ಕಲಬುರಗಿ: ಪ್ರತಿಷ್ಟಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ಕ್ಲೌಡ ಕಂಪ್ಯೂಟರ್ ಆರ್ಕಿಟೆಕ್ಟಕ್ ಮತ್ತು ಅದರ ಉಪಯೋಗಗಳ ಕುರಿತಾದ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಪೂಜಾರ, ಕನ್ಸಲ್‌ಟಂಟ, ಮಾಂಜ್ರಾ ಸಾಫ್ಟ, ಆಸ್ಟ್ರೇಲಿಯಾ ಇವರು ನೆರವೇರಿಸಿ ಕ್ಲೌಡ ಕಂಪ್ಯೂಟಿಂಗ ಆರ್ಕಿಟೆಕ್ಚರ್ ಮತ್ತು ಅದರ ಉಪಯೋಗಗಳ ಬಗ್ಗೆ ಮಾತನಾಡಿದರು. ಡಾ. ಎಸ್.ಎಸ್. ಹೆಬ್ಬಾಳ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ಮಾತುಗಳನ್ನಾಡಿದದ್ದರು. ಅತಿಥಿಯಾಗಿ ಪಿ.ಡಿ.ಎ. ಕಾಲೇಜಿನ ಟೆಕ್ಯೂಪ್ ಸಂಚಾಲಕರಾದ ಶರಣ ಪಡಶೆಟ್ಟಿಯವರು ಆಗಮಿಸಿದ್ದರು ಖ್ಯಾತ ಕಂಪ್ಯೂಟರ್ ವಿಜ್ಞಾನಿ ಹಾಗೂ ಲೇಖಕರಾದ ಡಾ. ರಾಜಕುಮಾರ ಬುಯ್ಯಾ ಅವರು ಆಸ್ಟ್ರೇಲಿಯಾದManjra soft company ಇಂದ ಕ್ಲೌಡ್ ಕಂಪ್ಯೂಟಿಂಗ್ ಬಗೆಗೆ ಸ್ಕೈಪ್ ಮುಖಾಂತರ ಗಹನವಾಗಿ ಮಾತನಾಡಿದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಡಾ. ಸುವರ್ಣ ನಂದ್ಯಾಳರವರು ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮದ ಸಂಚಾಲಕರಾದ ಡಾ. ಶ್ರೀದೇವಿ ಸೋಮಾ, ಪ್ರಾಧ್ಯಾಪಕರು, ಇವರು ಕ್ಲೌಡ್ ಕಂಪ್ಯೂಟಿಂಗ್ ಆರ್ಕಿಟೆಕ್ಚರ್ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳ ಪರಿಚಯವನ್ನು ಶ್ರೀ ಚೇತನ ಕಳಸ್ಕರ, ಸಹಾಯಕ ಪ್ರಾಧ್ಯಾಪಕರು, ಇವರು ಮಾಡಿದರು.
ಶ್ರೀ ವಿಶ್ವನಾಥ ಗುಗ್ವಾಡ ಪ್ರೋಗ್ರಾಮರ್ ರವರು, ವಂದನಾರ್ಪಣೆ ಮಾಡಿದರು.
ಕು. ರಾಜಲಕ್ಷ್ಮಿ ಬಿಲಗುಂದಿ ಪ್ರೊಗಾರಮರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಡಾ. ರಾಜು ಯಾನಮಶೆಟ್ಟಿ ಎಚ್.ಓ.ಡಿ. ಇ&ಸಿ ವಿಭಾಗ, ಡಾ. ಚನ್ನಪ್ಪ ಬಿರಾದರ ಎಚ್.ಒ.ಡಿ. ಆಟೋ ಮೊಬೈಲ್ ವಿಭಾಗ, ಡಾ. ಜಿ.ಎಸ್. ಬಿರಾದರ, ಪ್ರೊಫೆಸರ್ ಇ&ಸಿ ವಿಭಾಗ, ಡಾ. ಭಾರತಿ ಹರಸೂರ ಎಚ್.ಓ.ಡಿ. ಐ.ಎಸ್.ಸಿ. ವಿಭಾಗ, ಡಾ. ಸುಜಾತಾ ಟಿ., ಡಾ. ಜಯಶ್ರೀ ಅಗರಖೇಡ, ಡಾ. ಪ್ರಕಾಶ ಪಟ್ಟಣ, ಡಾ. ಅನೀತಾ ಹರಸೂರ, ಡಾ. ಅನುರಾದ ಟಿ., ರಾಧಾ ಕೆ., ಅಮರೇಶ್ವರಿ ಪಿ., ಸೌಮ್ಯ ಎ., ಜಯಂತಿ, ಶರಣಬಸಪ್ಪ ಜಿ., ಪೂರ್ವಿಕಾ ಎಚ್, ಪೂಜಾ ಎ, ಪಲ್ಲವಿ, ಸುಧಾ, ನಳಿನಿ, ರಾಜಲಕ್ಷ್ಮೀ, ಸುರೇಖಾ, ರೇಣುಕಾ, ಪೂರ್ಣಿಮಾ, ಖಾಜಾ ಮೌನೊದ್ದೀನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ವಿಭಾಗದ ೧೦೦ ವಿದ್ಯಾರ್ಥಿಗಳು ಭಾಗವಹಿಸಿ ಅದರ ಲಾಭವನ್ನು ಪಡೆದರು.