ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಕರೆ

0
18

ಕಲಬುರಗಿ : ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾಭಿಮಾನದ ಸ್ಥಾನ ಮಾನ ಕಲ್ಪಿಸಿದ ಆದರ್ಶ ಮಹಿಳೆಯರ ತತ್ವಾದರ್ಶಗಳಿಂದ ಮೌಲ್ಯಯುತ ಬದುಕು ಕಟ್ಟಿ ಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶೆ ಮಾಲತಿ ಎಸ್ ರೇಷ್ಮಿ ಇಂದಿಲ್ಲಿ ಕರೆ ಮಹಿಳೆಯರಿಗೆ ನೀಡಿದರು.

ಸ್ಥಳೀಯ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಘ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯ ಉಪನ್ಯಾಸ ಭಾಷಣ ಮಾಡಿ ಮಾತಾಡಿದರು.

Contact Your\'s Advertisement; 9902492681

ದೇಶದ ಸಂಸ್ಕøತಿ ಶ್ರೀಮಂತಗೊಳ್ಳಲು ಮಹಿಳೆಯರ ಪಾತ್ರ ಹಿರಿದು. ಅನುಕಂಪಕ್ಕಿಂತ ಸಮಾನತೆಯ ಅವಕಾಶಗಳು ಒದಗಿಸಿ ಕೊಡಬೇಕು. ಇಂದು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ಸಂಗತಿ ಎಂದರು.

ಪ್ರಾಂಶುಪಾಲ ಡಾ. ಭಾಗೀರಥಿ ಎಸ್ ಗುಡ್ಡೆವಾಡಿ ಅಧ್ಯಕ್ಷತೆ ವಹಿಸಿ, ಕುಟುಂಬದಲ್ಲಿ ಎಲ್ಲಾ ಸ್ಥಾನ ಮಾನಗಳನ್ನು ಜವಾಬ್ದಾರಿ ನಿಭಾಯಿಸಿಕೊಂಡು ಸಂಸಾರ ಮುನ್ನಡೆಸುತ್ತಾಳೆ. ಆದರೆ, ಮೊಬೈಲ್ ಬಳಕೆಯಿಂದ ತುಸು ಜವಾಬ್ದಾರಿ ಮರೆಯುತ್ತಿದ್ದಾಳೆ. ಮೊದಲು ಶಿಕ್ಷಣದ ಅವಕಾಶ ನೀಡಬೇಕಾಗಿದೆ ಎಂದು ನುಡಿದರು.

ಪಿಡಿಎ ಇಂಜನೀರಿಂಗ್ ಕಾಲೇಜಿನ ಪ್ರಾಧ್ಯಪಕಿ ಡಾ. ಗೀತಾ ಪಾಟೀಲ, ಶ್ರೀದೇವಿ ಶೆಟಗಾರ, ಪರಮೇಶ್ವರ ಶೆಟಗಾರ, ಉಪನ್ಯಾಸಕ ಹಣಮಂತರಾವ ಗುಡ್ಡೇವಾಡಿ, ಪ್ರಸನ್ನಕುಮಾರ ವಾಂಜೇಡಕರ್, ಕಾರ್ಯದರ್ಶಿ ಗೀತಾ ಚಕ್ರವರ್ತಿ ಭಾಗವಹಿಸಿದರು.
ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಘಧ್ಯಕ್ಷ ಸುಭಾಶ ಚಕ್ರವರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸತ್ಕರಿಸಲಾಯಿತು. ಪೂಜಾ ಪಾಟೀಲ ನಿರೂಪಿಸಿದರು. ವನಜಾಕ್ಷಿ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here