ಕಾಡಾ ಕಚೇರಿ ಸ್ಥಳಾಂತರಿಸಿದರೆ ಸುರಪುರ ಬಂದ್; ಮುಖಂಡರ ಎಚ್ಚರಿಕೆ

0
7

ಸುರಪುರ: ನಗರದ ಹಸನಾಪುರ ಕ್ಯಾಂಪ್‍ಲ್ಲಿರುವ ಕೆಬಿಜೆಎನ್‍ಎಲ್ ಹೊರಗಾಲುವೆಯ ಕಾಡಾ ಕಚೇರಿ ಸಂಖ್ಯೆ 2ನ್ನು ಬಾಗಲಕೋಟೆಗೆ ಸ್ಥಳಾಂತರಿಸುವುದನ್ನು ವಿರೋಧಿ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದ ನಾಲ್ವಾಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಬೀದರ-ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ನಮ್ಮ ಭಾಗದ ರೈತರಿಗೆ ಅನುಕೂಲಕರವಾಗಿದ್ದ ಕಾಡಾ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರಿಸುವ ಮೂಲಕ ಸರಕಾರ ನಮ್ಮ ಭಾಗದ ರೈತರ ಜೀವದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ,ಯಾವುದೇ ಕಾರಣಕ್ಕೂ ಕಚೇರಿ ಸ್ಥಳಾಂತರಿಸಬಾರದು ಒಂದು ವೇಳೆ ಸ್ಥಳಾಂತರ ಕೈಬಿಡದಿದ್ದಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು,ಅಲ್ಲದೆ ಶನಿವಾರ ನಗರಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಆಗಮಿಸುತ್ತಿದ್ದು ಸಚಿವರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ಸೋವಾರ ಸುರಪುರ ಬಂದ್‍ಗೂ ಕರೆ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು,ಅಲ್ಲದೆ ದೂರದ ಪ್ರಯಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂತು.ನಂತರ ಕೆಬಿಜೆಎನ್‍ಎಲ್ ಭೀಮರಾಯನಗುಡಿ ಕಚೇರಿಯ ಆಡಳಿತಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದೇವಿಂದ್ರಪ್ಪ ಪತ್ತಾರ,ನಾಗಣ್ಣ ಕಲ್ಲದೇವನಹಳ್ಳಿ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ,ನಿಂಗಣ್ಣ ಗೋನಾಲ,ಬಸವರಾಜ ದೊಡ್ಮನಿ,ಹುಲಗಪ್ಪ ದೇವತ್ಕಲ್,ಭೀಮರಾಯ ಕಡಿಮನಿ,ನಾಗರಾಜ ಗೊಗಿಕೇರಾ,ನಾಗರಾಜ ಓಕಳಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here