ಕಲಬುರಗಿ: ಹೆರಿಗೆ ನೋವಿನಿಂದ ನರಳುತಿದ್ದ ಗರ್ಭಿಣಿಗೆ 108 ಆಂಬುಲೆನ್ಸ್ ನಲ್ಲೆ ಹೆರಿಗೆ ಯಾಗಿರುವ ಘಟನೆ ಸೋಮವಾರ ಜಿಲ್ಲೆಯ ಜೀವರ್ಗಿ ತಾಲ್ಲೂಕಿನ ಮಾವನೂರ್ ಕ್ರಾಸ್ ಹತ್ತಿರ ನಡೆದಿದೆ.
ಕಾಶರ್ಬೋಸಾಗ ಗ್ರಾಮದ ಯಾಸಿನ್ ಬೇಗಮ್ ಅವರಿಗೆ ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂದಿತ್ತು. ತಕ್ಷಣ ಯಡ್ರಾಮಿಯ EMRI GREEN HEALTH SARVICES 108 ಆಂಬುಲೆನ್ಸ್ ಮೂಲಕ ತಾಲೂಕ ಸರ್ಕಾರಿ ಆಸ್ಪತ್ರೆಗೆ ಜೇವರ್ಗಿಗೆ ದಾಖಲಿಸಲು ಕರೆದೋಯ್ಯಲಾಗುತಿತ್ತು. ಮಾವನೂರ್ ಕ್ರಾಸ್ ಹತ್ತಿರ ಆಂಬುಲೆನ್ಸ್ ಚಲಿಸುತ್ತಿದ್ದ ಸಂದರ್ಭದಲ್ಲಿ ನೋವು ಹೆಚ್ಚಾಗಿ ಆಂಬುಲೆನ್ಸ್ ನಲ್ಲೆ ಯಾಸಿನ್ ಬೇಗಮ್ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದರೆ.
ಆಂಬುಲೆನ್ಸ್ ವಾಹನದಲ್ಲಿದ್ದ ತುರ್ತು ವೈದ್ಯಕೀಯ ಸಿಬ್ಬಂದಿ ಶಿವಕುಮಾರ್ ಮತ್ತು ಚಾಲಕ ತಿಪ್ಪಣ್ಣ ಹೆಚ್ಚು ಕಾಳಜಿ ವಹಿಸಿ ಹೆರಿಗೆಗೆ ಸಹಕರಿಸಿದರು. ಹಿಚ್ಚಿನ ಚಿಕಿತ್ಸೆಗಾಗಿ ತಾಯಿ ಮಗುವನ್ನು ಜೇವರ್ಗಿ ತಾಲೂಕ ಆಸ್ಪತ್ರೆಗೆ ದಾಖಳಿಸಲಾಗಿದೆ.