ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್: ಎಐಡಿವೈಒ ವಿರೋಧ

0
32

ಶಹಾಬಾದ: ರಾಜ್ಯದಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ಮುಂದಾಗಿರುವ ಸರಕಾರದ ನಿರ್ಧಾರಕ್ಕೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಅಧ್ಯಕ್ಷ ಜಗನ್ನಾಥ ಎಸ್.ಎಚ್. ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ 389 ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ಖಂಡಿಸುತ್ತೇವೆ. 3000 ಜನಸಂಖ್ಯೆಯ ಗ್ರಾಪಂಗಳಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕೂಡ ಮಧ್ಯದ ಅಂಗಡಿಗಳನ್ನು ತೆರೆಯುವ ಉದ್ದೇಶ ಹೊಂದಿದೆ.ರಾಜ್ಯ ಸರಕಾರ ಏನು ಮಾಡಲು ಹೊರಟಿದೆ ತಿಳಿಯುತ್ತಿಲ್ಲ.

Contact Your\'s Advertisement; 9902492681

ಮದ್ಯದ ಅಂಗಡಿಗಳು ಸಾಕಷ್ಟು ಪ್ರಮಾಣದಲ್ಲಿವೆ.ಅನಧಿಕೃತವಾಗಿ ಸಾಕಷ್ಟು ನಡೆಯುತ್ತಿವೆ.ಇದರಿಂದಲೇ ಸಾಕಷ್ಟು ತೊಂದರೆ ಸಾರ್ವಜನಿಕರು ಅನುಭವಿಸುತ್ತಿದ್ದಾರೆ.ಮಹಿಳೆಯರು ಇದನ್ನು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ.ಗಾಂಧೀಜಿಯವರ ಮಧ್ಯ ಮುಕ್ತ ಭಾರತದ ಕನಸು ಏನಾಯಿತು ಎಂಬುದು ಸರಕಾರ ತಿಳಿಸಬೇಕಿದೆ. ಇದು ಅತ್ಯಂತ ಜನವಿರೋಧಿ ಕ್ರಮವಾಗಿದ್ದು, ಕೂಡಲೇ ಈ ಪ್ರಸ್ತಾವನೆ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here