ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ “ಕ್ಯಾಂಪಸ್ ಟು ಕಾರ್ಪೋರೆಟ್ ಟ್ರೈನಿಂಗ್ ಪ್ರೊಗ್ರಾಮ್”

0
27

ಕಲಬುರಗಿ: 2022-2023ನೇ ಸಾಲಿನ ಅಲ್ಪಸಂಖ್ಯಾತರ ವಸತಿ ಶಾಲೆಯ ಅಂತಿಮ ವರ್ಷದ ವರ್ಷದ ವಿದ್ಯಾರ್ಥಿಗಳಿಗೆ “ಕ್ಯಾಂಪಸ್ ಟು ಕಾರ್ಪೋರೆಟ್ ಟ್ರೈನಿಂಗ್ ಪ್ರೊಗ್ರಾಮ್” ಅಲ್ಪಾವಧಿಯ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ಕೆ ಕರಂಗಿ ಅವರು ತಿಳಿಸಿದ್ದಾರೆ.

ತರಬೇತಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧಿಷ್ಟ್, ಸಿಖ್ ಹಾಗೂ ಪಾರ್ಸಿ ಸೇರಿದ ಅಲ್ಪಸಂಖ್ಯಾತರ ಸಮುದಾಯದ ವಸತಿ ಶಾಲೆಯ ಅಂತಮ ವರ್ಷದಲ್ಲಿ ಓದುತಿರುವ ವಿದ್ಯಾರ್ಥಿಗಳಿಗೆ ಕಾಲೇಜುದಿಂದ ವೃತ್ತಿ ಪಡೆಯಲು ಅನುಕೂಲಕ್ಕಾಗಿ ಅಲ್ಪಾವಧಿ ತರಬೇತಿ ನೀಡುವ ಈ ಕಾರ್ಯಕ್ರಮವಾಗಿದ್ದು, ನಾಲ್ಕು ಹಂತಗಳಲ್ಲಿ ಈ ತರಬೇತಿ ನಡೆಸಲಾಗುತ್ತಿದೆ.

Contact Your\'s Advertisement; 9902492681

ಕೋರ್ಸ್ ವಿಶೇಷತೆ: ಮೊದಲನೇದಾಗಿ ಕೌಶಲ್ಯಗಳ ಗುರುತಿಸುವ ವೇದಿಕೆ, ಅಗತ್ಯ ಸಂವಾಹನ ಕೌಶಲ್ಯಗಳ ಕಲಿಕೆ, ಕಾರ್ಪೋರೆಟ್ ವ್ಯವಸ್ಥೆ ಹಾಗೂ ವ್ಯವಹಾರದ ಮೌಲ್ಯಗಳು ಹಾಗೂ ಸಂದರ್ಶನದ ತಯಾರಿ ಹಾಗೂ ಸಂದರ್ಶನಕ್ಕಾಗಿ ಇರುವ ಪೂರ್ವ ಸಿದ್ಧತೆಗಳ ತಯಾರಿಗಳ ಕುರಿತು ತರಬೇತಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here