ವಿಜ್ಞಾನ-ತಂತ್ರಜ್ಞಾನ ಕಲಿಕಾ ಆಸಕ್ತಿ ಬೆಳೆಸಿಕೊಳ್ಳಿ: ಶಿಕ್ಷಣತಜ್ಞ ದೇವಿಂದ್ರಪ್ಪ

0
30

ಕಲಬುರಗಿ: ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನದ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣತಜ್ಞ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.

ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ಪ್ರಯೋಗಾಲಯದಲ್ಲಿ ವಿಜ್ಞಾನದ ವಿವಿಧ ಕಲಿಕಾಸಾಧನಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ವಿತರಿಸಿ, ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಹೆಚ್ಚು ಆಕರ್ಷಣೆಗಳನ್ನು ಹೊಂದಬೇಕು. ವಿದ್ಯಾರ್ಥಿಗಳು ಧೈರ್ಯ ಬೆಳಸಿಕೊಳ್ಳಿ, ಸಂಶೋಧನೆ ತಾನೆತಾನಾಗಿ ಬರುತ್ತದೆ. ವಿದ್ಯಾರ್ಥಿಗಳು ತಾವೇ ತಯಾರಿಸಿದ ಉಪಕರಣಗಳನ್ನು ಮಾಡಿ ಉಪಯೋಗಿಸಿದಾಗ ವಿಜ್ಞಾನ ಬೆಳೆಯುವುದು. ಇದರಿಂದ ಭವಿಷ್ಯದ ಎಷ್ಟೋ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು.

Contact Your\'s Advertisement; 9902492681

ಮೂಲ ವಿಜ್ಞಾನವನ್ನು ಮಕ್ಕಳು ಕಲಿಯುವುದರಿಂದ ಬಹಳಷ್ಟು ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸುಲಭವಾಗುತ್ತದೆ. ವೈಜ್ಞಾನಿಕ ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿರಂತರ ಕ್ರೀಯಾಶೀಲತೆಯ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ನವ್ಯ ಮಾದರಿಯ ಆವಿಷ್ಕಾರಗಳನ್ನು ಮಾಡುವ ಅಗತ್ಯವಿದೆ. ವಿಜ್ಞಾನ ಕ್ಷೇತ್ರದ ಪ್ರಗತಿಗೆ ವಿದ್ಯಾರ್ಥಿಗಳಾದವರು ತಮ್ಮದೇ ಆದ ಕೊಡುಗೆಯನ್ನು ನೀಡುವುದರ ಮೂಲಕ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ತಾಂತ್ರಿಕ ವ್ಯವಸ್ಥೆಯು ಹಿಂದೆಂದಿಗಿಂತಲೂ ಬಹಳಷ್ಟು ಅಭಿವೃದ್ಧಿ ಹೊಂದಿದ್ದು, ಬೇಕಾದಷ್ಟು ಸೌಲಭ್ಯಗಳು ಹೇರಳವಾಗಿದ್ದರೂ ಸಂಶೋಧನಾತ್ಮಕ ಮನೋಭಾವದವರು ವಿರಳರಾಗಿದ್ದಾರೆ.

ವಿಜ್ಞಾನ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದರಲ್ಲಿ ಬೇಕಾದ ವಿಷಯದ ಮೇಲೆ ಸಂಶೋಧನೆ ಮಾಡಲು ಸಾಧ್ಯವಿದೆ. ಭವಿಷ್ಯಕ್ಕಾಗಿ ವಿಜ್ಞಾನ ಇರಬೇಕೇ ಹೊರತು, ವಿನಾಶಕ್ಕಾಗಿ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮೊಬೈಲ್‍ನಿಂದ ಹಿಡಿದು ರಾಸಾಯನಿಕಗಳವರೆಗೆ ಎಲ್ಲ ಆವಿಷ್ಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಇಂದು ಜೀವಜಗತ್ತು ಅಪಾಯಕ್ಕೆ ಸಿಲುಕಿದೆ.

ಬೆಳೆಯುವ ಮನಸ್ಸಿನ ಯುವಜನತೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವ ವಾತಾವರಣ ಸಮಾಜದಲ್ಲಿ ನಿರ್ಮಾಣ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಆದರ್ಶ ಪ್ರಶಿಕ್ಷಣಾರ್ಥಿಗಳಾದ ಆಶಾ ಎಂ, ಭಾಗ್ಯಶ್ರೀ ಪಾಟೀಲ್, ಅಶ್ವಿನಿ, ಶರಣಮ್ಮ, ಶಿವಾನಿ, ಸುಷ್ಮಾ, ರೇಣುಕಾ ಸೇರಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here