ಆಳಂದ ತಾಲೂಕಿಗೆ ನೆರೆಯಿಲ್ಲ ತೊರೆಯಿಲ್ಲ ಬತ್ತಿದ ಕೆರೆ, ಬಾವಿಗಳಿಗೂ ಮಳೆ ನೀರಿಲ್ಲದೆ ಜಲಕ್ಷಾಮದ ಭೀತಿ

0
56

ಆಳಂದ: ಇಡೀ ಉತ್ತರ ಕರ್ನಾಟ ಸೇರಿ ರಾಜ್ಯದ ಇನ್ನೂಳಿದ ಪ್ರದೇಶಗಳಲ್ಲಿ ನೀರಿನ ಪ್ರಹವವೇ ಹರಿದರೆ, ಅದಕ್ಕೆ ತದ್ದವಿರುದ್ಧ ಎನ್ನುವಂತೆ ಮಳೆಗಾಲ ಆರಂಭಗೊಂಡು ಎರಡುವರೆ ತಿಂಗಳಾದರು ತಾಲೂಕಿನಲ್ಲಿ ನಿರೀಕ್ಷಿತವಾಗಿ ಮಳೆ ಸುರಿಯದೆ, ಬೇಸಿಗೆಯಲ್ಲಿ ಬತ್ತಿದ ಕೆರೆ, ಬಾವಿ, ಹಳ್ಳ, ನಾಲಾಗಳಿಗೆ ಇಂದಿಗೂ ನೀರಿಲ್ಲದೆ ಜಲಕ್ಷಾಮದ ಆತಂಕ ಮೂಡಿಸಿದೆ.

ಪ್ರತಿ ಮಳೆಗಾಲದ ಜೂನ್-ಜುಲೈ ತಿಂಗಳಲ್ಲಿ ಬಿದ್ದ ಮಳೆಯಿಂದಲೇ ಕೆರೆ, ಬಾವಿ, ನಾಲಾ ಮತ್ತು ಹಳ್ಳಗಳಿಗೆ ನೀರುಕ್ಕಿ ಹರಿದು ಕೃಷಿ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುತ್ತಿತ್ತು. ಅಲ್ಲದೆ, ಕುಡಿಯುವ ನೀರಿನ ಮೂಲಗಳಲ್ಲೂ ನೀರಿನ ಸಂಗ್ರಹದಿಂದ ಹಿತವಾಗಿ ಮುಂದೆ ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆಗೆ ವರವಾಗಿ ಪರಿಣಮಿಸುತ್ತಿತ್ತು. ಆದರೆ ಈ ಬಾರಿ ಮಳೆಯ ಕಣ್ಣು ಮುಚ್ಚಾಲೆಯಿಂದಾಗಿ ನೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮಳೆಗಾಲದ ಕೊನೆಯ ಅವಧಿಯಲ್ಲೇ ಮತ್ತೆ ನೀರಿನ ಬರ ಎದುರಾಗಿ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗುವ ಭೀತಿ ಕಾಡುತ್ತಿದೆ.

35 ಕೆರೆಗಳ ಪೈಕಿ, 5ಕ್ಕೆ ಮಾತ್ರ ಶೇ ೫೦ರಷ್ಟು ನೀರು. ಮಳೆ ಕೈಕೊಟ್ಟರೆ ಬಿತ್ತನೆಯಾದ ಬೆಳೆಗೂ ಕಂಟಕ ಮಳೆಗಾಲದ ಎರಡುವರೆ ತಿಂಗಳ ನಿರೀಕ್ಷಿತ ಮಳೆಯಿಲ್ಲ. ಜಿಟಿ, ಜಿಟಿ ಮಳೆಯಿಂದ ಬೆಳೆಗಿಂತ ಹೆಚ್ಚಾದ ಕಳೆ, ನಿರ್ವಹಣೆಗೆ ರೈತರ ಹೈರಾಣ. ಅಮರ್ಜಾ ಅಣೆಕಟ್ಟೆಗೆ ಬರೀ ೧೦ಅಡಿ ನೀರು, ಮುಂದಿನ ಮಳೆ ಕೈಕೊಟ್ಟರೆ ನೀರಿನ ಹಾಹಾಕಾರ. ಮುಂಜಾಗೃತೆಗಾಗಿ ತಾಲೂಕು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳು ಒತ್ತಾಯ
Contact Your\'s Advertisement; 9902492681

