ನಗರಸಭೆಯ ಪೌರಾಯುಕ್ತರ ಆಡಳಿತ ವೈಖರಿ ಖಂಡಿಸಿ ಸಭೆ ಬಹಿಷ್ಕರಿಸಿದ ಸರ್ವಸದಸ್ಯರು

0
174

ಶಹಾಬಾದ: ನಗರಸಭೆಯ ಸಭಾಂಗಣದಲ್ಲಿ ಶನಿವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರವರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಬಜೆಟ್ ಸಭೆಯನ್ನು ನಗರಸಭೆಯ ಪೌರಾಯುಕ್ತರ ಆಡಳಿತ ವೈಖರಿ ಖಂಡಿಸಿ ಸರ್ವ ಸದಸ್ಯರು ಬಹಿಷ್ಕರಿಸಿದಂತ ಘಟನೆ ನಡೆಯಿತು.

ಬೆಳಿಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸರ್ವ ಸದಸ್ಯರ ಬಜೆಟ್ ಸಭೆಗೆ ನಗರಸಭೆಯ ಸದಸ್ಯ ಶ್ರವಣಕುಮಾರ ಒಬ್ಬರು ಮಾತ್ರ ಸಭಾಂಗಣದಲ್ಲಿ ಬಂದು ಕುಳಿತರು. ಸುಮಾರು 12 ಗಂಟೆಯವರೆಗೆ ಯಾವ ಸದಸ್ಯರು ಸಭೆ ಆಗಮಿಸಿದೇ ಇರುವುದರಿಂದ ಸಭಾಂಗಣದಲ್ಲಿ ಖಾಲಿ ಖಾಲಿ ಕುರ್ಚಿಗಳು ಕಾಣುತ್ತಿದ್ದವು.ಸರ್ವ ಸದಸ್ಯರು ಸಭೆಗೆ ಹೋಗದೇ ನಗರಸಭೆಯ ಮುಂಭಾಗದಲ್ಲಿ ಕುಳಿತು ನಗರಸಭೆಯ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಸದಸ್ಯರು, ನಗರಸಭೆಯ ಸರ್ವ ಸದಸ್ಯರಾದ ನಾವು ನಮ್ಮ ವಾರ್ಡನಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಪೌರಾಯುಕ್ತರಿಗೆ ಮನವಿ ಮಾಡಿದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ.ಕನಿಷ್ಠ ಪಕ್ಷ ಚಿಕ್ಕ ಪುಟ್ಟ ಸಮಸ್ಯೆಗಳನ್ನಾದರೂ ಬಗೆಹರಿಸುವ ನಿಟ್ಟಿನಲ್ಲೂ ಕ್ರಮಕೈಗೊಳ್ಳುತ್ತಿಲ್ಲ. ಮುಟೇಷನ್, ಖಾತಾ ಇತರ ಕೆಲಸಕ್ಕಾಗಿ ಇಲ್ಲದ ಕಾಗದ ಪತ್ರಗಳನ್ನು ಕೇಳಿ ಸತಾಯಿಸುತ್ತಿದ್ದಾರೆ. ಸಾರ್ವಜನಿಕರು ತಿಂಗಳುಗಟ್ಟಲೇ ಕಚೇರಿಗೆ ಅಲೆದಾಡುವಂತ ಆಗಿದೆ.ಇದರಿಂದ ನಗರಸಭೆ ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದೆ.

ಇದರಿಂದ ನಗರಸಭೆಯ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ. ವಾರ್ಡನ ಜನರಿಂದ ಉಗುಳಿಸಿಕೊಳ್ಳುವಂತ ಪರಿಸ್ಥಿತಿ ಚುನಾಯಿತ ಪ್ರತಿನಿಧಿಗಳಿಗೆ ತಂದಿಟ್ಟಿದ್ದಾರೆ. ಯಾವುದೇ ಸಣ್ಣಪುಟ್ಟ ಸಮಸ್ಯೆಗಳನ್ನು ತಮ್ಮ ವಾರ್ಡನಲ್ಲಿ ಕೆಲಸ ಮಾಡಿಕೊಳ್ಳಿ.ಅದಕ್ಕೆ ತಗುಲುವ ವೆಚ್ಚವನ್ನು ನಗರಸಭೆಯಿಂದ ನೀಡಲಾಗುವುದೆಂದು ಹೇಳುತ್ತಾರೆ.ಆದರೆ ಕೆಲಸ ಮಾಡಿದ ಮೇಲೆ ಬಿಲ್ ನೀಡಲೂ ಸತಾಯಿಸುವ ಕೆಲಸ ನಡೆದಿದೆ.

