ಸಂಭ್ರಮದ ಹೋಳಿ ಹಬ್ಬ ಆಚರಣೆ

0
33

ಕಲಬುರಗಿ: ಶಹಾಬಾದ ನಗರದಲ್ಲಿ ವಿಶ್ವಹಿಂದು ಪರಿಷತ್ ವತಿಯಿಂದ ಬುಧವಾರ ಆಚರಿಸಲಾದ ಹೋಳಿ ಹಬ್ಬವನ್ನು ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ನಗರದ ಶಾಸ್ತ್ರೀ ಚೌಕದಿಂದ ಶ್ರೀರಾಮ ಮಾರುಕಟ್ಟೆವರೆಗೆ ಟ್ರ್ಯಾಕ್ಟರ್‍ಗಳಲ್ಲಿ ಸಾಲಾಗಿ ನಿಲ್ಲಿಸಿ ಅದರಲ್ಲಿರುವ ಬ್ಯಾರೆಲಗಳಲ್ಲಿ ಬಣ್ಣವನ್ನು ತುಂಬಲಾಗಿತ್ತು. ಪರಸ್ಪರ ಬಣ್ಣ ಎರೆಚುವ ಮೂಲಕ ಹಬ್ಬದ ಆಚರಣೆಯಲ್ಲಿ ತೊಡಗಿದ್ದು ಕಂಡು ಬಂತು. ಅಲ್ಲದೇ ನಗರದ ಭಾರತ್ ವೃತ್ತದಲ್ಲಿ ಮಡಿಕೆ ಓಡೆಯುವ ಯುವಕರ ಸಾಹಸಮಯ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

Contact Your\'s Advertisement; 9902492681

ಅಲ್ಲದೇ ಟ್ರ್ಯಾಕ್ಟರ್‍ಗಳಲ್ಲಿ ಬಣ್ಣ ತುಂಬಿದ ಬ್ಯಾರೆಲ್‍ಗಳ ಮುಖಾಂತರ ನೀರು ಎರಚುವ ಮೂಲಕ ರಂಗು ರಂಗಿನಲ್ಲಿ ಸಾರ್ವಜನಿಕರು ತೇಲಾಡಿದರು. ಅಲ್ಲದೇ ಯುವಕರು ರಂಗಿನಾಟದಲ್ಲಿ ಪಾಲ್ಗೊಳ್ಳದ ಯುಕರನ್ನು ಓಢಾಡಿಸಿ ಅವರಿಗೆ ಬಣ್ಣ ಎರಚುವುದು ಮನರಂಜನೀಯವಾಗಿತ್ತು. ಪರಸ್ಪರ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸಿದರು. ನಗರದ ಬಡಾವಣೆಗಳಲ್ಲಿ ಪ್ರತಿಷ್ಟಾಪಿಸಿದ್ದ ಕಾಮಣ್ಣರ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳವಾರÀ ರಾತ್ರಿಯೇ ಕಾಮದಹನ ಮಾಡಲಾಯಿತು.ಶುಕ್ರವಾರ ಬೆಳಗ್ಗೆಯಿಂದಲೇ ಮಕ್ಕಳು ,ಯುವಕರು ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಅಲ್ಲದೇ ಭಾರತ್ ಚೌಕನಲ್ಲಿ ಎಲ್ಲರೂ ಸೇರಿಕೊಂಡು ಪರಸ್ಪರ ಹೋಳಿ ಶುಭಾಶಯ ಕೋರಿ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು. ಹಬ್ಬದ ನಿಮಿತ್ಯ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here