ಸಸಿಗಳನ್ನು ಮಕ್ಕಳಂತೆ ಸಂರಕ್ಷಿಸಿ ಕಾಳಜಿಯಿಂದ ಸಂರಕ್ಷಿಸಿ

0
17

ಶಹಾಬಾದ: ಸಸಿಗಳನ್ನು ಹಚ್ಚುವುದರ ಜೊತೆಗೆ ಅವುಗಳನ್ನು ಮಕ್ಕಳಂತೆ ಸಂರಕ್ಷಿಸಿ ಕಾಳಜಿಯಿಂದ ಬೆಳೆಸಬೇಕೆಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಮುಜಾಮಿಲ್ ಅಲಂ ಹೇಳಿದರು.

ಅವರು ನಗರಸಭೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ನನ್ನ ಲೈಫ್ ನನ್ನ ಸ್ವಚ್ಛ ನಗರ, ಜನತಾ ಜೀವ ವೈವಿಧ್ಯಮಯ ಮಾಸಾಚರಣೆ ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಮರಗಳನ್ನು ಬೆಳೆಸಿ ಸೂಕ್ತವಾದ ಪೋಷಣೆ ಮಾಡಿದರೆ ಕಾಲಕಾಲಕ್ಕೆ ಮಳೆಯಾಗುತ್ತದೆ.ಉತ್ತಮ ಗಾಳಿ ನೀಡುತ್ತದೆ. ಆದರೆ ಇಂದು ದೇಶದ ಎಲ್ಲಾ ಕಡೆ ಮುಂಗಾರು ಮಳೆ ಸರಿಯಾದ ವೇಳೆಗೆ ಬರದೇ ಇರುವದಕ್ಕೆ ಈ ಪರಿಸರ ನಾಶವೇ ಕಾರಣ. ಕೇವಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿಕೊಂಡು ಕೂಡದೇ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಆ ಘೋಷ ವಾಕ್ಯಕ್ಕೆ ಮನ್ನಣೆ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರದೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಪರಿಸರ ಸಮತೋಲನ ಕಾಪಾಡಲು ನಾವು ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆಸುವ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು. ಅಲ್ಲದೇ ಪರಿಸರ ಸಂರಕ್ಷಣೆಯಲ್ಲಿ ಸುಂದರಲಾಲ ಬಹುಗುಣ ಹಾಗೂ ಸಾಲು ಮರದ ತಿಮ್ಮಕ್ಕರ ಶ್ರಮ ಬಹಳಷ್ಟಿದೆ ಎಂದರು. ಅಲ್ಲದೇ ನಗರ ಪ್ರದೇಶದಿಂದ ಹಳ್ಳಿ ಹಳ್ಳಿಗಳಿಗೂ ಈ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ್, ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಆರೋಗ್ಯ ನಿರೀಕ್ಷಕರಾದ ಮೋಹಿಯೋದ್ದಿನ್,ಶಿವರಾಜಕುಮಾರ, ಹುಣೇಶ ದೊಡ್ಡಮನಿ, ಈರಣ್ಣ ಕುರಿ, ಅನೀಲಕುಮಾರ ಹೊನಗುಂಟಿ, ಭೀಮು, ಪ್ರವೀಣ, ಜಾನ್,ನಿರಂಜನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here