ಸುರಪುರ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿಗಳು ದೊಡ್ಡಪ್ಪ ಎಸ್ ನಿಷ್ಠಿ ಮತ್ತು ಉಪನ್ಯಾಸಕರು ಸೇರಿ ದೆಹಲಿಯಲ್ಲಿ ವರ್ಷಕೊಮ್ಮೆ ನಡೆಯುವ ಆಹಾರ-2023″ ಅಂತರಾಷ್ಟ್ರೀಯ ಆಹಾರ ಮತ್ತು ಆತಿಥ್ಯ ಮೇಳದಲ್ಲಿ ಭಾಗಿಯಾದ್ದಾರೆ.
ಕಲಬುರ್ಗಿ ಜಿಲ್ಲೆಯ ಹೆಸರುವಾಸಿಯಾದ ತೊಗರಿ ಬೆಳೆಯನ್ನು ಭೌಗೋಳಿಕ ಏಕೀಕರಣದ ಅಡಿಯಲ್ಲಿ ಆಯ್ಕೆಆಗಿರುವ ಕಾರಣ, ಕೇಂದ್ರ ಸರಕಾರದ ಸಹಾಯದೊಂದಿಗೆ ಭಾಗವಹಿಸಿ, ತೊಗರಿ ಬೆಳೆಗೆ ಇನ್ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಹಾಯವಾಗಿದೆ.
ಉಪನ್ಯಾಸಕರಾದ ಪ್ರೊ. ಶಿವನಗೌಡ ಪಾಟೀಲ ಹಾಗೂ ಪ್ರೊ ಗಂಗಾಧರ ಹೂಗಾರರು ಭಾಗಿಯಾಗಿ ಆಹಾರ-2023 ರ ಉಪಯೋಗವನ್ನು ತೆಗೆದುಕೊಂಡಿದ್ದಾರೆ ಮತ್ತು ಅಂತರಾಷ್ಟ್ರೀಯ ಆಹಾರ ಮತ್ತು ಆತಿಥ್ಯ ಮೇಳದ ಉಪೋಯೋಗ ಒಃಂ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ವಿವಿಧತೆಗಳು, ಅವಿಸ್ಕಾರಗಳು, ಅನ್ವೇಷಣೆಗಳು, ವ್ಯವಹಾರದ ಜ್ಞಾನವನ್ನು ಹೆಚ್ಚಿಸುವ ಮೇಳ ಇದಾಗಿದ್ದು ಮತ್ತು ಇದು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ವಾಗಿರಿವ ಮೇಳ ಎಂದು ವ್ಯಕ್ತಪಡಿಸಿದರು.
ಇದೆ ರೀತಿ ಎಲ್ಲ ರಾಜ್ಯದ ಹೆಸರುವಾಸಿಯಾದ ಮಾರುಕಟ್ಟೆಯ ಉತ್ಪನ್ನಗಳೊಂದಿಗೆ ಸುಮಾರು ಜನ ಭಾಗಿಯಾಗಿ ಈ ಮೇಳದ ಸದುಪಯೋಗವನ್ನು ಪಡೆದುಕೊಂಡರು ಎಂದು ಹೇಳಿದರು.