-
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರವಾದ ಯೋಜನೆ ಬರಲಿದೆ- ಡಾ.ರಶೀದ್
ಕಲಬುರಗಿ: ಶಹಾಬಾದ ನಗರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ಅಭಿಯಾನಕ್ಕೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ. ಡಾ.ರಶೀದ್ ಮರ್ಚಂಟ ಚಾಲನೆ ನೀಡಿದರು.
ಶಹಾಬಾದ ನಗರದ ವಾರ್ಡ 11,12,13 ರ ಪ್ರತಿಯೊಬ್ಬ ಮತದಾರನ ಮನೆಗೆ ಬೇಟಿ ನೀಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರವಾದ ಯೋಜನೆ ಬರಲಿದೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪೆÇ್ರೀತ್ಸಾಹ ಧನ ಮತ್ತು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ ಎಂದು ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ಕೊಟ್ಟು ಭರವಸೆ ನೀಡಿದರು. ರಾಜ್ಯದಲ್ಲಿ ಶೇ40ರಷ್ಟು ಕಮಿಷನ್ ಬಿಜೆಪಿ ಸರ್ಕಾರವಿದೆ. ದೇಶದಲ್ಲಿ ಲಂಚಾವತಾರ ಹೆಚ್ಚಾಗಿದೆ. ಇಂದು ಸಾಮಾನ್ಯ ಜನರು ಜೀವನ ಮಾಡಲು ಕಷ್ಟಪಡುವಂತಾಗಿದೆ. ರಾಜ್ಯ ಪ್ರವಾಹದಲ್ಲಿ ತತ್ತರಿಸಿದ್ದಾಗ ಯಾರು ಬಂದು ನೋಡಲಿಲ್ಲ. ಈಗ ಮತ ಪಡೆಯಲು ಮಾತ್ರ ದೆಹಲಿಯಿಂದ ರಾಜ್ಯಕ್ಕೆ ಆಗಾಗ ಬರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಸುರೇಶ ನಾಯಕ ಮಾತನಾಡಿ, ಬಿಜೆಪಿ ಈಗ ದ್ವೇಷದ ರಾಜಕೀಯಕ್ಕೆ ಮುಂದಾಗಿ ಕಾಂಗ್ರೆಸ್ ನಾಯಕರನ್ನು ಮುಗಿಸಿ ಎಂಬಂಥ ಕೀಳು ಹೇಳಿಕೆ ನೀಡುತ್ತಿದೆ. ಬಿಜೆಪಿಯವರದ್ದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಕರಪ್ಷನ್ ಸರಕಾರ ಎಂದರು. ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಕಾರ್ಡ್ ಪ್ರತಿ ಬೂತ್ ನ ಮನೆ ಮನೆಗೂ ನೀಡಬೇಕು. ಈ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ನೀಡಿ ನಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಆದ್ದರಿಂದ ಎಲ್ಲರೂ ಒಟ್ಟಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ವಕ್ತಾರರಾದ ಪೀರ ಪಾಶಾ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಮೋಸ ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತಿದೆ.ಗ್ಯಾಸ್ ಮತ್ತು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನರು ತ್ತರಿಸಿ ಹೋಗಿದ್ದಾರೆ.ಆದ್ದರಿಂದ ಈ ಬಾರಿ ಮೋಸ ಹೋಗದೇ ಜನಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿ ಎಂದರು.
ಈ ಅಭಿಯಾನದಲ್ಲಿ ಯುವ ಘಟಕದ ಅಧ್ಯಕ್ಷ ಕಿರಣ ಚೌಹಾಣ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಷಮ ಖಾನ, ಕುಮಾರ ಚೌಹಾಣ, ಅಹ್ಮದ ಪಟೇಲ, ಸಾಹೇಬಗೌಡ ಬೊಗುಂಡಿ, ಬಾಬು ಆಶಪ್ಪಾ, ಮಹೇಬೂಬ, ದಿಲೀಪ ನಾಯಕ, ಅನ್ವರ ಪಾಶಾ, ನರಸಿಂಗ ರಾಠೋಡ, ದೇವರಾಜ ರಾಠೋಡ, ಮೇರಾಜ ಸಾಹೇಬ, ಗೋಪಾಲ ಪವಾರ, ಚಂದರ ನಾಯಕ ಇದ್ದರು.