ಪ್ರವಚನ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಂತೋಷ ಬಿಜಿ ಪಾಟೀಲ ನೇಮಕ

0
17

ಭಾಲ್ಕಿ : ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಮತ್ತು ವಚನ ಜಾತ್ರೆ ಜೊತೆಗೆ ಈ ಭಾಗದ ನಡೆದಾಡುವ ದೇವರು ಎನಿಸಿಕೊಂಡ ಪರಮ ಪೂಜ್ಯ ಡಾ. ಚೆÀನ್ನಬಸವ ಪಟ್ಟದ್ದೇವರ 24ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಇದೇ ಎಪ್ರೀಲ್ 01 ರಿಂದ ಎಪ್ರೀಲ್ 21 ರ ವರೆಗೆ ಪ್ರತಿದಿನ ಸಾಯಕಾಂಲ 5:30 ಗಂಟೆಗೆ ಭಾಲ್ಕಿ ಪಟ್ಟಣದ ಹೃದಯಭಾಗದಲ್ಲಿರುವ ಚನ್ನಬಸವಾಶ್ರಮದಲ್ಲಿ ಶರಣರ ಜೀವನ ದರ್ಶನ ಪ್ರವಚನ ಜರುಗಲಿದೆ ಎಂದು ಅನುಭವ ಮಂಟಪದ ಅಧ್ಯಕ್ಷರು ಶ್ರೀ ಮಠದ ಹಿರಿಯ ಪೂಜ್ಯರು ಆದ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಯುಗದಲ್ಲಿ ಕೆಲಬೆರಕೆಗೊಂಡ ಮನಸ್ಸುಗಳನ್ನು ಸುಂದರ ಹಾಗೂ ಸಾತ್ವಿಕತೆಯಿಂದ ಕೂಡಿರಲು, ಮನೆ ಮನಗಳನ್ನು ಬೆಳಗಲು ಆಧ್ಯಾತ್ಮ ಪ್ರವಚನ ಅತೀ ಜರೂರಿಯಾಗಿದ್ದು ಮನುಷ್ಯ ಶರಣ ತತ್ವಗಳನ್ನು ಅಳವಡಿಕೊಂಡು ಸದಾ ಹರ್ಷದಿಂದ ಬಾಳಲು ಪ್ರವಚನ ಅಗತ್ಯ ಅದಕ್ಕೆ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಗರಡಿಯಲ್ಲಿ ಪಳಗಿದ ಪೂಜ್ಯ ಶ್ರೀ ಮಹೇಶಾನಂದ ಮಹಾಸ್ವಾಮಿಗಳು ಭಕ್ತಿ ಯೋಗಾಶ್ರಮ ಹಂಚಾನ ಅವರಿಂದ ನಡೆಯಲ್ಪಡುವ ಪ್ರವಚನಕ್ಕೆ ಪ್ರತಿ ಮನೆಯಿಂದ ಭಕ್ತರು, ಆಸಕ್ತರು ಆಗಮಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

Contact Your\'s Advertisement; 9902492681

ಭಾಲ್ಕಿ ಶ್ರೀ ಮಠದ ಪೀಠಾಧಿಕಾರಿಗಳಾದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ ಈ ವರ್ಷ ಬಸವ ಜಯಂತಿ ಹಾಗೂ ಪರಮ ಪೂಜ್ಯರ ಸ್ಮರಣೋತ್ಸವ ಏಕಕಾಲಕ್ಕೆ ಬಂದಿರುವ ಕಾರಣ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ವಚನ ಜಾತ್ರೆ , 5000 ಮಕ್ಕಳಿಗೆ ಬಾಲ ಬಸವಣ್ಣನ ವೇÉಷಭೂಷಣ ದೊಂದಿಗೆ ಬರಲು ಭಕ್ತರಲ್ಲಿ ತಿಳಿಸಲಾಗಿದೆ ಈ ಒಂದು ಕಾರ್ಯಕ್ರಮ ಭಾಲ್ಕಿ, ಬೀದರ ಕರ್ನಾಟಕ ಅಷ್ಟೆ ಅಲ್ಲಾ, ದೇಶದಲ್ಲೆ ಹೊಸ ಇತಿಹಾಸ ಸೃಷ್ಠಿಸಲಿದೆ ಇಂತಹ ಅದ್ಧೂರಿ ಕಾರ್ಯಕ್ರಮ ಜರುಗಲಿವೆ ಸದ್ಭಕ್ತರು ಈ ಒಂದು ಅವಿಸ್ಮರಣಿಯ ದೃÀಶ್ಯವನ್ನು ಕಣ್ತುಂಬಿಕೊಂಡು ಪುನೀತರಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಳಕಳಿ ಸೇವೆ ಪ್ರತಿಯೊಂದು ಕ್ಷೇತ್ರದಲ್ಲಿ ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ಸಂತೋಷ ಬಿಜಿ ಪಾಟೀಲ ಇವರಿಗೆ ಪ್ರಚವನ ಸೇವಾ ಸಮಿತಿ ಅಧ್ಯಕ್ಷರಾಗಿನ್ನಾಗಿ ನೇಮಕ ಮಾಡಿ ಆಶಿರ್ವದಿಸಿದರು, ಆಗಮಿಸಿದ ಸೇವಾ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪ್ರವಚನದ ಕರಪತ್ರಗಳನ್ನು ಬಿಡುಗಡೆ ಗೊಳಿಸಿದರು.

