ರಟಕಲ್ ಪೊಲೀಸರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಗ್ರಾಮಸ್ಥರ ಆಕ್ರೋಶ

0
866

ಕಾಳಗಿ: ಇಲ್ಲಿನ ರಟಕಲ್ ಗ್ರಾಮದ ಪೊಲೀಸ್ ಠಾಣೆಯ ಆವರಣದಲ್ಲಿರುವ ದರ್ಗಾದ ಪ್ರವೇಶ ದ್ವಾರವನ್ನು ಮುಚ್ಚಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತಂದಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.

ರಟಕಲ್ ಗ್ರಾಮದ ಪೊಲೀಸ ಠಾಣೆಯ ಕಂಪೌಂಡ್ ನಲ್ಲಿ ಹಜರತ್ ಮಹೇಬೂಬ್ ಸುಬಾನಿ ದರ್ಗಾ ಇದ್ದು, ಗ್ರಾಮದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಆಗುವ ಮುಂಚಿತವಾಗಿ ಈ ದರ್ಗಾ ಇದೆ. ದರ್ಗಾಕ್ಕೆ ಗ್ರಾಮದಲ್ಲಿ ಎಲ್ಲರೂ ಜಾತಿ ಬೇಧ- ಭಾವ ಮರೆತು ಸರ್ವಧರ್ಮಿಯರು ಸಹ ಈ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಪ್ರತಿ ಗುರುವಾರ ಮತ್ತು ಅಮವಾಸೆ, ಹುಣ್ಣಿಮೆ ಹಬ್ಬ ಹರಿದಿನಗಳು ಸೇರಿ ಪ್ರತಿದಿನ ಗ್ರಾಮದ ಜನರು ಪ್ರಾರ್ಥನೆಗೆಂದು ದರ್ಗಾಕ್ಕೆ ಬರುತ್ತಾರೆ ತಿಳಿಸಿದ್ದಾರೆ.

Contact Your\'s Advertisement; 9902492681

ದರ್ಗಾಕ್ಕೆ ಬರುವ ಭಕ್ತರಿಗೆ ಸ್ವಲ್ಪ ಪ್ರವೇಶಕ್ಕೆ ಜಾಗ ಬಿಟ್ಟು ಕಂಪೌಂಡ ಕಟ್ಟಿ ಎಂದು ಸೋಮವಾರ ಪೊಲೀಸ್ ಠಾಣೆಗೆ ಸರ್ವಧರ್ಮಿಯ ಸೌಹಾರ್ದ ಸಮಿತಿಯ ನಿಯೋಗದಲ್ಲಿ ರಟಕಲ್ ಪಿಎಸ್ಐ ಬಸವಲಿಂಗಪ್ಪಗೆ ಮನವಿ ಮಾಡಲಾಗಿತ್ತು. ಗ್ರಾಮಸ್ಥರ ಧಾರ್ಮಿಕ ನಂಬಿಕೆ ಮತ್ತು ಮನವಿಯನ್ನು ಧಿಕ್ಕರಿಸಿ ದರ್ಗಾದ ಪ್ರವೇಶ ದ್ವಾರದಲ್ಲಿ ಕಂಪೌಂಡ ಕಟ್ಟುವ ಮೂಲಕ ಅಲ್ಲಿನ ಪೊಲೀಸರು ಧಾರ್ಮಿಕ ಹಕ್ಕುಗಳನ್ನು ಗಾಳಿಗೆ ತುರಿದ್ದಾರೆಂದು ಆಕ್ರೋಶ ವ್ಯಕ್ತವಾಗುತಿದೆ.

ಗ್ರಾಮಸ್ಥರ ವಿರೋಧ ನಂತರವು ದರ್ಗಾಕ್ಕೆ ಇರುವ ದ್ವಾರದಲ್ಲಿ ಕಂಪೌಂಡ ಕಟ್ಟಿದ್ದು, ಇದರಿಂದ ಪ್ರತಿದಿನ ಮಹಿಳೆಯರು ಸೇರಿದಂಥೆ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅಡ್ಡಿ ಪಡಿಸುವ ಕೃತ್ಯ ಇದಾಗಿದೆ. ಜನರಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಜನ ಸ್ನೇಹಿ ಆಗರಬೇಕಿರುವ ಇಲ್ಲಿನ ಪೊಲೀಸರ ನಡುವಳಿಕೆ ಅಪಾರ ಭಕ್ತರಿಗೆ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸ್ಥಳೀಯ ಪರಿಸರವಾದಿಗಳು ಕಿಡಿಕಾರಿದ್ದಾರೆ.

ಪೊಲೀಸರು ಪ್ರತ್ಯೇಕ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ತೀರ್ಮಾನ ಕೈಗೊಳ್ಳಲಾಗುತ್ತಿದೆಂದು ಸಮುದಾಯದ ಜನರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ತಕ್ಷಣ ಜಿಲ್ಲಾ ಪೊಲೀಸ್ ಆಧೀಕ್ಷಕರು ಮತ್ತು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ದರ್ಗಾದ ಪ್ರವೇಶ ದ್ವಾರದಲ್ಲಿ ಕಟ್ಟಿರುವ ಕಂಪೌಂಡ ತೆರವುಗೊಳಿಸಿ, ಭಕ್ತರಿಗೆ ದರ್ಗಾದ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಠಾಣೆಯ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಪೊಲೀಸರ ವಿರುದ್ಧ ಪ್ರತ್ಯೇಕ ಸಮುದಾಯದ ಜನರಲ್ಲಿ  ಸೃಷ್ಟಿಯಾಗಿರುವ ಅಪನಂಬಿಕೆ ತಿಳಿಗೊಳಿಸಿ ಧಾರ್ಮಿಕ ಹಕ್ಕನ್ನು ಎತ್ತಿಹಿಡಿಯಬೇಕೆಂದು ಸಮಿತಿ ಆಗ್ರಹಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here