ಕರ್ನಾಟಕದಲ್ಲಿ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ: ಪ್ರಿಯಾಂಕ್ ಖರ್ಗೆ ತಿರುಗೇಟು

0
26

ಕಲಬುರಗಿ: ನಮ್ಮ ಸರ್ಕಾರ ಬಂದು ತಿಂಗಳಾಗಿದೆ ಅಷ್ಟೇ, ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಅಷ್ಟೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾಜಿ ಗೃಹ ಸಚಿವ ಹಾಗೂ ಶಾಸಕ ಅರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಅಕ್ರಮ ಮರುಳು ಸಾಗಾಣಿಕೆ ಟ್ರಾಕ್ಟರ್ ಗೆ ಪೊಲೀಸ್ ಪೇದೆ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮಾತನಾಡಿದ್ದ ಅರಗ ಜ್ಞಾನೇಂದ್ರ ಮರುಳು ಮಾಫಿಯಾದ ದುಷ್ಕರ್ಮಿಗಳಿಂದ ಪೊಲೀಸ್ ಕಾನ್ಸಟೇಬಲ್ ಹತ್ಯೆ ಘಟನೆ ಅತ್ಯಂತ ಖಂಡನೀಯವಾಗಿದ್ದು ರಾಜ್ಯದಲ್ಲಿ ದುಷ್ಟಶಕ್ತಿಗಳು ಮತ್ತೆ ತಲೆ ಎತ್ತುತ್ತಿರುವುದರ ಲಕ್ಷಣವಾಗಿದೆ ಎಂದು ಹೇಳಿಕೆ ನೀಡಿದ್ದರು.

Contact Your\'s Advertisement; 9902492681

ಮಾಜಿ ಗೃಹ ಸಚಿವರ ಈ ಹೇಳಿಕೆಗೆ ಟಕ್ಕರ್ ಕೊಟ್ಟಿರುವ ಖರ್ಗೆ ಕಲಬುರಗಿ ಅಷ್ಟೇ ಅಲ್ಲ ರಾಜ್ಯವನ್ನು ದುಷ್ಟಶಕ್ತಿ ಮುಕ್ತ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

‘ ಮಾನ್ಯ ಅರಗ ಜ್ಞಾನೇಂದ್ರ ಅವರೇ ದುಷ್ಟಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ಅಂದಹಾಗೆ, ಪೇದೆ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ’ ‘ ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿಯರಿಗೆ ವಂಚಿಸಿ ಬ್ಲಾಕ್ಮೇಲ್ ಮಾಡಿದ ದುಷ್ಟನ ಬಗ್ಗೆ ತಾವು ಮಾತನಾಡುವುದಿಲ್ಲವೇಕೆ? ಆತ ಹಿಂದೆ ನಿಮ್ಮ ಮನೆಯ ಮೇಲೆ ದಾಳಿ ಮಾಡಿದ ದುಷ್ಟಶಕ್ತಿಯ ಗುಂಪಿಗೆ ಸೇರಿದವನು ಎಂಬುದಕ್ಕೆ ಭಯವೇ ‘ ‘ ನಮ್ಮ ಸರ್ಕಾರ ಬಂದು ತಿಂಗಳಾಗಿದೆ ಅಷ್ಟೇ ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಅಷ್ಟೇ ಅಲ್ಲ ಕರ್ನಾಟಕದಲ್ಲಿ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ.

ಕಲಬುರ್ಗಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತ ಪೇದೆಯನ್ನು ಕೊಲೆ ಮಾಡಿದ್ದಲ್ಲದೇ, ಬಂಧಿಸಿದ ಪೊಲೀಸರಿಗೆ ಚಾಕು ಹಾಕಲು ಹೋಗಿ ಗುಂಡೇಟು ತಿಂದು ಬಂಧಿಯಾಗಿದ್ದಾನೆ. ತಾವು ಆತನಿಗೆ ಜಾಮೀನು ನೀಡಿ ಬಿಡಿಸಲು ಪ್ರಯತ್ನಿಸದಿದ್ದರೆ ಸಾಕು ಅದೇ ತಾವು ಕರ್ನಾಟಕಕ್ಕೆ ಮಾಡುವ ಉಪಕಾರ’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here