ಶಹಾಬಾದ: ಅದ್ದೂರಿಯಿಂದ ಜರುಗಿದ ಬನ್ನಿ ಮುರಿಯುವ ಕಾರ್ಯಕ್ರಮ

0
35

ಶಹಾಬಾದ: ನಗರದಲ್ಲಿ ವಿಜಯ ದಶಮಿ ಹಬ್ಬವನ್ನು ವಿಶ್ವಹಿಂದು ಪರಿಷತ್ ವತಿಯಿಂದ ಮಂಗಳವಾರದಂದು ಬನ್ನಿ ಮುರಿಯುವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.

ಸಾಯಂಕಾಲ ಜಗದಂಬಾ ಮಂದಿರದಿಂದ ಶರಣಬಸವೇಶ್ವರ ದೇಸ್ಥಾನದವರೆಗೆ ಎಲ್ಲಾ ಕಾರ್ಯಕರ್ತರು ಹೋಗಿ ಬನ್ನಿಯನ್ನು ಮುರಿದರು.ನಂತರ ನಾಡದೇವಿ ಭಾವಚಿತ್ರದ ಮೆವಣಿಗೆಗೆ ಚಾಲನೆ ನೀಡಿ ನೆಹರು ವೃತ್ತ, ರೇಲ್ವೆ ನಿಲ್ದಾಣ, ಮಜ್ಜಿದ್ ಚೌಕ್, ತ್ರೀಶೂಲ ಚೌಕ್,ಶ್ರೀರಾಮ ವೃತ್ತ, ಶಾಸ್ತ್ರಿ ವೃತ್ತ , ಚೌಕ್, ಸುಭಾಷ ಮೂಲಕ ಭಾರತ್ ಚೌಕನ ಸಮಾವೇಶ ಸ್ಥಳಕ್ಕೆ ಬಂದು ತಲುಪಿತು.

Contact Your\'s Advertisement; 9902492681

ನಗರದ ಮುಖ್ಯ ರಸ್ತೆಗಳಲ್ಲಿ ಯುವಕರ ಕುಣಿತ ಮೆರವಣಿಗೆಗೆ ರಂಗು ತಂದು ಕೊಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಹಿಂದು ಸಮಾಜದ ಬಾಂಧವರು, ಸಂಘಟನೆಗಳ ಮುಖಂಡರು, ಯುವಜನರು, ಮಕ್ಕಳು ಮೆರವಣಿಗೆಗೆ ಕಳೆ ತಂದರು. ನಾಡದೇವಿಯ ಬೃಹತ್ ಮೆರವಣಿಗೆಯಲ್ಲಿ ಖಡ್ಗಧಾರಿ ಯುವಕರು ಗಮನ ಸೆಳೆದರು. ಧರ್ಮಾಭಿಮಾನ, ದೇಶಪ್ರೇಮ ಸಾರುವಂತಹ ಹಾಡುಗಳಿಗೆ ಕುಣಿಯುತ್ತ, ಬಣ್ಣವನ್ನು ಎರಚುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಹೆಜ್ಜೆ ಹಾಕುತ್ತಾ, ಜಯ ಘೋಷಣೆಗಳನ್ನು ಮೊಳಗಿಸುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದರು.

ನಗರದ ಎಲ್ಲಾ ರಸ್ತೆಗಳಲ್ಲಿ ಧ್ವಜಗಳಿಂದ ಶೃಂಗರಿಸಲಾಗಿತ್ತು. ನಂತರ ಮಾತನಾಡಿದ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಶಾಂತಿ, ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು. ಮೆರವಣಿಗೆಯಲ್ಲಿ ಎಲ್ಲಿಯೂ ಯಾರಿಂದಲೂ ಅಪಸ್ವರ ಬಾರದಂತೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದಲ್ಲದೇ,ದಸರಾ ಮಹೋತ್ಸವ ನಾಡಿನ ಜನತೆಗೆ ಸುಖ,ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ನುಡಿದರು.

ಗಣ್ಯರಾದ ನರೇಂದ್ರ ವರ್ಮಾ, ವಿಹಿಂಪ ಮಾಜಿ ಅಧ್ಯಕ್ಷ ಬಸವರಾಜ ಸಾತ್ಯಾಳ, ಗೌರವಾಧ್ಯಕ್ಷ ಚಂದ್ರಕಾಂತ ಗೊಬ್ಬೂರಕರ್, ಭೀಮರಾವ ಸಾಳುಂಕೆ, ಸುಭಾಷ ಜಾಪೂರ,ಶರಣಬಸಪ್ಪ ಕೋಬಾಳ, ಶಿವಾನಂದ ಪಾಟೀಲ, ಶರಣು ವಸ್ತ್ರದ್,ವಿರೇಶ ಬಂದೆಳ್ಳಿ,ಬಾನುದಾಸ ತುರೆ, ರಾಮು ಕುಸಾಳೆ, ನಿಂಗಣ್ಣ ಹುಳಗೋಳಕರ್, ಸೂರ್ಯಕಾಂತ ವಾರದ, ಯಲ್ಲಪ್ಪ ದಂಡಗುಲಕರ್,ಭೀಮಯ್ಯ ಗುತ್ತೆದಾರ,ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here