ಗುಲಬರ್ಗಾ ವಿವಿಯಲ್ಲಿ ವಿಶ್ವ ಜಲದಿನ

0
14

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ತಂತ್ರಜ್ಞಾನ ವಿಭಾಗ ಮತ್ತು ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಪ್ರಾದೇಶಿಕ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನ ಮತ್ತು ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಆತಿಥಿಗಳಾಗಿ ಅಬಕಾರಿ ಇಲಾಖೆ ಜಂಟಿ ಕಾರ್ಯದರ್ಶಿ ಬಸವರಾಜ್ ಹಡಪದ್, ಗೌರವ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಪ್ರಾದೇಶಿಕ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ. ಎಸ್ ಜೋಗದ್, ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನಮಂಡಳಿ ಯೋಜನಾ ಅಭಿಯಂತರ ಗಂಗಾಧರ್ ಆರ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಸಚಿವ ಡಾ. ಬಿ.ಶರಣಪ್ಪ ಕೆ.ಎ.ಎಸ್ ಅವರು ವಹಿಸಿ ಮಾತನಾಡಿ ಪ್ರೀತಿಗಿಂತಲೂ ನೀರು ಮುಖ್ಯ ಎಂದು ಬಹಳ ವಿಸ್ತಾರವಾಗಿ ಸಭಿಕರಿಗೆ ವಿವರಿಸಿದರು. ಪ್ರಾಸ್ತಾವಿಕವನ್ನು ಪರಿಸರ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಪ್ರಕಾಶ್ ಕೆ. ನೆರವೇರಿಸಿ ಕೊಟ್ಟರು. ವಿದ್ಯಾರ್ಥಿಗಳಾದ ಆನಂದ್ ಮತ್ತು ಕಾಜಲ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಓಂಕಾರ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here