ಆಶೀರ್ವಾದ ಪಡೆದು ಮಾತನಾಡಿದ ಸಂತೋಷ ಬಿಜಿ ಪಾಟೀಲ ಪರಮ ಪೂಜ್ಯ ಸಿದ್ದೇಶ್ವರ ಅಪ್ಪಾಜಿಯವರು ಭಾಲ್ಕಿ ನಗರದಲ್ಲಿ 52 ದಿನಗಳ ಕಾಲ ಪ್ರವಚನ ಮಾಡಿದ ಸ್ಥಳದಲ್ಲಿ ಅವರ ಗರಡಿಯಲ್ಲಿ ಪಳಗಿರುವ ಪೂಜ್ಯ ಮಹೇಶಾನಂದ ಮಹಾಸ್ವಾಮಿಗಳು ಪ್ರವಚನ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಇಂತಹ ಪ್ರವಚನ ಕಾರ್ಯಕ್ರಮಕ್ಕೆ ಸೇವೆ ಮಾಡಲು ಅವಕಾಶ ನೀಡಿದ ಶ್ರೀಮಠದ ಇರ್ವರೂ ಪೂಜ್ಯರಿಗೆ ನಾನು ಸದೈವ ಋಣಿ ಎಂದು ನುಡಿಯುತ್ತ ಈ ಒಂದು ಕಾರ್ಯ ಅತ್ಯಂತ ವಿಶೇಷವಾಗಿದ್ದು ಇದರಲ್ಲಿ ನಮ್ಮೆಲ್ಲ ಅತ್ಮೀಯ ಗೆಳಯರು ಹಾಗೂ ಸಹಪಾಠಿಗಳು, ಮಾರ್ಗದರ್ಶಕರ ಆಶೀರ್ವಾದ ಸಲಹೆ ಸೂಚನೆ ಅಗತ್ಯವಾಗಿದ್ದು ಶ್ರೀಮಠದ ಪೂಜ್ಯರು ನನಗೆ ನೀಡಿದ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸುವೆ ಎಂದು ನಂಬಿಕೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷರಾದ ನಾಗಭೂಷಣ ಮಾಮಡಿ, ಕನ್ನಡ ಪರ ಸಂಘಟನೆ ಗೌರವಾಧ್ಯಕ್ಷರಾದ ಸಂಗಮೆಶ ಗುಮ್ಮೆ, ಚಂದು ಸಂಪಂಗೆ, ರಾಜಕುಮಾರ ಡಾವರಗಾವೆ ಪತ್ರಕರ್ತರಾದ ಭದ್ರೇಶ ಸ್ವಾಮಿ, ಮನ್ಮಥಸ್ವಾಮಿ, ಶ್ಯಾಮವೆಲ್, ವಿನಾಯಕ ಶಿಂಧೆ, ಚಂದ್ರಕಾಂತ ತಳವಾಡೆ, ಗುರುಪ್ರಸಾದ ಮೆಂಟೆ, ವೀರಶೆಟ್ಟಿ ಕರಕಲ್ಲೆ, ಉದ್ಯಮಿಗಳಾದ ಚಂದ್ರಶೇಖರ ವಂಕೆ, ಡಾ. ಸುರೇಶ ರಘುಜಿ, ರವಿ ಬಿಚಕುಂದೆ, ನಾಗೇಶ ತಮಾಸಂಗೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here