ಸದ್ಯ ತಾಲೂಕಿನ ಐದು ಹೋಬಳಿ ಕೇಂದ್ರಗಳಲ್ಲಿ ಬಿದ್ದ ಸಾಧಾರಣ ಮಳೆಯಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ. ಕೆಲವು ಕಡೆ ಮರು ಬಿತ್ತನೆ ಕೈಗೊಂಡಿದ್ದಾರೆ. ಇನ್ನೂ ಕೆಲವು ಭಾಗದಲ್ಲಿ ಹಂಗಾಮಿನ ಬಿತ್ತನೆಯು ವಿಳಂಬವಾಗಿ ಶುರು ಮಾಡಿದ್ದು, ಇದಕ್ಕೆ ಮಳೆಯ ಏಕಕಾಲಕ್ಕೆ ಬಾರದೆ ಇರುವುದು ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಕೃಷಿಕರ ಗಾಯದ ಮೇಲೆ ಬರೆ ಎಳೆದಿದ್ದು, ಈ ನಡುವೆ ಅನೇಕ ಕಡೆ ತೆರೆದ ಬಾವಿ, ಕೊಳವೆ ಬಾವಿಗಳಿಗೂ ನೀರಿಲ್ಲದೆ, ತೋಟಗಾರಿಕೆ ಬೆಳೆ ಉತ್ಪಾದನೆಯಲ್ಲೂ ಭಾರಿ ಕುಂಠಿತವಾಗಿದೆ ಎಂದು ರೈತ ಸಮೂದಾಯ ಅಳಲು ತೋಡಿಕೊಂಡಿದೆ. ನಿರೀಕ್ಷಿತ ಮಳೆ ಮುಂದೊಡಿದರೆ ಬಿತ್ತನೆಯಾದ ಹಲವು ಭಾಗದ ಬೆಳೆಗಳಿಗೆ ತೇವಾಂಶದ ಕೊರತೆಯು ತಳಿಹಾಕಲಾಗದು. ಕಳೆದ ವಾರ ಸುರಿದ ಜಿಟಿ, ಜಿಟಿ, ತುಂತುರು ಮಳೆಯಿಂದ ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು, ಈ ಕಳೆಯ ನಿರ್ವಾಹಣೆಗೆ ರೈತರು ಇನ್ನಿಲ್ಲದ ಹೈರಾಣ ಅನುಭವಿಸುವಂತೆ ಮಾಡಿದೆ.
ತಾಲೂಕಿನ ಏಕೈಕ ಅಮರ್ಜಾ ಅಣೆಕಟ್ಟೆಗೆ ಬರೀ ೧೦ ಅಡಿ ನೀರು ಸಂಗ್ರವಾಗಿದ್ದು, ಅದು ಸಹ ಇಂಗಿ ಯಥಾಸ್ಥಿತಿಗೆ ತಲುಪಿದರೆ, ಮುಂದಿನ ಮಳೆಗಳಲ್ಲಿ ನೀರು ಸಂಗ್ರಹವಾಗದೆ ಹೀದರೆ ಆಳಂದ ಪಟ್ಟಣ ಸೇರಿ ಕೇಂದ್ರೀಯ ವಿಶ್ವ ವಿದ್ಯಾಲಯ ಸೇರಿ ವ್ಯಾಪ್ತಿಯ ಐದು ಹಳಿಗಳಿಗೆ ನೀರಿನ ಭೀಕರ ಬರವೂ ಕಾಡಿಸುತ್ತಿದೆ.

ಒಟ್ಟು ತಾಲೂಕಿನ ೧೬ ಕೆರೆ ಹಾಗೂ ೧೯ ಜಿನುಗು ಕೆರೆ ಸೇರಿ ೩೫ ಕೆರೆಗಳ ಪೈಕಿ ಐದು ಕೆರೆಗಳಿಗೆ ಮಾತ್ರ ಶೇ ೫೦ರಷ್ಟು ನೀಡು ಸಂಗ್ರಹವಿದೆ. ಅದರಲ್ಲಿ ನರೋಣಾ, ಆಳಂದ, ತಡಕಲ್, ಸಾಲೇಗಾಂವ ಮತ್ತು ಮಟಕಿ ಕೆರೆ ಒಳಗೊಂಡಿದೆ. ಆದರೆ ಈ ಕೆರೆ ಪೂರ್ಣ ಭರ್ತಿಯಾಗಿಲ್ಲ. ೧೯ ಜಿನುಗು ಕೆರೆಗಳ ಪೈಕಿ ತಡಕಲ ಗ್ರಾಮದ ೨ ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿದ್ದು, ಅದು ಸಹ ಸೋರಿಕೆ ಶುರುವಾಗಿದ್ದರಿಂದ ಒಂದು ಕೆರೆಯ ನೀರು ಹೆಚ್ಚು ಕಾಲ ಉಳಿಯುವ ಸಾಧ್ಯಯಿಲ್ಲ. ಬಾಕಿ ೩೦ ಕೆರೆ, ನೂರಾರು ತೆರೆದ ಬಾವಿ, ಕೊಳವೆ ಬಾವಿಗಳಿಗೆ ನೀರಿಲ್ಲ. ಅಲ್ಲದೆ, ನಾಲಾ, ಬದು. ಚೆಕ್ ಡ್ಯಾಂ ಹಳ್ಳ ಕೊಳ್ಳಗಳಿಗೆ ನೀರು ಹರಿದಿಲ್ಲ. ಇದರಿಂದ ಅಂತರ್ಜಲ ಹೆಚ್ಚಳವಾಗಿಲ್ಲ. ಇದು ಮುಂದಿನ ದಿನಗಳಿಗೆ ಆತಂಕಕ್ಕೆ ಕಾರಣವಾಗಿದೆ. ಈಗಿನಿಂದಲೇ ಜಿಲ್ಲಾ ಮತ್ತು ತಾಲೂಕು ಆಡಳಿತವು ಮುಂಜಾಗೃತ ಕ್ರಮವಾಗಿ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಮೇವಿನ ಬರ ಹಿಂಗಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಮುಖಂಡರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here