ಕಲಬುರಗಿ ಜಿಲ್ಲೆಯು ಶ್ರೀಮಂತವಾದ ಪರಂಪರೆ ಸಂಸ್ಕೃತಿಯನ್ನು ಹೊಂದಿದೆ; ಶ್ರೀ ನಿಜಗುಣಿ ದೇವಣಗಾಂವ

0
24

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ಕಲಬುರಗಿ, ಇನ್‍ಟ್ಯಾಕ್ ಅಧ್ಯಾಯ ಹಾಗೂ ದರ್ಶ್ ಸುಪರ ಸ್ಪೆಷಾಲಿಟಿ ಆಸ್ಪತ್ರೆ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ರವಿವಾರ ಆಯೋಜಿಸಲಾದ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣಿ ದೇವಣಗಾಂವ ಕಾರ್ಯದರ್ಶಿಗಳು, ವಿಶ್ವನಾಥರೆಡ್ಡಿ ಮುದನಾಳ ಶಿಕ್ಷಣ ಸಂಸ್ಥೆ, ಕಲಬುರಗಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಕಲಬುರಗಿ ಜಿಲ್ಲೆಯು ಶ್ರೀಮಂತವಾದ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಇದನ್ನು ಈ ರೀತಿಯ ಪಾರಂಪರಿಕ ನಡಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇಂದಿನ ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ ಕುರಿತು ಮಾಹಿತಿ ನೀಡುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್‍ಟ್ಯಾಕ್ ಸಂಯೋಜಕರು ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ.ಎಸ್.ಎಸ್. ವಾಣಿಯವರು ಕೋಟೆ ಹಾಗೂ ಕಲಬುರಗಿ ನಗರದ ಇತಿಹಾಸ ಮತ್ತು ಪರಂಪರೆಯನ್ನು ಕುರಿತು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಾಯೋಜಕತ್ವದಲ್ಲಿ ಕಲಬುರಗಿ ಕೋಟೆಯ ಅಭಿವೃದ್ದಿ ಹಾಗೂ ಸಂರಕ್ಷಣೆಯ ನಿಟ್ಟಿನಲ್ಲಿ ಕೋಟೆಗೆ ಸಂಬಂಧಿಸಿದಂತೆ, ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ‘ಪರಂಪರೆ ನಡಿಗೆಯು ಒಂದಾಗಿದೆ.’ ಈ ಕಾರ್ಯಕ್ರಮವು ಶರಣಬಸವೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭವಾಗಿ ಲಾಲಗೇರಿ ಕ್ರಾಸ್ ಮುಖಾಂತರ ಅಗ್ನಿ ಶಾಮಕ ದಳ ಕಚೇರಿಯ ಮುಂಭಾಗದಿಂದ ಶಹಬಜಾರ್ ನಾಕಾದ ಮೂಲಕ ಕೋಟೆಯ ಪ್ರವೇಶದ್ವಾರವನ್ನು ತಲುಪಿತು.

Contact Your\'s Advertisement; 9902492681

ಕೋಟೆಯ ಪ್ರವೇಶ ದ್ವಾರಗಳ ರಚನೆ, ಅವುಗಳ ಮಹತ್ವ, ಕಂದಕದ ಮಹತ್ವ ಮತ್ತು ಯುದ್ಧಗಳಲ್ಲಿ ಇವುಗಳ ಪಾತ್ರ ಕುರಿತು ವಾಣಿಯವರು ವಿವರಿಸಿದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆಯು ಹೆಚ್ಚಿನ ಕೋಟೆಗಳನ್ನು ಮತ್ತು ಪಾರಂಪರಿಕ ತಾಣಗಳನ್ನು ಒಳಗೊಂಡಿದೆ. ಅದರಲ್ಲಿ ಕಲಬುರಗಿ ನಗರದ ಕೋಟೆ ಅತ್ಯಂತ ಬಲಶಾಲಿಯಾದ ಕೋಟೆಯಾಗಿದೆ. ಇದು ವಿಜಯ ನಗರದ ಅರಸರಿಂದಲೂ ಗೆಲ್ಲಲು ಸಾಧ್ಯವಾಗಲಿಲ್ಲ. ಕಾರಣ ಈ ಕೋಟೆಯ ರಚನೆಯಲ್ಲಿ ದೇಶಿಯ ಹಾಗೂ ವಿದೇಶಿಯ ತಂತ್ರಜ್ಞಾನವನ್ನು ಅಳವಡಿಸಿರುವ ವಿಷಯವನ್ನು ಕುರಿತು ಮಾಹಿತಿ ನೀಡಿದರು.

