ಹೂ ಬಿಡದೇ ಹಣ್ಣು ಬಿಡುವ, ಬಿಲ್ವ, ಪ್ರಾಕೃತಿಕವಾಗಿ ರಂಧ್ರ ಹೊಂದಿರುವ ರುದ್ರಾಕ್ಷಿ ಶಿವನ ಪ್ರಿಯ ವಸ್ತುಗಳು’

0
106

ಯಾದಗಿರಿ: ಬಿಲ್ವ ವೃಕ್ಷ ಹೂ ಬಿಡದೇ ಕಾಯಿ ಮತ್ತು ಹಣ್ಣು  ಬಿಡುವ ಸೃಷ್ಟಿಯ ಏಕೈಕ ಸಸ್ಯವರ್ಗವಾಗಿದ್ದು ಈ ವೃಕ್ಷದ ಬಿಲ್ವ ಪತ್ರಿಗಳು ಶಿವನಿಗೆ ಪ್ರಿಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ, ಪ್ರವಚನಕಾರ ಪಿ. ವೇಣುಗೋಪಾಲ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಆಯೋಜಿಸಿರುವ ಶಿವ ಮಹಾಪುರಾಣ ಕಾರ್ಯಕ್ರಮದ ೭ನೇ ದಿನದ ಕಾರ್ಯಕ್ರಮದಲ್ಲಿ ಪುರಾಣ ಪ್ರವಚನ ಮಾಡಿ ಅವರು ಮಾತನಾಡುತ್ತಿದ್ದರು. ಇಂತಹ ವಿಶಿಷ್ಟತೆ ಇರುವುದರಿಂದಲೇ ಶಿವನ ಕುರಿತು ಹಾಗೂ ಶಿವನಿಗೆ ಸಂಬಂಧಿಸಿದ ವಿಷಯ ವಸ್ತುಗಳು ಬಹಳ ವಿಶಿಷ್ಟತೆ ಹೊಂದಿವೆ ಎಂದು ಹೇಳಿದರು.

Contact Your\'s Advertisement; 9902492681

ಶಿವನ ಕಣ್ಣಿನ ಹನಿಯಿಂದ ಜನಿಸಿತೆಂದು ಹೇಳಲಾಗುವ ರುದ್ರಾಕ್ಷಿಯೂ ಸಹ ಜಗತ್ತಿನಲ್ಲಿನ ವಿಸ್ಮಯಕಾರಿ ಬೀಜವಾಗಿದೆ. ಈ ಬೀಜ ಮಾತ್ರ ಹುಟ್ಟುತ್ತಲೇ ತನ್ನೊಳಗೆ ರಂಧ್ರವನ್ನು ಹೊಂದಿ ಸೃಷ್ಟಿಯಾಗಿರುವುದು ಇದರ ವಿಶೇಷವಾಗಿದ್ದು ಇಂತಹ ಅನೇಕ ವಿಸ್ಮಯಕಾರಿ ಸಂಗತಿಗಳು ಪುರಾಣ ಪ್ರವಚನ, ಶ್ರವಣದಿಂದ ಗೊತ್ತಾಗುತ್ತವೆ ಈ ನಿಟ್ಟಿನಲ್ಲಿ ಎಲ್ಲರೂ ಪುರಾಣ [ಪ್ರವಚನ ಶ್ರವಣ ಮಾಡಬೇಕೆಂದು ಮಾರ್ಮಿಕವಾಗಿ ನುಡಿದರು.

ಅತಿಥಿಯಾಗಿ ಆಗಮಿಸಿದ್ದ ಯಾದಗಿರಿ ಟೈಮ್ಸ್ ಸಂಪಾದಕ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಮಾತನಾಡಿ ಧರ್ಮ ಮಾರ್ಗ ಎನ್ನುವುದು ನಿತ್ಯ ಜೀವನದ ಜಂಜಾಟದಲ್ಲಿ ಸಿಲುಕಿರುವವರಿಗೆ ಸರಿಯಾದ ಮಾರ್ಗ ತೋರಿ ಸನ್ಮಾರ್ಗದಲ್ಲಿ ಸಾಗಲು ನಿರ್ದೇಶನ ನೀಡಲು ಶ್ರಾವಣ ಮಾಸದ ಪುರಾಣ ಪ್ರವಚನ, ಸಂಕೀರ್ತನೆ, ಶಿವಧ್ಯಾನಗಳನ್ನು ನಮ್ಮ ಸಂಸ್ಕೃತಿಯಲ್ಲಿ ಹಿರಿಯರು ೧೦ಸಾವಿರ ವರ್ಷಗಳ ಹಿಂದೆಯೇ ರೂಪಿಸಿ ಕೊಟ್ಟಿದ್ದಾರೆ. ಹಿರಿಯರ ಮಾರ್ಗದಲ್ಲಿ ಸಾಗಿದಲ್ಲಿ ನಾವು ಉನ್ನತ ಜೀವನ ನಡೆಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲರೂ ಭಾರತದ ಸಂಸ್ಕೃತಿ, ಆಧ್ಯಾತ್ಮದತ್ತ ವಾಲುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ವೇದಿಕೆ ಮೇಲೆ ಜೈ ಛತ್ರಪತಿ ಶಿವಾಜಿ ಮಹಾರಾಜ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್, ನಿವೃತ್ತ ಕ್ರೀಡಾಧಿಕಾರಿ ಸೂಗಪ್ಪ ಪಾಟೀಲ್ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here