ಸೊನ್ನಗ್ರಾಮದಲ್ಲಿ ಶ್ರೀರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ನಾಳೆ

0
55

ಜೇವರ್ಗಿ; ತಾಲೂಕಿನ ಸುಕ್ಷೇತ್ರ ಸೊನ್ನಗ್ರಾಮದಲ್ಲಿ ಶ್ರಾವಣಮಾಸದ ನಡುವಿನ ಸೋಮವಾರ ನಿಮಿತ್ತ ನಾಳೆ ಶ್ರೀರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಬಹು ವಿಜ್ರೃಂಬಣೆಯಿಂದ ಜರುಗಲಿದೆ ಎಂದು ಗ್ರಾಮದ ಸಮಸ್ಥ ಸಧ್ಬಕ್ತರು ಮತ್ತು ಭಜನಾ ಮಂಡಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ತ್ ಜಿಲ್ಲಾ ಗೌರವ ಕಾರ್ಯದರ್ಶಿ ಶ್ರೀಮಲ್ಲಿಕಾರ್ಜುನ ರೋಣದ ರವರು ತಿಳಿಸಿದ್ದಾರೆ.

ಬೆಳಿಗ್ಗೆ 5 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಮೂರ್ತಿಗೆ ರುದ್ರಾಭೀಷೇಕ ಮತ್ತು 9ಗಂಟೆಗೆ ಪಲ್ಲಕ್ಕಿಮೆರವಣಿಗೆ ಈ ಮೆರವಣಿಗೆಯಲ್ಲಿ ಪುರವಂತರು ಡೊಳ್ಳಿನ ಸೇವೆ ಭಾಜಿ ಖಣಿಹಲಿಗೆ  ಮತ್ತು ಭಜನಾ ಮಾಡುತ್ತ  ವಾಧ್ಯ ವೈಭೋಗಗಳೊಂದಿಗೆ ಊರಿನ ಪ್ರಮುಖ ಬೀದಿ ಬಜಾರ ಓಣಿಯಿಂದ  ಊರಿನ ಅಗಸಿ ಮಾರ್ಗವಾಗಿ ಗಿರಣಿ ಓಣಿ. ಶ್ರೀಮರಗಮ್ಮ ದೇವಿ ಗುಡಿ ಮಾರ್ಗವಾಗಿ ಶ್ರೀ ರೇವಣಸಿದ್ದೇಶ್ವರ ಗುಡಿಯ ಹೊಲದಲ್ಲಿ ಒಂದು ಗಂಟೆಗೆ ತಲಪುವುದು ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರು ಮತ್ತು ಎಲ್ಲಾ ಸಮಾಜದ ಭಾಂಧವರು ಭಾಗವಹಿಸುವರು.

Contact Your\'s Advertisement; 9902492681

ಸಂಜೆ 6 ಗಂಟೆಗೆ ಪಲ್ಲಕ್ಕಿಯು ವಾಧ್ಯವೈಭೋಗಗಳೊಂದಿಗೆ ಮಾಲಗಂಬ ಕಟ್ಟೆಗೆ ಬಂದು ಕೂಡುವುದು ಆ ದಿನ ರಾತ್ರಿ ಭಜನೆ ಮತ್ತು ಡೊಳ್ಳಿನ ಪದಗಳು ಹೀಗೆ ಜಾನಪದ ಕಲೆಗಳಿಂದ ಜಾಗರಣೆ ಮಾಡುವುದು  ಮತ್ತು ಮುಂಜಾನೆ 6ಗಂಟೆಗೆ ಮಂಗಳವಾರ ದಿನದಂದು ಪಲ್ಲಕ್ಕಿಯು ಗುಡಿಗೆ ತಲುಪುವುದು ಮಹಾಮಂಗಳಾರತಿ ಆಗುವುದು.

ಆದಕಾರಣ ಕಲಬುರಗಿ ಜಿಲ್ಲೆಯ ಮತ್ತು ಜೇವರಗಿ ತಾಲೂಕಿನ ಭಕ್ತರು ಆಗಮಿಸಿ ಶ್ರೀರೇವಣಸಿದ್ದೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here