ಈ ಹಿಂದೆ ಪೌರಾಯುಕ್ತರ ಆಡಳಿತ ನಿರ್ಲಕ್ಷ್ಯತನವನ್ನು ಖಂಡಿಸಿ ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ಸರ್ವ ಸದಸ್ಯರ ನಿಯೋಗ ಜಿಲ್ಲಾಧಿಕಾರಿಗೆ ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರಿಗೆ ತಿಳಿಸಲಾಗಿತ್ತು.ಅಲ್ಲದೇ ಉತ್ತಮ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಲಾಗಿತ್ತು.ಆದರೂ ಅದಕ್ಕೆ ಅವರು ಕ್ಯಾರೇ ಎನ್ನದೇ, ಅವರನ್ನೇ ಮುಂದುವರಿಸಿರುವುದರಿಂದ ಸರ್ವ ಸದಸ್ಯರು ಬಜೆಟ್ ಸಭೆಯನ್ನು ಬಹಿಷ್ಕರಿಸುವಂತಾಗಿದೆ. ಪೌರಾಯುಕ್ತರ ನಡೆ ಇದಕ್ಕೆಲ್ಲಾ ಕಾರಣ.ಆದ್ದರಿಂದ ಪೌರಾಯುಕ್ತರ ಬದಲಾವಣೆ ಮಾಡಿ ಉತ್ತಮ ಅಧಿಕಾರಿ ನೇಮಿಸದಿದ್ದರೇ ಧರಣಿ ಹಮ್ಮಿಕೊಳ್ಳುತ್ತೆವೆ ಎಂದರು.

ನಗರಸಭೆಯ ಪೌರಾಯುಕ್ತ ಬಸವರಾಜ ಹೆಬ್ಬಾಳ ಅವರು ನಗರಸಭೆಯ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಐದಾರು ಬಾರಿ ಮನವಿ ಮಾಡಿದರೂ ಯಾವೊಬ್ಬ ಸದಸ್ಯರು ಸ್ಪಂದಿಸದೇ, ಸಭೆಯನ್ನು ಬಹಿಷ್ಕರಿಸಿದರು.

ಚುನಾಯಿತ ಪ್ರತಿನಿಧಿಗಳಾದ ನಮ್ಮ ವಾರ್ಡಗಳಲ್ಲಿ ಇರುವ ಸಮಸ್ಯೆಗಳ ಕುರಿತು ತಿಳಿಸಿದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ.ಇದರಿಂದ ಜನರಿಗೆ ಮುಖ ತೋರಿಸದಂತಾಗಿದೆ. ಪೌರಾಯುಕ್ತರ ಆಡಳಿತ ವೈಖರಿ ಹಾಗೂ ನಡೆಯನ್ನು ಖಂಡಿಸಿ ಸಭೆಯನ್ನು ಬಹಿಷ್ಕರಿಸಿದ್ದೆವೆ. ಇದು ಮುಂದುವರಿಯುತ್ತದೆ- ಸೂರ್ಯಕಾಂತ ಕೋಬಾಳ ನಗರಸಭೆಯ ಸದಸ್ಯ.

ನಗರೋತ್ಥಾನ ಯೋಜನೆಯಡಿ ಬಸವೇಶ್ವರ ವೃತ್ತದಿಂದ ಕನಕದಾಸರ ವೃತ್ತದವರೆಗಿನ ರಸ್ತೆ ಕಾಮಗಾರಿ ಮಾಡದೇ ಬಿಲ್ ಪಾವತಿ ಮಾಡಲಾಗಿದೆ.ಅಲ್ಲದೇ ಈಗ ಅದೇ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಯಾವ ಯೋಜನೆ ಎಂಬುದು ಯಾರಿಗೂ ಗೊತ್ತಿಲ್ಲ.ಸಾರ್ವಜನಿಕರ ತೆರಿಗೆ ಹಣ ವಂಚನೆ ನಡೆದಿದೆ. – ನಾಗರಾಜ ಕರಣಿಕ್ ನಗರಸಭೆಯ ಸದಸ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here