ಆದ್ದರಿಂದ ಸುಮಾರು 800 ವರ್ಷಗಳನ್ನು ಪೂರೈಸಿದಂತಹ ಕೋಟೆ ಇಂದಿಗೂ ಯಥಾಸ್ಥಿತಿಯಲ್ಲಿ ಉಳಿದುಕೊಂಡಿದೆ ಎಂದು ಹೇಳಿದರು. ಕೋಟೆಯಒಳಗಡೆ ಇರುವ ಪ್ರವೇಶದ್ವಾರಗಳು, ಕಾವಲು ಗೋಪುರಗಳು, ಸೈನಿಕರ ತಂಗುದಾಣಗಳು, ಮದ್ದು ಗುಂಡುಗಳ ಸ್ಥಳ, ವಿದೇಶಿಯ ಮಾರುಕಟ್ಟೆ, ತೋಪುಗಳು, ಜಾಮಿ ಮಸೀದಿ ಮುಂತಾದ ಸ್ಥಳಗಳಿಗೆ ನಡಿಗೆಯ ಮೂಲಕ ಹೋಗಿ ಅವುಗಳ ಕುರಿತು ಡಾ.ಎಸ್.ಎಸ್. ವಾಣಿಯವರು ಮಾಹಿತಿ ನೀಡಿದರು.

ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ವಿಶ್ವನಾಥರೆಡ್ಡಿ ಮುದನಾಳ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಹಣಮಂತರಾವ, ಎಸ್.ಎಣ್.ಪುಣ್ಯಶೆಟ್ಟಿ, ಶಿವಾನಂದ ಬಿರಾದಾರ, ಪೆÇ್ರ. ಕಾಶಿನಾಥ ಬಿರಾದಾರ, ಪ್ರಾಂಶುಪಾಲರಾದ ಬಸವರಾಜ ಮಠಪತಿ, ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ರಾಜು, ಉಪನಿರ್ದೇಶಕರು ಪ್ರವಾಸೋಧ್ಯಮ ಇಲಾಖೆ, ಸಂದೀಪ ಸಿಂಗ್, ರಾಹುಲ ದೇಶಪಾಂಡೆ, ಯೋಗೇಶ ಇಂಜಿನಿಯರ, ಪ್ರವಾಸೋಧ್ಯಮ ಇಲಾಖೆ, ಲಿಂಗಮೂರ್ತಿ ಹಾಗೂ ಪ್ರವಾಸಿ ಮಿತ್ರರು ಹಾಗೂ ಇನ್‍ಟ್ಯಾಕ್ ಪದಾಧಿಕಾರಿಗಳಾದ ಡಾ. ಎಂ.ಎಸ್. ಕುಂಬಾರ, ಸಹ ಸಂಯೋಜಕರು ಇನ್ ಟ್ಯಾಕ್ ಕಲಬುರಗಿ ಅಧ್ಯಾಯ ಹಾಗೂ ಸದಸ್ಯರುಗಳಾದ ರಿಜವಾನ್ ಸಿದ್ದೀಕಿ, ಪೆÇ್ರ. ಶರಣಪ್ಪ ಗುಂಡಗುರ್ತಿ, ಡಾ. ರವಿಕುಮಾರ, ಡಾ. ನಬಿಸಾ ಹಾಗೂ ಸ್ಥಳಿಯ ನಾಗರಿಕರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here