ಕಲಬುರಗಿ: ಜೇವರ್ಗಿ ಪಟ್ಟಣದ ಹಳೆಯ ತಹಸೀಲ್ ಕಛೇರಿಯ ಪಕ್ಕದಲ್ಲಿ ನೆಲದ ಮೇಲೆ ಇರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಹೊಸದಾಗಿ ಕಟ್ಟಡ ಮಾಡಿ ಮೂರ್ತಿ ಸ್ಥಾಪನೆ ಮಾಡಬೇಕೆಂದು ಹೈದ್ರಾಬಾದ ಕರ್ನಾಟಕ, ಗೊಂಡ, ರಾಜಗೊಂಡ, ಕಾಡುಕುರುಬ, ಜೈನಕುರುಬ (ಪ.ಪ) ಸಂಘದ ಪದಾಧಿಕಾರಿಗಳು ಸೇರಿ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ನಮ್ಮ ವಿಭಾಗಿಯ ಗೊಂಡ ಸಂಗದ ವತಿಯಿಂದ ಹಾಗೂ ಕುರುಬ ಸಮಾಜದ ವತಿಯಿಂದ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಇವರು ಸ್ವತಂತ್ರ ಸೇನಾನಿ, ದೇಶಭಕ್ತ, ಕಿತ್ತೂರು ಸಂಸ್ಥಾನದ ಜಲಜಟ್ಟಿ ವೀರ ಶೂರ ಸೇನಾನಿ, ಆಗಿ ಈ ದೇಶಕ್ಕಾಗಿ ತಮ್ಮ ಪ್ರಾಣ ಬಲಿ ಕೊಟ್ಟವರು. ಈ ಮಹಾದೇಶ ಭಕ್ತನ ಪ್ರತಿಮೆಯು ಜೇವರ್ಗಿ ಪಟ್ಟಣದಲ್ಲಿ ಬೆಂಗಳೂರಿಗೆ ಹೋಗುವ ಮುಖ್ಯ ಹೆದ್ದಾರಿಯ ಪಕ್ಕದಲ್ಲಿ ಇರುತ್ತದೆ.
ಸದರಿ ಪ್ರತಿಮೆ ನೆಲದ ಮೇಲೆ ಇರುತ್ತದೆ, ಇದರಿಂದ ಮಹಾನ್ ದೇಶಭಕ್ತರಿಗೆ ಅಪಮಾನ ಮಾಡಿದ0ತಾಗುತ್ತಿದೆ.
ಆದ ಕಾರಣ ಮಾನ್ಯರಾದ ತಾವುಗಳು ಈ ವಿಷಯದ ಬಗ್ಗೆ ಗಮನಹರಿಸಿ ಸ್ವತಂತ್ರ ಸೇನಾನಿಯಾದ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರ ಮೂತಿಯನ್ನು ಅದೇ ಸ್ಥಳದಲ್ಲಿ ನೆಲದಿಂದ ಎತ್ತರದಲ್ಲಿ ಪದ್ದತಿ ಪ್ರಕಾರ, ಕಟ್ಟಡ ನಿರ್ಮಾಣ ಮಾಡಿ ಇವರ ಪ್ರತಿಮೆ ಮೂರ್ತಿಯನ್ನು ಹೊಸದಾಗಿ ಸ್ಥಾಪನೆ ಮಾಡಲು ತಮ್ಮ ಅನುದಾನದಲ್ಲಿ ಅಥವಾ ವೈಯಕ್ತಿಕವಾಗಿ ಅನುಧಾನವನ್ನು ಅತಿಶೀಘ್ರದಲ್ಲಿ ಬಿಡುಗಡೆ ಮಾಡಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ. ಅಧ್ಯಕ್ಷ ಎಸ್.ಎಮ್.ರಾಯಪಲ್ಲಿ, ಸಹ ಕಾರ್ಯದರ್ಶಿ ಶಿವಾಜಿ ಎಸ್.ಪಟ್ಟಣ, ನಾಗಪ್ಪ ಎಮ್ ಪೂಜಾರಿ, ಗುಂಡಪ್ಪಾ ಇವಣೆ, ಪೀರಪ್ಪಾ ಸಿರಸಗಿ ಸೇರಿದಂತೆ ಇತರರು ಇದ್ದರು.