ಕಲಬುರಗಿ: ಸಂವಿಧಾನದ ಉಳುವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಎಂ. ಹೊಸಮನಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ರಾಜ್ಯ ಸರ್ಕಾರ ಒಳ ಮೀಸಲಾತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ರಾಜಕೀಯ ಗಿಮಿಕ್ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾಗ 50 ವಾಹನಗಳ ಮಂಜೂರಾತಿ ಆಗಿದ್ದವು. ಈಗ ಕೇವಲ 2 ಕೂಡ ಆಗುತ್ತಿಲ್ಲ. ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ದೊರೆಯುತ್ತಿಲ್ಲ ಎಂದು ಆಪಾದಿಸಿದರು.
ಚಿತ್ತಾಪುರ ಮತಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕ್ ಖರ್ಗೆ ಅವರ ಹವಾ ಜೋರಾಗಿದೆ. ರೌಡಿ ಶೀಟರ್ ಮಣಿಕಂಠ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ಪಕ್ಷದ ಧೋರಣೆ ತಿಳಿಸಿಕೊಡುತ್ತದೆ. ಅಭಿವೃದ್ಧಿ ನೋಡಿ ಜನ ಮತ ಹಾಕಬೇಕು ಎಂದರು.
ಮಿಲಿಂದ ಸನಗುಂದಿ, ಭರತ್ ಬುಳ್ಳಾ, ಕಾಶಿನಾಥ ದೀವಟಗಿ, ರಮೇಶ, ಸಿ.ಎಚ್. ನಗನೂರ ಇತರರಿದ್ದರು.