ಭಾರತ ವಿಜಯ ಪತಾಕೆ ಹಾರಿಸುವುದು.
ದಾರಿತಪ್ಪಿದ ಶ್ರೀಮಂತರಿಗೆ ಧರ್ಮ ಮಾರ್ಗ ತೋರಿಸುತ್ತದೆ ಧರ್ಮವಂತರು ದಾರಿ ತಪ್ಪಿದಾಗ ದರಿದ್ರ ಜನ ಎದ್ದು ನಿಲ್ಲುತ್ತಾರೆ ಚೈತ್ರ, ವೈಶಾಖ, ಜೇಷ್ಠ ಮಾಸಗಳಲ್ಲಿ ದೇಶ ಸುಭಿಕ್ಷೆಯಿಂದ ನಡೆಯುವುದು ಆಷಾಢ ದಿಂದ ಕಾರ್ತಿಕದವರೆಗೆ ಪ್ರಜೆಗಳಿಗೆ ಪೀಡೆ ಎಲೆಕ್ಟ್ರಾನಿಕ್ ಮಿಣಕು ದೀಪಗಳಿಂದ ಹಾನಿ. ಆಷಾಢಕ್ಕಿಂತ ಪೂರ್ವದಲ್ಲಿ ಎಲ್ಲಾ ನದಿಗಳು ತುಂಬುತ್ತವೆ. ರಾಜಕೀಯ 2023ರ ಚುನಾವನೆ ಹಣೆಬರಹ: ಕಮಲ ಬತ್ತಿ ಹೋದಿತು ಹೊರೆ ಹೊತ್ತ ಬಾಲೆ ಅತ್ತು ನಿಂತಿತು ಕೈ ಚಪ್ಪಾಳೆ ತಟ್ಟುವಲ್ಲಿ ಕಸಬರಿಗೆ(ಆಮ್ ಆದ್ಮೀ) ಅಡ್ಡ ಬಂದೀತು. ಕಾಂಗ್ರೆಸ್: 85-90 , ಜೆಡಿಎಸ್: 75-80, ಬಿಜೆಪಿ 32-35, ಪಕ್ಷೇತರರು:2-3 ಕರ್ನಾಟಕದಲ್ಲಿ ಆಪ್ ಖಾತೆ ತೆರೆಯಲಿದೆ ಎಂದರು.
ಉತ್ತಮ ನಾಗರಿಕ ವ್ಯಕ್ತಿ ಹೊಸ ಬಗೆಯ ನೀತಿಯ ಹರಿಕಾರ ಸಂವಿಧಾನದ ಸರಳತೆಯ ಸಹಕಾರ ರಾಜ್ಯದ ನೇತಾರ ಉತ್ತಮ ಮುಖ್ಯಮಂತ್ರಿ ಸ್ಥಾನ ಹೊಂದುತ್ತಾನೆ. ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗುತ್ತಾg ಎಂದು ತಿಳಿಸಿದರು.