ಕಲಬುರಗಿ: ಶಹಾಬಾದ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಹೋಳಿ ಹಬ್ಬದ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸೌಹಾರ್ದತೆಯಿಂದ ಹಬ್ಬ ಆಚರಿಸಿದರು.
ನಗರ ವಿವಿಧಾ ಬಡಾವಣೆಗಳಲ್ಲಿ ಪ್ರತಿಷ್ಟಾಪಿಸಿದ್ದ ಕಾಮಣ್ಣರ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳವಾರ ರಾತ್ರಿಯೇ ಕಾಮದಹನ ಮಾಡಲಾಯಿತು.ಶುಕ್ರವಾರ ಬೆಳಗ್ಗೆಯಿಂದಲೇ ಮಕ್ಕಳು ,ಯುವಕರು ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಬಣ್ಣದ ನೀರು ತುಂಬಿದ ಮಡಿಕೆಯನ್ನು ಮೇಲಕ್ಕೆ ಕಟ್ಟಿ ಅದನ್ನು ಒಡೆದು ಹಾಕುವ ಆಟ ಎಲ್ಲರ ಗಮನ ಸೆಳೆಯಿತು.ರಸ್ತೆ ಮೇಲೆ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಹೋಳಿಯ ಬಣ್ಣ ಎರಚುತ್ತಿರುವ ದೃಶ್ಯ ಸಾಮನ್ಯವಾಗಿತ್ತು.ಹೋಳಿ ಹಬ್ಬದ ನಿಮಿತ್ಯ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹಬ್ಬವನ್ನು ಆಚರಿಸಿದರು.