ಕಲಬುರಗಿ; ಅನಿರೀಕ್ಷಿತವಾಗಿ CC ಶಾಲೆ ಮತ್ತು 1982 Aided ಶ್ರವಣದೋಷ ಮಕ್ಕಳ ವಸತಿ ಶಾಲೆ ಹಾಗೂ ಅಂಧ ಬಾಲಕೀಯರ ವಸತಿ ಶಾಲೆಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹಾಗೂ ಅಂಧ ಮಕ್ಕಳ ಶಾಲೆಯ ಪ್ರಭಾರಿ ಅಧೀಕ್ಷಕರಾಗಿರುವ ಸಾದಿಕ್ ಹುಸೇನ್ ಖಾನ್ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ಹಾಗೂ ಸಂಸ್ಥೆಯ ಮೂಲ ಸೌಕರ್ಯ ಪರಿಶೀಲನೆ ನಡೆಸಿದ್ದಾರೆ.
ಶಾಲೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿಶೇಷ ಶಿಕ್ಷಣದ ಕಲಿಕಾ ಚಟುವಟಿಕೆಗಳನ್ನು ಆಹಾರದ ಗುಣಮಟ್ಟ ಮತ್ತು ಶುಚಿತ್ವ ವನ್ನು ಗಮನಿಸಿ ಮಕ್ಕಳೊಂದಿಗೆ ಆಹಾರ ಸೇವನೆ ಮಾಡುವ ಮೂಲಕ ಆಹಾರ ಗುಣಮಟ್ಟ ಪರಿಶೀಲನೆ ಮಾಡಿದರು.