ಸಂಸದ ಮುನಿಸ್ವಾಮಿ ಬಂಧನಕ್ಕೆ ಅ.ಭಾ ಜನವಾದಿ ಮಹಿಳಾ ಸಂಘಟನೆ ಆಗ್ರಹ

0
47

ಕಲಬುರಗಿ: ಹಣೆಗೆ ಬೊಟ್ಟು ಇಟ್ಟಿಲ್ಲ ಎಂಬ ಕಾರಣಕ್ಕೆ, ಗಂಡ ಬದುಕಿಲ್ವಾ ಎಂದು ಹೀಯಾಳಿಸಿ ಅತ್ಯಂತ ಕಠೋರವಾಗಿ ನಿಂದಿಸಿರುವ ಬಿಜೆಪಿ ಸಂಸದ ಮುನಿಸ್ವಾಮಿ  ತಾಲಿಬಾನ್ ಭಯೋತ್ಪಾದಕರಂತಹ ನಡವಳಿಕೆ ಹೊಂದಿದ್ದು, ಸಂವಿಧಾನದ ಮೇಲೆ ಪ್ರತಿಜ್ಞೆ ಸ್ವೀಕರಿಸಿ ಸಂಸದರಾಗಿರುವ ಮುನಿಸ್ವಾಮಿ ಸಂಸದ ಸ್ಥಾನಕ್ಕೆ ಹಾಗೂ ಸಂವಿಧಾನದ ಪ್ರತಿಜ್ಞೆಗೆ ಅಪಮಾನ ಮಾಡಿದಕ್ಕೆ ಕೂಡಲೇ ಸಂಸದ ಸ್ಥಾನದಿಂದ ಉಚ್ಚಾಟಿಸಿ ಬಂಧಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಮತ್ತು ರಾಜ್ಯ ಉಪಾದ್ಯಕ್ಷೆ ಕೆ ನೀಲಾ ಆಗ್ರಹಿಸಿದ್ದಾರೆ.

ದುಡಿಮೆ ಮತ್ತು ಪರಿಶ್ರಮಕ್ಕಿರುವ ಇನ್ನೊಂದು ಹೆಸರೇ ಮಹಿಳೆ. ಇಡೀ ಪ್ರಪಂಚವೇ ಇಂದು  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ, ಮಹಿಳೆಯರ ಅಪಾರ ಶ್ರಮ ಹಾಗೂ ಕೊಡುಗೆಯನ್ನು ಕೊಂಡಾಡುತ್ತಿದೆ. ಮಹಿಳೆಯರು ದೌರ್ಜನ್ಯ – ಹಿಂಸೆ ಮುಕ್ತ ಬದುಕಿಗಾಗಿ ಸಮಾನತೆ ,ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ಪ್ರಜ್ಞೆ ಯನ್ನು ತೀವ್ರವಾಗಿ ಬೆಳೆಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ನಡವಳಿಕೆ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಿ ನಾಗರಿಕ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಂದ ವಂಚಿಸುವ ಹುನ್ನಾರವಾಗಿದೆ. ಧರ್ಮ, ಆಚರಣೆ, ಉಡುಗೆ-ತೊಡುಗೆ ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ. ಈ ಕುರಿತು ಪ್ರಶ್ನಿಸುವ ಹೇರುವ ಅಧಿಕಾರ ಯಾರಿಗೂ ಇಲ್ಲ. ಈ ಮುನಿಸ್ವಾಮಿ ಎಂಬ ಸಂಸದರಿಗೆ ಮಹಿಳೆಯೊಬ್ಬರ ಬಗ್ಗೆ ಅನಾಗರೀಕವಾಗಿ ನಡೆದುಕೊಳ್ಳಲು ಯಾವ ಅಧಿಕಾರವೂ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪುರುಷ ಪ್ರಧಾನ ಮೌಲ್ಯಗಳನ್ನು ,ಬ್ರಾಹ್ಮಣಶಾಹಿ ಮೌಲ್ಯಗಳನ್ನು ವೈಭವೀಕರಿಸಿ, ಸಂವಿಧಾನ ಬದ್ದ ಹಕ್ಕುಗಳನ್ನು ನಿಂದಿಸುವ ,ನಾಗರಿಕ ಸ್ವಾತಂತ್ರ್ಯ ವನ್ನು ಕಿತ್ತುಕೊಳ್ಳುವ ಬಿಜೆಪಿ ಸಂಸದರ  ಮಹಿಳಾ ವಿರೋಧಿ ಪಾಳೇಗಾರಿ ನಡವಳಿಕೆಯನ್ನು  ಮಹಿಳೆಯರು ಸೇರಿದಂತೆ ಎಲ್ಲಾ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರೇಮಿಗಳು ತೀವ್ರವಾಗಿ ಖಂಡಿಸಬೇಕು. ಕೂಡಲೇ ಈ ಮುನಿಯಪ್ಪನ ಸದಸ್ಯತ್ವ ರದ್ದಾಗಬೇಕು. ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಯ ಚಂದಮ್ಮ ಗೋಳಾ,  ಪದ್ಮಿನಿ ಕಿರಣಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here