“ಮನೆಯಿಂದಾನೆ ಯುಗಾದಿ”

0
15

“ಮನೆಯಿಂದಾನೆ ಯುಗಾದಿ”
ಯುಗದ ಆದಿ ದಿನವಿಂದು ಯುಗಾದಿ.
ಹರುಷದ ಹಾದಿ ಹೊಸ ವರ್ಷದ ದಿನವಿದು ಯುಗಾದಿ.
ಕರೋನಾದಿಂದ ಅಳಿಸಲಾಗದ ಘಟಿಮನಸ್ಸಿನ
“ಮೆನೆಯಿಂದಾನೆ ಯುಗಾದಿ”.

ಬ್ರಹ್ಮ ದೇವನು ವಿಶ್ವ ಸೃಷ್ಟಿಸಿದ ದಿನವಿದು ಯುಗಾದಿ.
ವರ್ಷದ ಆರಂಭದ ದಿನವಿದು ಯುಗಾದಿ.
ಕರೋನಾದಿಂದ ತಡೆಯಲಾಗದ ಸುಚಿ ಮನಸ್ಸುಗಳ ಹಬ್ಬವಿದು
“ಮೆನೆಯಿಂದಾನೆ ಯುಗಾದಿ”.

Contact Your\'s Advertisement; 9902492681

ಚೈತ್ರಶುದ್ದ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ
ಜೀವಸಂಕುಲವು ಜನಸಿದ ದಿನವಿದು ಯುಗಾದಿ.
ಕರೋನಾದಿಂದ ನಮ್ಮಿಂದ ಅಗಲಿಸಲಾಗದ ಹಬ್ಬವಿದು
“”ಮನೆಯಿಂದಾನೆ ಯುಗಾದಿ””.

ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕವಾದ ದಿನವಿದು ನಮ್ಮ ಯುಗಾದಿ.
ಚೀದಿರಾಜ್ಯದರಸನಿಗೆ ಇಂದ್ರನು ವೈಜಯಂತಿ ಮಾಲೆಯನ್ನು
ಕೊಟ್ಟ ದಿನವಿದು ಯುಗಾದಿ.
ಕರೋನಾದಿಂದ ನಮ್ಮ ಆಚರಣೆ ನಿಲ್ಲದ ಹಬ್ಬವಿದು
“”ಮೆನಯಿಂದಾನೆ ಯುಗಾದಿ””

ವಿಶ್ವಕ್ಕೆ ಬೆಳಕು ನೀಡಿದ ಸೂರ್ಯಚಂದ್ರರನ್ನು ಪೂಜಿಸುವ
ಪವಿತ್ರವಾದ ಹಬ್ಬವಿದು ನಮ್ಮ ಯುಗಾದಿ.
ಹೊಸ ಚೀಗುರಿನಿಂದ ಪ್ರಾರಂಭವಾಗುವ ಹೊಸ ವರ್ಷದ
ಹಬ್ಬವಿದು ನಮ್ಮ ಯುಗಾದಿ.

ಕರೋನಾ ಹುಟ್ಟುಸಾವಿನ ದಿನವನ್ನು ಅಳಿಸಲಾಗದೆ ಭದ್ರವಾಗಿ
ಬರೆದಿಡುವಂತಹ ಪಂಚಾಂಗದ ಹಬ್ಬವಿದು “
ಮನೆಯಿಂದಾನೆ ಯುಗಾದಿ”.

ಕಲಿಯುಗದಲ್ಲಿ ಸಂಗಮಸಮಯದ ಹಬ್ಬವಿದು ನಮ್ಮ ಯುಗಾದಿ
ಮೂಡನಂಬಿಕೆ ಎಂದವರಿಗೆಲ್ಲಾ ಉತ್ತರಕೊಟ್ಟ ಚೀಗುರಿನ,ಬೇವಿನ, ಬೆಲ್ಲದ ಆರೋಗ್ಯಕರವಾದ ಹಬ್ಬವಿದು ನಮ್ಮ ಯುಗಾದಿ.
ಕರೊನಾ ವೈರಸನ ಅಂತ್ಯ ಆರಂಭಿಸಿದ ದಿನವಿದು ”ಮನೆಯಿಂದಾನೆ ಯುಗಾದಿ”

ಸಿಹಿ-ಕಹಿ ಸಮಾನಾಗಿ ಸ್ವೀಕರಿಸೇಂದು ಸಾರುವ ಬೇವು-ಬೆಲ್ಲದ ಹಬ್ಬವಿದು ಯುಗಾದಿ.
ಸುಖ-ದುಖಃ, ಬೇವು-ಬೆಲ್ಲವಿದಂತೆ, ಸುಖಬಂದಾಗ ಹಿಗ್ಗದಿರು, ದುಖಃ ಬಂದಾಗ ಕುಗ್ಗದಿರಿ ಎಂದು ದೈರ್ಯ-ಸ್ತೈರ್ಯ ತುಂಬುವ ಸೌರ್ಯದ ಹಬ್ಬವಿದು ನಮ್ಮ ಯುಗಾದಿ.

ಕರೋನಾವೆಂಬ ಮೃತ್ಯವಿಗೆ ಕುಗ್ಗಬಾರದೆಂಬ ತತ್ವಸಾರುವ ದಿನವಿಂದು
“”ಮನೆಯಿಂದಾನೆ ಕರೋನಾ””.

ಇತಿಹಾಸದ ದಿನವಿಂದ, ಇತಿಹಾಸದ ಕವನ ಬರೆದ ನನ್ನ ಬರಹಕ್ಕೆ ಇತಿಹಾಸದ ಯುಗಾದಿಯಿಂದು.
ಅಳಿಸದ ವಿಷಯಗಳನ್ನು ಜಗತ್ತಿಗೆ ತಿಳಿಸಿದ ನನ್ನ ಕವನ ಶಿರ್ಷಿಕೆಯ ಕಣ್ಮಣಿಯ ಹಬ್ಬವಿದು ನಮ್ಮಯುಗಾದಿ.
ಕರೋನಾ ಕೊಲ್ಲುವ ನನ್ನ ಕವನದ ಮುನ್ನುಡಿಯ ಹಬ್ಬವಿದು “ಮೆನೆಯಿಂದಾನೆ ಯುಗಾದಿ””

– ಮನೆಯಿಂದ ಯುಗಾದಿ ಕವನ
ಯುವ ಸಾಹಿತಿ:ರಾಜು ಎಮ್ ಹಿರೇಮಠ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here