ಕಲಬುರಗಿ: ಇತ್ತೀಚಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ತಾಲ್ಲೂಕಾ ಮಟ್ಟದ ಕ್ರೀಡಾಕೂಟದ ನೇರ ಆಯ್ಕೆಯಲ್ಲಿ ನಗರದ ರೇವಣಸಿದ್ದೇಶ್ವರ ಕಾಲೋನಿಯ ಶ್ರೀ ದಾಮೋಧರ ರಘೋಜಿ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಡಿ.ರಘೋಜಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಕುಮಾರಿ ಜ್ಯೋತಿ, ಕೀರ್ತಿ, ಸ್ನೇಹಾ, ಕೃತಿಕಾ, ಅಕ್ಷತಾ ಕರಾಟೆಯಲ್ಲಿ ಪ್ರಥಮ ಸ್ಥಾನ, ಕುಮಾರಿ ಸಾಕ್ಷಿ, ಜ್ಯೋತಿ ಕೃತಿಕಾ ಚೆಸ್ ನಲ್ಲಿ ಪ್ರಥಮ ಸ್ಥಾನ, ಯೋಗ ಸ್ಪರ್ಧೆಯಲ್ಲಿ ಸಾಗರ ಪ್ರಥಮ ಸ್ಥಾನ, ಕಲಾತ್ಮಕ ಯೋಗದಲ್ಲಿ ಭೂಮಿಕಾ ಹಾಗೂ ರಿದಮಿಕ್ ಯೋಗದಲ್ಲಿ ಸುಷ್ಮಾ ಮತ್ತು ತಂಗಡಿಗರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮೀರಾ ಆರ್. ರಘೋಜಿ, ಕಪನೂರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಲ್ಲಿನಾಥ ಪಾಟೀಲ, ಹಾಗೂ ಮುಖ್ಯಗುರುಗಳಾದ ವೃಶಾಲಿ ಪಾಟೀಲ, ಶೈಲಜಾ ಮೂರ್ತಿ ಅಭಿನಂದಿಸಿದ್ದಾರೆ.