ಚಿತ್ತಾಪುರ ಪಟ್ಟಣದಲ್ಲಿ ಬಿಗುವಿನ ವಾತವರಣ: ಮುಂಜಾಗ್ರತೆ ಕ್ರಮವಾಗಿ ನಾಳೆವರೆಗೆ ಬಾರ್ ರೆಸ್ಟೋರೆಂಟ್ ಬಂದ್ ಗೆ ಆದೇಶ

0
354

ಚಿತ್ತಾಪುರ: ಪಟ್ಟಣದಲ್ಲಿ ಎರಡು ಕೋಮಿನ ನಡುವೆ ಘರ್ಷಣೆ ಕಾರಣಕ್ಕೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಪಟ್ಟಣ ಸುತ್ತ ಮೂತ್ತ 5 ಕಿ.ಮಿ. ವ್ಯಾಪ್ತಿ ಪ್ರದೇಶದಲ್ಲಿ ಮದ್ಯಮಾರಾಟ ಹಾಗೂ ಬಾರ್ ರೆಸ್ಟೋರೆಂಟಗಳನ್ನು ಮಚ್ಚಲು ಜಿಲ್ಲಾಧಿಕಾರಿ ಆದೇಶ ಹೋರಡಿಸಿದ್ದಾರೆ.

Contact Your\'s Advertisement; 9902492681

ಬಕ್ರೀದ್ ಹಬ್ಬದ ಆಚರಣೆಯ ಕಾಲಕ್ಕೆ ಎರಡು ಕೋಮಿನ ಮಧ್ಯ ವಾಗ್ದಾದ ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಹಾಗೂ ಇನ್ನೂ ಹೆಚ್ಚಿನ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗೃತ ಕ್ರಮವಾಗಿ ಇಂದು ಮಂಗಳವಾರ ನಾಲ್ಕು ಗಂಟೆಯಿಂದ ನಾಳೆ 14ರ ರಾತ್ರಿ 10.00 ಗಂಟೆಯವರೆಗೆ ಚಿತ್ತಾಪೂರ ಪಟ್ಟಣ ಮತ್ತು ಸುತ್ತಲೂ 5.00 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಬಾರ್‌ ಮತ್ತು ರೆಸ್ಟಾರೆಂಟಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆರ್‌ ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆ: ಬಕ್ರೀದ್ ಹಬ್ಬದಂದು ಗೋವು ಸಾಗಟದ ಹಿನ್ನೆಲೆಯಲ್ಲಿ ಎರಡು ಕೋಮಿನ ಮದ್ಯೆ ಘರ್ಷಣೆ ಉಂಟಾಗಿದ್ದು, ಪಟ್ಟಣದಲ್ಲಿ ನಿನ್ನೆಯಿಂದ ಬಿಗುವಿನ ವಾತವರಣ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here