ಕಲಬುರಗಿ: ಜೈ ಭಾರತ ಮಾತಾ ಸೇವಾ ಸಮಿತಿ ನವ ದೆಹಲಿ ವತಿಯಿಂದ ಮಾರ್ಚ 23 ರಂದು ಭಾರತ ಪಾಕಿಸ್ತಾನ ಬಾರ್ಡರ್ ಸರ ಹದ್ದಿನಲ್ಲಿರುವ ಶಹೀದ ಭಗತ್ ಸಿಂಗ್ ರವರ ಪುರವಿಕರ್ ಜನ್ಮ ಸ್ಥಳ ವಾದ ಪಂಜಾಬ್ ರಾಜ್ಯದ ಖಠ್ಕರ್ ಕಲಾನ್ ಎಂಬಲ್ಲಿ ವೀರ ಅಮರ ಬಲಿದಾನದ ದಿನಾಚರಣೆ ಆಚರಿಸಲು ಪರಮ ಪೂಜ್ಯ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಾಹಾರಾಜರ ದಿವ್ಯ ನೇತೃತ್ವದಲ್ಲಿ ಸಹಸ್ರಾರು ದೇಶ ಭಕ್ತರು ಮಾ. 15 ಬುಧುವಾರ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಹತ್ತಿರದ ಭಾರತ ಮಾತಾ ಮಂದಿರ ದಿಂದ ದೇಶ ಭಕ್ತಿಯಾತ್ರೆಗೆ ಹೊರಡಲಿದ್ದಾರೆ.
ಯಾತ್ರೆ ಪ್ರಾರಂಭದ ಪೂರ್ವದಲ್ಲಿ ಎಲ್ಲಾ ದೇಶ ಭಕ್ತರು ಭಾರತ ಮಾತೆಯ ಮಂದಿರದಲ್ಲಿ ನ ದಿವ್ಯ ಭಾರತ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ, ಅರ್ಚನೆ ನೆರವೇರಿಸಿ ಭಾರತ ಮಾತೆಗೆ ಜಯಕಾರದ ಘೋಷಣೆ ಗಳನ್ನು ಮೊಳಗಿಸಿ ದೇಶ ಭಕ್ತಿ ಯಾತ್ರೆಯನ್ನು ಪ್ರಾರಂಭಿಸಿದರು.
ಮಾಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದೇಶ ಭಕ್ತರು ನೂರಾರು ವಾಹನ ಗಳೊಂದಿಗೆ ಈ ದೇಶ ಭಕ್ತಿ ಯಾತ್ರೆಯಲ್ಲಿ ಪಾಲ್ಗೊಂಡಿರುವರು.
ಈ ಯಾತ್ರೆಯು ಕರ್ನಾಟಕ, ಮಾಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಹರಿಯಾಣಾ ರಾಜ್ಯಗಳಲ್ಲಿ ಸಂಚರಿಸಿ ಮಾರ್ಚ 22 ರಂದು ಪಂಜಾಬ ರಾಜ್ಯದಲ್ಲಿ ಪ್ರವೇಶ ಮಾಡಲಿರುವುದು.
ನಿಸ್ವಾರ್ಥ ಮನೋಭಾವದಿಂದ ಕೇವಲ ದೇಶ ಭಕ್ತಿ ಯೊಂದನ್ನೇ ಗುರಿಯಾಗಿಸಿಟ್ಟು ಕೊಂಡು ದೇಶದೆಲ್ಲೆಡೆ ದೇಶ ಭಕ್ತಿ ಯ ಸಂದೇಶ ಹೊತ್ತು ಸಾಗುತ್ತಿರುವ ಈ ದೇಶ ಭಕ್ತಿ ಯಾತ್ರೆಯು ಶುಭಕರ ವಾಗಿ ನಿರ್ವಿಘ್ನವಾಗಿ ಸಾಗಲಿ ಎಂದು ನಾವು ನೀವೆಲ್ಲರೂ ತಾಯಿ ಭಾರತತಾಂಬೆಯಲ್ಲಿ ಪ್ರಾರ್ಥಿಸೋಣ ಹಾಗೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯ ಜೀವದ ತ್ಯಾಗ ಬಲಿದಾನ ನೀಡಿರುವ ಎಲ್ಲಾ ಸ್ವಾತಂತ್ರ್ಯ ವೀರ ಹೋರಾಟಗಾರರನ್ನು ಸಮಸ್ತ ದೇಶವಾಸಿಗಳು ಸದಾ ಅವರನ್ನು ಸ್ಮರಿಸಿ ಗೌರವಿಸದರೊಂದಿಗೆ ಅವರ ತತ್ವ ಸಿದ್ಧಾಂತಗಳನ್ನು ದೇಶದ ಪ್ರತಿಯೊಬ್ಬರ ಮನೆಗಳಿಗೆ ಹಾಗೂ ಅವರ ಮನಗಳಿಗೆ ಮುಟ್ಟಿಸುವಂಥ ಕೆಲಸ ಮಾಡಿ ದೇಶದ ಐಕ್ಯತೆ ನಾವೇಲರು ಕೂಡಿಕೊಂಡು ಕಾಪಡಬೇಕಾಗಿದೆ ಎಂದು ಜೈ ಭಾರತ್ ಮಾತಾ ಸೇವಾ ಸಮಿತಿ ನವದೆಹಲಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಝಳಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.