Saturday, July 13, 2024
ಮನೆಬಿಸಿ ಬಿಸಿ ಸುದ್ದಿಸುರಪುರ : ತಾಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮಕ್ಕೆ ಚಾಲನೆ

ಸುರಪುರ : ತಾಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮಕ್ಕೆ ಚಾಲನೆ

ಸುರಪುರ: ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿ, ರಾಜ್ಯ ಸರಕಾರ ಈ ಸಾಲಿನ ಆಯ-ವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಸಸ್ಯ ಶ್ಯಾಮಲಾ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಜಾಗೃತಿ ಹಾಗೂ ಕಾಡುಗಳ ಸಂರಕ್ಷಣೆಯ ಕಾಳಜಿಯನ್ನು ಬೆಳೆಸುತ್ತದೆ ಎಂದರು.

ಗಿಡ ಮರಗಳನ್ನು ಬೆಳೆಸುವದರಿಂದ ಪರಿಸರ ಸಂರಕ್ಷಣೆ ಸಾಧ್ಯ ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದ ಅವರು ಸರಕಾರದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ವಿನೂತನವಾಗಿದ್ದು ಒಂದು ವರ್ಷದಲ್ಲಿ 50ಲಕ್ಷ ಸಸಿಗಳನ್ನು ಬೆಳೆಸುವ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದ ಯಶಸ್ವಿಗೆ ಶಾಲೆಗಳ ಮುಖ್ಯಸ್ಥರು,ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು,ಪೋಷಕರು ಹಾಗೂ ಸ್ವಯ ಸೇವಾ ಸಂಸ್ಥೆಗಳ ಸಹಕಾರ ತುಂಬಾ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ಶಹಾಬಾದಕರ ಮಾತನಾಡಿ ಹಸಿರೇ ಉಸಿರು ಸಕಲ ಜೀವಿಗಳಿಗೆ ಏಕೈಕ ಆಶ್ರಯ ತಾಣವಾಗಿರುವ ನಾವು ವಾಸಿಸುವ ಭೂಮಿಯ ಮೇಲೆ ಉತ್ತಮ ಪರಿಸರ ನಿರ್ಮಿಸಲು ಈ ಕಾರ್ಯಕ್ರಮ ಪೂರಕವಾಗಿದೆ ವಿದ್ಯಾರ್ಥಿಗಳು ಆಸಕ್ತಿಯಿಂದ ಗಿಡಮರಗಳನ್ನು ಬೆಳೆಸುವ ಮೂಲಕ ಶಾಲಾ ವಾತಾವರಣವನ್ನು ಸಸ್ಯ ಶ್ಯಾಮಲವನ್ನಾಗಿ ಮಾಡುವಂತೆ ಹೇಳಿದರು.

ಅರಣ್ಯಾಧಿಕಾರಿ ಸುನೀಲಕುಮಾರ ಮಾತನಾಡಿ ಶಾಲೆಗಳ ಮೈದಾನಕ್ಕೆ ಅನುಗುಣವಾಗಿ ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಸಸ್ಯಗಳನ್ನು ವಿತರಿಸಲಾಗುವುದು ಮಕ್ಕಳು ಗಿಡಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಎಸ್‍ಡಿಎಂಸಿ ಅಧ್ಯಕ್ಷ ಶಕೀಲ್ ಅಹ್ಮದ ಅಧ್ಯಕ್ಷತೆ ವಹಿಸಿದ್ದರು,ತಾಪಂ ಇಓ ಬಸವರಾಜ ಸಜ್ಜನ್, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ, ಅಕ್ಷರ ದಾಸೋಹ ಅಧಿಕಾರಿ ಯಲ್ಲಪ್ಪ ಚಂದನಕೇರಿ, ಬಿಆರ್‍ಪಿ ಮಹಾಂತೇಶ ಕಂದಗಲ್, ಸಿಆರ್‍ಪಿ ಮುಜಾಹಿದ ಗುಣಕಿ, ಪ್ರ.ಗು ಸೋಮರಡ್ಡಿ ಮಂಗಿಹಾಳ, ಎಪಿಎಫ್‍ನ ಅನ್ವರ್ ಜಮಾದಾರ, ಪ್ರಮುಖರಾದ ಖಾಜಾ ಖಲೀಲ್ ಅಹ್ಮದ ಅರಕೇರಿ, ಅಬೀದ್ ಹುಸೇನ ಪಗಡಿ ಇತರರಿದ್ದರು. ಸಿಆರ್‍ಪಿ ಶಿವುಕುಮಾರ ನಿರೂಪಿಸಿದರು ಪ್ರ.ಗು.ಜಾಕೀರ ಹುಸೇನ ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular