ಬಿಜೆಪಿ ಧೋರಣೆಗೆ ಮಾಜಿ ಂಎಲ್‍ಸಿ ಅಲ್ಲಂಪ್ರಭು ಖಂಡನೆ

0
16

ಕಲಬುರಗಿ; ಎಐಸಿಸಿಸ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದು ಮಾಡಿರುವ ಬಿಜೆಪಿ ಕ್ರಮ ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಧೋರಣೆ ಸಹಿಸಲಾಗದು. ಇಂತಹ ಅಪ್ರಜಾತಾಂತ್ರಿಕ ಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ನಡೆಸಲಿದೆ ಎಂದು ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಉಗ್ರವಾಗಿ ಕಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿ ಈಚೆಗೆ ಭಾರತ ಜೋಡೋ ಯಾತ್ರೆ ನಡೆಸಿ ಜನಪ್ರೀತಿ ಪಡೆದಿದ್ದಾರೆ. ಇಡೀ ದೇಶದುದ್ದಗಲಕ್ಕೂ ಪಾದಯಾತ್ರೆ ಮಾಡಿ ಜನಮನ ಸೆಳೆದಿದ್ದಾರೆ. ಅವರೀಗ ಭಾರತದ ಧ್ವನಿಯಾಗಿ ಹೊರಹೊಮ್ಮಿದ್ದಾರೆ.

Contact Your\'s Advertisement; 9902492681

ಇದೆಲ್ಲವೂ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿಯವರ ಧ್ವನಿಯನ್ನೇ ಅಡಗಿಸಬೇಕು ಎಂದ ಇಂತಹ ಕುತಂತ್ರಕ್ಕೆ ಮುಂದಾಗಿದೆ. ಇದನ್ನೆಲ್ಲ ನಾವು ಸಹಿಸೋದಿಲ್ಲ. ಜನತೆ ಎಲ್ಲವನ್ನು ಗಮನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುವುದರ ಜೊತೆಗೇ ಹೋರಾಟ ಕೂಡಾ ಮಾಡುತ್ತದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here