ಕಲಬುರಗಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ ರಾಷ್ಟ್ರೀಯದ್ಯಂತ ಗಮನ ಸೇಳೆಯುತ್ತಿದೆ. ಅದರಂತೆ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ತವರೂರಾದ ಕಲಬುರಗಿಯ ಉತ್ತರ ಮತಕ್ಷೇತ್ರದಲ್ಲಿ ದಿನಕೊಂದು ಕುತುಹಲ ಕಾರಿ ಬೆಳವಣಿಗೆ ನಡೆಯುತ್ತಿದೆ.
ಮಾಜಿ ಮಹಾಪೌರರಾದ ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ ಸಜ್ಜಾದ್ ಅಲಿ ಇನಾಮದಾರ್ ಅವರು ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರೆದು ಹಲವು ಬೆಂಬಲಿಗರೊಂದಿಗೆ ಜೆಡಿಎಸ್ ಅಭ್ಯರ್ಥಿ ನಾಸಿರ್ ಹುಸೈನ್ ಉಸ್ತಾದ್ ಅವರಿಗೆ ಬೆಂಬಲಿಸಿ ಸೇರ್ಪಡೆಯಾಗಿ ಉತ್ತರ ಮತಕ್ಷೇತ್ರದ ರಾಜಕೀಯ ಚುನಾವಣಾ ಚದುರಂಗದಲ್ಲಿ ಕುತೂಹಲ ಮೂಡಿಸಿ ಕಣದಲ್ಲಿ ಇರುವ ಅಭ್ಯರ್ಥಿಗಳ ಗಮನ ಸೇಳೆದಿದ್ದಾರೆ.
ಕಲಬುರಗಿ ಉತ್ತರ ಮತಕ್ಷೇತ್ರದ ಹಾಲಿ ಶಾಸಕಿ ಕನೀಜ್ ಫಾತೀಮಾ, ಬಿಜೆಪಿ ಅಭ್ಯರ್ಥಿ ಚಂದ್ರಕಾಂತ (ಚಂದು) ಪಾಟೀಲ್ ಹಾಗೂ ಜೆಡಿಎಸ್ ಅಭ್ಯರ್ಥಿ ನಾಸಿರ್ ಹುಸೈನ್ ಉಸ್ತಾದ್ ಸೇರಿ 10 ಪಕ್ಷೇತರ ಅಭ್ಯರ್ಥಿ ಕಣದಲ್ಲಿ ಇದ್ದಾರೆ.
ಜೆಡಿಎಸ್ ಸೇರ್ಪಡೆಯಾಗಿ ಮಾತನಾಡಿದ ಸಜ್ಜಾದ್ ಅಲಿ ಇನಾಮದಾರ್ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆಸುವುದರಿಂದ ಮುಸ್ಲಿಂ ಓಟು ಒಡೆಯುವ ಆರೋಪ ನನ್ನ ಮೇಲೆ ಇರಬಾರದೆಂದು ನಾನು ಜಾತ್ಯತೀತ ಮತ್ತು ಸಮುದಾಯದ ಬಗ್ಗೆ ಕಾಳಜಿ ಇರುವ ಜೆಡಿಎಸ್ ಅಭ್ಯರ್ಥಿ ನಾಸಿರ್ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ನಲ್ಲಿ ಬೆಳೆದುಬಂದ ನನಗೆ ಶಾಸಕ ಕನೀಜ್ ಫಾತೀಮಾ ಅವರು ಶಾಸಕಿಯ ಸ್ಥಾನವನ್ನು ಸೂಕ್ತವಾಗಿ ನಿಭಾಯಿಸದೇ ಅವರು ಗುತ್ತಿಗೆದಾರಗಳ ಹಿತಾಸಕ್ತಿಗಳ ಅನುಗುಣವಾಗಿ ಕೆಲಸ ಮಾಡುತ್ತಿರುವುದರಿಂದ ದೂರ ಉಳಿದಿದ್ದೇನೆ. ಶಾಸಕಿ ಕನೀಜ್ ಫಾತೀಮಾ ಕೆಲವ ಗುತ್ತಿಗೆದಾರ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಸ್ಲಿಂ ಸಮುದಾಯದ ಏಳಿಗೆಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ರಾಜಕೀಯ ಜೀವನ ತ್ಯಾಗ ಮಾಡುತ್ತಿದ್ದೇನೆ ಎಂದು ತಿಳಿಸಿದರು.