ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಕ್ಷ್ಮೀ ಶಕ್ತಿ ಪೀಠದ 36ನೇ ಸಂಭ್ರಮದ ಜಾತ್ರಾ ಮಹೋತ್ಸವ ಪ್ರಯುಕ್ತ ಮಾ. 25 ರಿಂದ 03 ರವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು.
ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರಗಲಿದೆ. ಏ. 1.ರಂದು ಸಾಯಂಕಾಲ 6-30 ಗಂಟೆಗೆ ಕಾಮಿಡಿ ಕಿಲಾಡಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
2. ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ದೇವಿಗೆ ಮಹಾಭಿಷೇಕ ಮಹಾ ಅಲಂಕಾರ, 10 ಗಂಟೆಗೆ ಗಂಗಾಪೂಜೆ, 911 ಬಾಲ ಮುತೈದೆಯರ ಪಾದ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಗ್ರಾಮದ ಪ್ರಮುಖ ರಾಜ ಬೀದಿಯಿಂದ ಶ್ರೀ ದೇವಿ ಶಕ್ತಿ ಪೀಠದವರೆಗೆ ಆನೆ ಅಂಬಾರಿ ಮೇಲೆ ದೇವಿಯ ಭವ್ಯ ಮೆರವಣಿಗೆ, ಬಂಜಾರ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 6 -30 ಗಂಟೆಗೆ ಶಕ್ತಿ ದೇವಿಯ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ಧರ್ಮ ಸಭೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಶ್ರೀ ಶಕ್ತಿ ಪೀಠ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ನಂತರ ಶಕ್ತಿ ಪೀಠಾದಿಪತಿಗಳಿಗೆ ತುಲಾಭಾರ, ಸಂಜೆ 7ಗಂಟೆಗೆ ಭಾವೈಕ್ಯತೆ ಧರ್ಮ ಸಭೆ ಮತ್ತು ರೂಪಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ನಿರಗುಡಿ ಪೂಜ್ಯಶ್ರೀ ಹವಾಮಲ್ಲಿನಾಥ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿವರು, ಬಡದಾಳ ತೇರಿನಮಠದ ಶ್ರೀ ಷ.ಬ್ರ.ಡಾ.ಚನ್ನಮಲ್ಲ ಶಿವಾಚಾರ್ಯರ ನೇತೃತ್ವ ವಹಿಸುವರು, ವಿಕ್ತಮಠ ಮಾದನಹಿಪ್ಪರ್ಗಾದ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು, ಮುಗುಳನಾಗಾಂವ ಕಟ್ಟಿಮನಿ ಹಿರೇಮಠದ ಶ್ರೀ ಪಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರು,ಭರತನೂರ ವಿರಕ್ತಮಠದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಶ್ರೀ ಷ.ಬ್ರ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಷ.ಬ್ರ. ವೀರಮಹಾಂತ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು, ಶ್ರೀ ಷ.ಬ್ರ ಸೋಮಶೇಖರ ಶಿವಾಚಾರ್ಯರು, ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯರು, ಶ್ರೀ ಮ.ನಿ.ಪ್ರ ಸಿದ್ದರಾಮ ಮಹಾಸ್ವಾಮಿಗಳು, ಶ್ರೀ ಲಿಂಗರಾಜಪ್ಪ ಅಪ್ಪ ಇವರು ಸ್ಮುಮುಖದಲ್ಲಿ ಭಾಗವಹಿಸುವರು, ಶ್ರೀ ಪೂಜ್ಯ ಶರಣಯ್ಯ ಸ್ವಾಮಿಗಳು, ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಪೂಜ್ಯ ಗಿರೆಪ್ಪಾ ಮುತ್ಯಾ ಇವರು ಘನ ಉಪಸ್ಥಿತಿ ವಹಿಸಲಿದ್ದಾರೆ.
ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು, ಲೋಕ ಸಭಾ ಸದಸ್ಯ ಡಾ. ಉಮೇಶ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ್, ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಜಿ.ಪಂ.ಅಧ್ಯಕ್ಷ ನಿತೀನ ಗುತ್ತೇದಾರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ, ಬಂಧು ಪ್ರಿಂಟರ್ಸ್ ಮಾಲೀಕ ಹಾಗೂ ಖ್ಯಾತ ಉದ್ದಿಮೆದಾರ ರಮೇಶ ಜಿ. ತಿಪ್ಪನೂರ್ ಸೇರಿದಂತೆ ರಾಜಕೀಯ, ಧಾರ್ಮಿಕ ಗಣ್ಯ ಮಾನ್ಯರು ಮುಖ್ಯ ಅತಿಥಿಳಾಗಿ ಆಗಮಿಸಲಿದ್ದಾರೆ.
ಹೈದ್ರಾಬಾದ ತೆಲಂಗಾಣದ ಅಖಿಲ ಭಾರತ ವೀರಶೈವ ಮಹಾಸಭಾ ಮಹೇಶ ನೇತಿ ಹೈದ್ರಾಬಾದ ವಿಶೇಷ ಮಹಾದಾನಿಗಳಾಗಿ ಆಗಮಿಸುವರು, ಸೋಲಾಪೂರ ದಕ್ಷಿಣ ಯಳೆಗಾಂವ ಜಿ, ರಾಮಚಂದ್ರ ಎಸ್.ಬಗಲೆ ಅವರು ಜಾತ್ರಾ ಮಹೋತ್ಸವದ ಪ್ರಸಾದ ಸೇವೆ ನೆರವೆರಿಸಿ ಕೊಡುವರು, 03 ರಂದು ಸಾಯಿಂಕಾಲ 4-00 ಗಂಟೆಗೆ ಜಂಗಿ ಕುಸ್ತಿ ನಡೆಯಲಿದ್ದು, 02 ಮತ್ತು 03 ರಂದು ರಾತ್ರಿ 10.30ಕ್ಕೆ ನಂದೂರ (ಬಿ) ಗ್ರಾಮದ ಮಲಯಶಾಂತೇಶ್ವರ ನಾಟ್ಯ ಸಂಘದಿಂದ ಮಗ ಹೊದರು ಮಾಂಗಲ್ಯ ಬೇಕು ನಾಟಕ ಪ್ರದರ್ಶನಗೊಳ್ಳಲಿದೆ. ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಪುನಿತರಾಗಬೇಕು ಎಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.